»   » ಕಲೆಕ್ಷನ್ ನಲ್ಲಿ 'RX ಸೂರಿ' ಸೂಪರ್ರೋ ಸೂಪರ್ರು

ಕಲೆಕ್ಷನ್ ನಲ್ಲಿ 'RX ಸೂರಿ' ಸೂಪರ್ರೋ ಸೂಪರ್ರು

Posted By:
Subscribe to Filmibeat Kannada

ದುನಿಯಾ ವಿಜಯ್ ಅಭಿನಯದ 'RX ಸೂರಿ' ಸಿನಿಮಾ ಹವಾ ಕರ್ನಾಟಕದ ತುಂಬೆಲ್ಲಾ ಜೋರಾಗಿದೆ. ಲಾಂಗು-ಮಚ್ಚುಗಳ ಅಬ್ಬರ ಇದ್ದರೂ, ಹರೆಯದ ಯುವಕರು ಚಿತ್ರಮಂದಿರದತ್ತ ಮುಗಿಬೀಳುತ್ತಿರುವುದಕ್ಕೆ ಕಾರಣ ಚಿತ್ರದಲ್ಲಿರುವ ನವಿರಾದ ಪ್ರೇಮ ಕಥೆ.

ಔಟ್ ಅಂಡ್ ಔಟ್ ಆಕ್ಷನ್ ಎಂಟರ್ ಟೈನರ್ ಆಗಿರುವ 'RX ಸೂರಿ' ಸಿನಿಮಾ ಕಲೆಕ್ಷನ್ ನಲ್ಲಿ ಹಿಂದೆ ಬಿದ್ದಿಲ್ಲ. ರಿಲೀಸ್ ಆದ ಮೂರು ದಿನಗಳಲ್ಲಿ 'RX ಸೂರಿ' ಕಲೆಕ್ಟ್ ಮಾಡಿರುವ ಮೊತ್ತ ಬರೋಬ್ಬರಿ 5 ಕೋಟಿ. ['RX ಸೂರಿ' ಬಗ್ಗೆ ದುನಿಯಾ ವಿಜಯ್ ಬಿಚ್ಚಿಟ್ಟ ರಹಸ್ಯ]


rx suri

ಹೌದು, ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, 'RX ಸೂರಿ' ಕಲೆಕ್ಷನ್ ನಲ್ಲಿ ಸೌಂಡ್ ಮಾಡ್ತಿದೆ. ನಿರ್ಮಾಪಕರು ಸೇಫ್ ಆಗಿದ್ದಾರೆ ಎನ್ನುತ್ತಿದೆ ಗಾಂಧಿನಗರ. ['RX ಸೂರಿ' ಚಿತ್ರಕಥೆಯ ದುರಂತ ನಾಯಕಿ ಈಕೆಯೇ.!]


ದುನಿಯಾ ವಿಜಯ್ ಜೊತೆ ಆಕಾಂಕ್ಷ ಜೋಡಿಯಾಗಿ ನಟಿಸಿರುವ ಚಿತ್ರ 'RX ಸೂರಿ'. ಬೆಂಗಳೂರಿನ ಅವಲಹಳ್ಳಿಯಲ್ಲಿ ನಡೆದ ನೈಜ ಕಥೆಯನ್ನಿಟ್ಟುಕೊಂಡು ಶ್ರೀಜೈ ನಿರ್ದೇಶಿಸಿರುವ ಚಿತ್ರ ಇದು.

English summary
Kannada Actor Duniya Vijay starrer Kannada movie 'RX Suri' Box Office Collection 5 crores in 3 days. Shri Jai has directed this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada