For Quick Alerts
  ALLOW NOTIFICATIONS  
  For Daily Alerts

  'ಜಾಕ್ಸನ್' ಡಬ್ಬಿಂಗ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟ

  By Rajendra
  |

  ದುನಿಯಾ ವಿಜಯ್ ಮುಖ್ಯಭೂಮಿಕೆಯಲ್ಲಿರುವ ಜಾಕ್ಸನ್ ಚಿತ್ರದ ಡಬ್ಬಿಂಗ್ ರೈಟ್ಸ್ ಚಿತ್ರೀಕರಣಕ್ಕೂ ಮುನ್ನವೇ ಮಾರಾಟವಾಗಿವೆ. ಅದರಲ್ಲೂ ಹಿಂದಿ ಭಾಷೆಗೆ ಡಬ್ಬಿಂಗ್ ರೈಟ್ಸ್ ಸೇಲ್ ಆಗಿರುವುದು ವಿಶೇಷ. ರು.14 ಲಕ್ಷಕ್ಕೆ ಡಬ್ಬಿಂಗ್ ರೈಟ್ಸ್ ಮಾರಾಟ ಮಾಡಲಾಗಿದೆ.

  ಈ ಚಿತ್ರವನ್ನು ವಿಜಿ ಅಭಿಮಾನಿಯೂ ಆಗಿರುವ ಸುಂದರ್ ಗೌಡ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಭಿನಯಿಸುವುದಕ್ಕಾಗಿ ವಿಜಿ ಪುಕ್ಕಟೆ ಕಾಲ್ ಶೀಟ್ ಕೊಟ್ಟಿದ್ದು, ಫೆಬ್ರವರಿ 17ರಿಂದ ಚಿತ್ರೀಕರಣ ಆರಂಭವಾಗಿದೆ.

  ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರ ಪೋಷಿಸಿದ್ದರು. ಗೋಕುಲ ಆಕ್ಷನ್ ಕಟ್ ಹೇಳಿದ ಚಿತ್ರವಿದು. ಮೂಲ ಚಿತ್ರದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ದುನಿಯಾ ವಿಜಯ್ ಇಮೇಜಿಗೆ ತಕ್ಕಂತೆ ತೆರೆಗೆ ತರಲಾಗುತ್ತಿದೆ.

  ಕುಡಿತದಿಂದ ಏನಲ್ಲಾ ಅನಾಹುತಗಳಾಗುತ್ತವೆ ಎಂಬ ಸಂದೇಶ ಕ್ಲೈಮ್ಯಾಕ್ಸ್ ನಲ್ಲಿ ಬಳಸಿಕೊಂಡಿದ್ದೇವೆ. ಜಂಗ್ಲಿ ಹಾಗೂ ಜಾನಿ ಮೇರಾ ನಾಮ್ ಚಿತ್ರಗಳಂತೆ ಜಾಕ್ಸನ್ ಚಿತ್ರವೂ ಕಾಮಿಡಿ ಎಂಟರ್ ಟೈನರ್ ಎಂದಿದ್ದಾರೆ ದುನಿಯಾ ವಿಜಯ್.

  ತಮಿಳಿನ 'ಇದಕುತಾನ ಆಸೈ ಪಟ್ಟೈ ಬಾಲಕುಮರ' ಚಿತ್ರದ ರೀಮೇಕ್ ಇದಾಗಿದ್ದು, ಕಾಮಿಡಿ ತುಂಬಿದ ಮನರಂಜನೆ ಸಿನೆಮಾ. ಒಂದು ಸಂದೇಶ ಸಹ ಚಿತ್ರ ಒಳಗೊಂಡಿದೆ. ಚಿತ್ರದ ನಿರ್ದೇಶಕ ಈ ಮೊದಲು ಸಂಕಲನಕರ ಆಗಿದ್ದ ಸನತ್ ಕುಮಾರ್.

  ಇವರು ಸಹ ಯೋಗರಾಜ್ ಭಟ್ ಗರಡಿಯ ಪ್ರತಿಭೆ. ರೀಮೇಕ್ ಚಿತ್ರ ಮಾಡುವಾಗ ಅವರು 12 ನಿಮಿಷಗಳನ್ನು ತುಂಡರಿಸಿ ಕನ್ನಡಕ್ಕೆ ತರುತ್ತಿದ್ದಾರೆ. ವಿಜಯ್ ಅವರಿಗೆ ನಾಯಕಿ ಆಗಿ ಪಾವನಿ ಇದ್ದಾರೆ. ಕಿರಣ್ ಅವರ ಸಂಭಾಷಣೆ, ವೀರ ಸಮರ್ಥ ಅವರ ಸಂಗೀತ, ಸೇಲ್ವಮ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ. (ಒನ್ಇಂಡಿಯಾ ಕನ್ನಡ)

  English summary
  Duniya Vijay's upcoming Sandalwood movie Jackson dubbing rights has apparently been sold for Rs 14 lakh to Bollywood. The movie is directed by Sanath Kumar is the director of 'Jakson', while Pawani plays female lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X