For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್ ಕಿವಿಮಾತು; ಪ್ರೇಮಿಗಳು ಕೇಳಲೇಬೇಕು

  By Harshitha
  |

  'ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು' ಅನ್ನುವ ಕಾಲವೊಂದಿತ್ತು. ಆದ್ರೀಗ, ಕಾಲ ಬದಲಾಗಿದೆ. ಪ್ರೀತಿ-ಪ್ರೇಮ ಅಂತ ತಲೆ ಕೆಡಿಸಿಕೊಳ್ಳೋರ ಸಂಖ್ಯೆ ಕಡಿಮೆ. ಈಗೇನಿದ್ದರೂ, ಮೀಟಿಂಗ್-ಡೇಟಿಂಗ್ ಮತ್ತು ಬ್ರೇಕಪ್ ಯುಗ.

  ಫಾಸ್ಟ್ ಟ್ರ್ಯಾಕ್ ನಲ್ಲಿರುವ ಈಗಿನ ಯುವ ಜನಾಂಗದಲ್ಲಿ ಮನಸ್ಸಿನಿಂದ ಪ್ರೀತಿ ಮಾಡುವವರು ಬಹಳ ವಿರಳ. ಅಂತವರ ಬಗ್ಗೆ ಅಪಾರ ಅಭಿಮಾನ ಹೊಂದಿರುವ ನಮ್ಮ 'ಕರಿಚಿರತೆ' ದುನಿಯಾ ವಿಜಯ್, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವವರನ್ನ ಭೇಟಿಯಾಗಲು ನಿರ್ಧರಿಸಿದ್ದಾರೆ. ['RX ಸೂರಿ' ಚಿತ್ರ ನೋಡಿ ಸೀಟಿ ಹೊಡೆದ ಶಿವಣ್ಣ]

  ಅಂತಹ ನಿಜವಾದ ಪ್ರೇಮಿಗಳನ್ನ ಮೀಟ್ ಮಾಡಿ, ಜೀವನವನ್ನ ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುವ ಬಗ್ಗೆ ಕಿವಿಮಾತು ಹೇಳಲು ದುನಿಯಾ ವಿಜಯ್ ನಿರ್ಧರಿಸಿದ್ದಾರೆ.

  ದುನಿಯಾ ವಿಜಯ್ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣ 'RX ಸೂರಿ' ಸಿನಿಮಾ. ''RX ಸೂರಿ' ಚಿತ್ರದ ನಾಯಕಿ ಪಾತ್ರದಲ್ಲಿ ತುಂಬಾ ಮುಗ್ಧತೆ ಇದೆ. ಇದು ಕಾಲ್ಪನಿಕ ಪಾತ್ರ ಅಲ್ಲ. ಬೆಂಗಳೂರಿನ ಹುಡುಗಿಯೊಬ್ಬಳ ನೈಜ ಕಥೆ. ಆಕೆ ಅಷ್ಟು ನಿಯತ್ತಿನಿಂದ ಪ್ರೀತಿ ಮಾಡ್ತಿದ್ರು. ಹುಡುಗ ರೌಡಿ ಅನ್ನೋದು ಗೊತ್ತಿದ್ದರೂ, ಮನಸ್ಸಿನ ಮಾತು ಕೇಳಿದ್ರು.'' [ಆರ್ ಎಕ್ಸ್ ಸೂರಿ : ರಕ್ತಸಿಕ್ತ ಬೊಂಬಾಟ್ ಲವ್ ಸ್ಟೋರಿ]

  ''ಕೊನೆಗೆ ಹುಡುಗ ತೀರಿಕೊಂಡಿದ್ದನ್ನ ಸಹಿಸಿಕೊಳ್ಳುವುದಕ್ಕೆ ಆಗದೆ, ಆಕೆ ಆತ್ಮಹತ್ಯೆ ಮಾಡಿಕೊಂಡರು. ಈ ಕಥೆ ಕೇಳಿ ನನ್ನ ಮನಸ್ಸಿಗೆ ಬೇಸರವಾಯ್ತು. ಪ್ರೀತಿ ಮಾಡುವವರು ಮೊದಲು ಆಯ್ಕೆ ಸರಿಯಾಗಿ ಮಾಡಿಕೊಳ್ಳಬೇಕು. ಏನೇ ಆದರೂ, ಬದುಕಿ ತೋರಿಸಬೇಕು. ಇದೇ ಕಾರಣಕ್ಕೆ ಲವ್ವರ್ಸ್ ನ ಮೀಟ್ ಮಾಡಬೇಕು ಅಂದುಕೊಂಡಿದ್ದೇನೆ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ದುನಿಯಾ ವಿಜಯ್ ತಿಳಿಸಿದರು. ['ಫಿಲ್ಮಿಬೀಟ್ ಕನ್ನಡ'ಗೆ ದುನಿಯಾ ವಿಜಯ್ ನೀಡಿದ ಬ್ರೇಕಿಂಗ್ ನ್ಯೂಸ್.!]

  ದುನಿಯಾ ವಿಜಯ್ ಜೊತೆ ಮಾತನಾಡುವ ಆಸಕ್ತಿ ಇದ್ರೆ, ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

  English summary
  Kannada Actor Duniya Vijay has expressed his desire to meet Real Lovers. Since, his movie 'RX Suri' has received good response from the youth, Duniya Vijay has decided to meet the Lovers to spread a good message about life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X