For Quick Alerts
ALLOW NOTIFICATIONS  
For Daily Alerts

  ಮೌನ ಮುರಿದ ದುನಿಯಾ ವಿಜಯ್ ಪತ್ನಿ ನಾಗರತ್ನ

  By Rajendra
  |

  ನಟ ದುನಿಯಾ ವಿಜಯ್ ದಾಂಪತ್ಯ ಜೀವನ ಛಿದ್ರ ಛಿದ್ರವಾಗಿದೆ. ತಮ್ಮ ಪತ್ನಿ ನಾಗರತ್ನ ಅವರಿಗೆ ಅವರು ವಿವಾಹ ವಿಚ್ಛೇದನ ನೀಡಲು ಹೊರಟಿದ್ದಾರೆ. ಗಂಡ ಹೆಂಡತಿ ಜಗಳ ಉಂಡು ಮಲಗೋತನಕ ಇದ್ದಿದ್ದರೆ ಚೆನ್ನಾಗಿತ್ತು. ಆದರೆ ಈಗ ಇವರಿಬ್ಬರ ದಾಂಪತ್ಯ ಕಲಹ ಬೀದಿಗೆ ಬಂದಿದೆ.

  ತಪ್ಪು ಯಾರದೇ ಇರಲಿ ಸಂಸಾರ ನೌಕೆಯಲ್ಲಿ ಒಂದು ಸಣ್ಣ ಬಿರುಕು ಮೂಡಿದರೆ ಸಾಕು. ಅದೇ ದೊಡ್ಡದಾಗುತ್ತಾ ಸಾಗಿ ಕಡೆಗೆ ಸಂಸಾರ ನೌಕೆ ಮುಳುಗುವ ಹಂತಕ್ಕೆ ಬರುತ್ತದೆ. ನಟ ದುನಿಯಾ ವಿಜಯ್ ಕೂಡ ಈಗ ಅಂತಹದ್ದೇ ಪರಿಸ್ಥಿತಿಯಲ್ಲಿದ್ದಾರೆ. ಇದಕ್ಕೆ ಕಾರಣ ಏನು. ದುನಿಯಾ ವಿಜಯ್ ಅವರದೇನು ತಪ್ಪೇನು ಇಲ್ಲವೇ?

  ಈ ಬಗ್ಗೆ ಮಾಧ್ಯಮಗಳೊಂದಿಗೆ ದುನಿಯಾ ವಿಜಯ್ ಅವರ ಪತ್ನಿ ನಾಗರತ್ನ ಅವರು ಮಾತನಾಡುತ್ತಾ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಅವರು ಹೇಳಿದ ಸಂಗತಿಗಳನ್ನು ನೋಡಿದರೆ ಇದರಲ್ಲಿ ವಿಜಯ್ ಪಾಲು ಸಾಕಷ್ಟಿದೆ ಎನ್ನಿಸುತ್ತದೆ. ಸ್ಲೈಡುಗಳನ್ನು ಒಂದೊಂದೇ ಸರಿಸುತ್ತಾ ಸಾಗಿದರೆ ನಿಮಗೇ ಎಲ್ಲವೂ ಅರ್ಥವಾಗುತ್ತದೆ.

  ಅತ್ತೆ ಮಾವನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವಂತೆ

  ಅವರ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪ ಸುಳ್ಳು. ನನಗೂ ತಂದೆ ತಾಯಿ ಇದ್ದಾರೆ. ನನ್ನನ್ನು ಕೆಟ್ಟ ಕೆಟ್ಟದಾಗಿ ಬಯುತ್ತಿದ್ದರು.

  ಬೇರೆ ಸಂಬಂಧ ಏನಾದರೂ ಇದೆಯೇ?

  ಅವರಿಗೆ ಯಾವುದೋ ಸಂಬಂಧ ಸಿಕ್ಕಿದೆ ಅದಕ್ಕೆ ನಾನು ದೂರವಾಗುತ್ತಿದ್ದೇನೆ. ಅವರಿಗೆ ಯಾವ ಸಂಬಂಧ ಸಿಕ್ಕಿದೆಯೋ ಏನೋ ನನಗೆ ಗೊತ್ತಿಲ್ಲ. ಅವರಾಗಿಯೇ ಅವರು ನನ್ನನ್ನು ಬೀದಿಗೆ ಎಳೆದಿದ್ದಾರೆ ಎಂದರೆ ಈಗ ನಾನು ಎಲ್ಲವನ್ನೂ ಹೇಳಿಕೊಳ್ಳಬೇಕಾಗಿದೆ.

  ಎಲ್ಲರೂ ಸಂತೋಷದಿಂದಲೇ ಇದ್ದೆವು

  ಕುಟುಂಬ ಸದಸ್ಯರೆಲ್ಲಾ ಸಂತೋಷದಿಂದಲೇ ಇದ್ದೆವು. ವಿಚ್ಛೇದನದ ನೋಟೀಸ್ ಕೊಟ್ಟಿದ್ದು ನೋಡಿ ನನಗೆ ಶಾಖ್ ಆಗಿದೆ. ನೀನು ರಾಣಿ ತರಹವೇ ಇರು. ಡೈವೋರ್ಸ್ ಕೊಡೋದು ಯಾರಿಗೂ ಗೊತ್ತಾಗಲ್ಲ ಎಂದೆಲ್ಲಾ ಹೇಳಿದ್ದರು.

  ನಿನ್ನ ಜೊತೆ ಬಾಳೋಕೆ ನನಗೆ ಅರ್ಹತೆ ಇಲ್ಲ

  ನಿನ್ನ ಜೊತೆ ಬಾಳೋಕೆ ನನಗೆ ಅರ್ಹತೆ ಇಲ್ಲ ಎನ್ನುತ್ತಿದ್ದರು. ನಾನು ನಮ್ಮ ಅತ್ತೆ ಮಾವಂದಿರ ಜೊತೆ ಚೆನ್ನಾಗಿಯೇ ಇದ್ದೆವು. ನನ್ನ ಗಂಡ ಈ ರೀತಿ ಮಾಡುತ್ತೇನೆ ಎಂದು ಊಹಿಸಿರಲಿಲ್ಲ. ಎಲ್ಲರಿಗೂ ತುಂಬಾ ಕಿರುಕುಳ ನೀಡುತ್ತಿದ್ದ. ನಮ್ಮ ತಂದೆ ತಾಯಿಯನ್ನು ಕರೆಸಿ ಇವಳನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದ.

  ನಮ್ಮ ತಂದೆ ತಾಯಿ ತುಂಬ ಅಮಾಯಕರು

  ವಿಜಯ್ ಸುಮ್ನೆ ಕಥೆ ಕಟ್ಟುತ್ತಿದ್ದಾರೆ ಅಷ್ಟೇ. ವಿಜಯ್ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು. ನನಗೆ ಏನೂ ಕಾರಣ ಹೇಳದೆ ವಿಚ್ಚೇದನ ನೀಡಿದ್ದಾರೆ. ತಮ್ಮ ಮಗಳನ್ನು ಯಾಕೆ ಹೀಗೆ ಮಾಡಿದ್ದೀರಿ ಎಂದು ಬುದ್ಧಿ ಹೇಳಿದ್ದಕ್ಕೆ ನಮ್ಮ ತಂದೆಯವರಿಗೂ ಹೊಡೆದಿದ್ದಾರೆ. ನಮ್ಮ ತಂದೆತಾಯಿ ತುಂಬಾ ಅಮಾಯಕರು. ಅವರೊಂದಿಗೆ ಅವರು ಕೆಟ್ಟದಾಗಿ ನಡೆದುಕೊಂಡಿದ್ದಾರೆ.

  ನನ್ನನ್ನು ಒಂಟಿಯಾಗಿರಲು ಬಿಡು ಎಂದಿದ್ದ ವಿಜಿ

  ಈ ಎಲ್ಲಾ ಘಟನೆಗಳಿಗೆ ವಿಜಯ್ ಜೊತೆಗಿರುವವರೇ ಕಾರಣ. ಅವರೇ ಅವರ ಜೊತೆ ಇದ್ದು ಈ ಎಲ್ಲವನ್ನೂ ಮಾಡಿಸುತ್ತಿದ್ದಾರೆ. ಮನೆ ತಗೊಡ್ತೀನಿ, ಕಾರು ತೆಗೆದುಕೊಡ್ತೀನಿ, ದುಡ್ಡು ಕೊಡ್ತೀನಿ ನೀನು ಮಹಾರಾಣಿ ತರಹ ಇರು. ನನ್ನನ್ನು ಒಂಟಿಯಾಗಿರಲು ಬಿಡು ಎನ್ನುತ್ತಿದ್ದ.

  ದೂರ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಹೋಗುತ್ತಿದ್ದೆ

  ಅವರ ಜೊತೆ ಅಪರೂಪಕ್ಕೆ ಚಿತ್ರೀಕರಣ ಸ್ಥಳಕ್ಕೆ ಹೋಗುತ್ತಿದ್ದೆ. ಅದೂ ಬೆಂಗಳೂರಿನಲ್ಲಾಗಿದ್ದರೆ ಹೋಗುತ್ತಿರಲಿಲ್ಲ. ಎಲ್ಲಾದರೂ ಮೈಸೂರಿನಂತಹ ದೂರದ ಪ್ರದೇಶಗಳಿಗೆ ಹೋದರೆ ಮಾತ್ರ ಹೋಗುತ್ತಿದೆ. ಅವರು ಎರಡು ಮೂರು ದಿನ ಬರುವುದು ತಡವಾದರೆ ಮಕ್ಕಳು ಒತ್ತಾಯ ಮಾಡುತ್ತಿದ್ದರು. ಹಾಗಾಗಿ ಶೂಟಿಂಗ್ ಸ್ಪಾಟ್ ಗೆ ಹೋಗುತ್ತಿದ್ದೆ.

  ಯಾವುದೇ ಕಾರಣಕ್ಕೂ ಅವರ ಕೈಬಿಡಲ್ಲ

  ಈಗಾಗಲೆ ಅವರಿಗೆ ಮದುವೆಯಾಗಿತ್ತು. ಅವರಿಗೆ ಡೈವೋರ್ಸ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನೊಂದಿಗೆ ಮಾತನಾಡುತ್ತಾ, ಅವಳ ಜೊತೆ ಬಾಳಕ್ಕಾಗಲ್ಲ. ಮೂರೇ ದಿನಕ್ಕೆ ಅವಳಿಂದ ದೂರವಾದೆ. ನೀನು ಚೆನ್ನಾಗಿ ನೋಡಿಕೊಳ್ತೀಯ ಎಂದು ಕೊಂಡಿದ್ದೇನೆ ಹಾಗೆ ಹೀಗೆ ಎಂದು ಹೇಳಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ಅವರ ಕೈಬಿಡಲ್ಲ. ಮಕ್ಕಳ ಭವಿಷ್ಯವೇ ನನಗೆ ಮುಖ್ಯ. ಒಟ್ಟಿನಲ್ಲಿ ನಾನು ಅವರೊಂದಿಗೆ ಚೆನ್ನಾಗಿ ಬಾಳಬೇಕು.

  ದುಡ್ಡು ಬಂದ ಮೇಲೆ ಅವರು ಬದಲಾದರು

  ನಮ್ಮ ಮಾವ ಈಗ ನನ್ನ ಜೊತೆ ಇದ್ದಾರೆ. ನಮ್ಮ ಅತ್ತೆಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ. ವಿಜಯ್ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ದುಡ್ಡು ನೋಡಿದ ಮೇಲೆ ಅವರು ಬದಲಾದರು. ನಾನು ಮಾತ್ರ ಆಗ ಹೇಗಿದ್ದೆನೋ ಈಗಲೂ ಹಾಗೆಯೇ ಇದ್ದೇನೆ. ದುಡ್ಡು ಬಂದ ಮೇಲೆ ನಾನು ಬದಲಾದೆ ಎಂಬ ಆರೋಪಗಳು ಸುಳ್ಳು.

  ಅವರ ತಂದೆ ತಾಯಿಗೆ ಕಿರುಕುಳ ನೀಡಿಲ್ಲ

  ಅವರು ಮಾತು ಕಲಿತಿದ್ದೀನಿ ಎಂದು ಏನೇನೋ ಮಾತನಾಡುತ್ತಾರೆ. ಆ ರೀತಿ ಮಾತನಾಡಲು ನನಗೆ ಬರುವುದಿಲ್ಲ. ಇದೆಲ್ಲಾ ಕಥೆ ಕಟ್ಟುತ್ತಿದ್ದಾರೆ. ಅವರ ತಂದೆ ತಾಯಿಯನ್ನು ನಾನು ಸರಿಯಾಗಿಯೇ ನೋಡಿಕೊಳ್ಳುತ್ತಿದ್ದೇನೆ. ಒಂದು ವೇಳೆ ನಾನು ಆ ರೀತಿ ಮಾತನಾಡಿದ್ದರೆ ನನ್ನ ಬಾಯಲ್ಲಿ ಹುಳ ಬೀಳುತ್ತದೆ. ನನ್ನ ಮಕ್ಕಳ ಆಣೆಗೂ ನಾನು ಅವರ ತಂದೆತಾಯಿಗೆ ಯಾವುದೇ ಕಿರುಕುಳ ನೀಡಿಲ್ಲ.

  ಹೊಡೆಯೋದು ಬಡಿಯೋದು ಮಾಡುತ್ತಿದ್ದರು

  ಕಳೆದ ಒಂದು ತಿಂಗಳಿಂದ ನನಗೆ, ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದಾರೆ. ಅವರಿಗೆ ಮೂರು ಜನ ಸಹೋದರಿಯರು. ಅವರಲ್ಲಿ ನಾದಿನಿ ಅಂಬುಜಾ ಮಾತ್ರ ನನ್ನ ಪರವಾಗಿ ಮಾತನಾಡುತ್ತಾರೆ. ಇನ್ನಿಬ್ಬರು ನಾದಿನಿಯರು ಮಾತ್ರ ಅವರ ಕಡೆಗೆ. ಕೋಪ ಬಂದರೆ ಹೊಡೆಯೋದು ಬಡಿಯೋದು ಎಲ್ಲ ಮಾಡೋರು. ಸಾಕಷ್ಟು ಸಲ ಹೊಡೆಸಿಕೊಂಡಿದ್ದೇನೆ.

  ಶುಭಾ ಪೂಂಜಾ ಜೊತೆ ಅವರಿಗೆ ಮದುವೆಯಾಗಿದೆ

  ನನ್ನ ಮದುವೆ ಬಳಿಕ ಅವರು ಇನ್ನೊಂದು ಮದುವೆಯಾಗಿದ್ದಾರೆ. ಅವರು ಶುಭಾ ಪೂಂಜಾ ಜೊತೆ ಮದುವೆಯಾಗಿರುವ ಫೋಟೋಗಳು ನನ್ನ ಬಳಿ ಇವೆ. ಅವರ ಜೊತೆಗೆ ಸಂಸಾರ ನಡೆಸುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರು ಬೇರೆ ಮನೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಮೂರು ವರ್ಷ ನಮ್ಮ ಜೊತೆಗೆ ಇದ್ದರು.

  ನಮ್ಮ ತಂದೆತಾಯಿಯನ್ನು ನಾಯಿಗಿಂತ ಕೀಳಾಗಿ ನೋಡುತ್ತಿದ್ದ

  ವಾರಕ್ಕೋ ಹದಿನೈದು ದಿನಕ್ಕೊಮ್ಮೆ ಶುಭಾ ಪೂಂಜಾರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ನಾನು ಅವಳಿಗೆ ತಾಳಿ ಕಟ್ಟಿದ್ದೇನೆ. ನಾನು ಬೇಕು ಎಂದರೆ ನೀನು ಇದನ್ನೆಲ್ಲಾ ಸಹಿಸಿಕೊಳ್ಳಬೇಕು. ಇದಕ್ಕೆ ಅವರ ತಂದೆ ತಾಯಿ ಸಪೋರ್ಟ್ ಕೂಡ ಮಾಡಿದ್ದರು. ನಮ್ಮ ತಂದೆ ತಾಯಿ ಏನಾದರೂ ಬುದ್ಧಿ ಹೇಳಲಿಕ್ಕೆ ಹೋದರೆ. ಅವರನ್ನು ಕಾಲಲ್ಲಿ ಒದೆಯುವುದು ಎಲ್ಲ ಮಾಡುತ್ತಿದ್ದ. ಅವರನ್ನು ನಾಯಿಗಿಂತಲೂ ಕೀಳಾಗಿ ನೋಡುತ್ತಿದ್ದ.

  ಹದಿನೈದು ದಿನಗಳಿಂದ ನನ್ನ ಜೊತೆಗಿಲ್ಲ

  ಕಳೆದ ಹದಿನೈದು ದಿನಗಳಿಂದ ಅವರು ನನ್ನ ಜೊತೆ ಇಲ್ಲ. ಅವರ ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದ್ದಕ್ಕೆ ವ್ರತ ಮಾಡುತ್ತಿದ್ದೇನೆ ಎಂದಷ್ಟೇ ಹೇಳಿದ್ದರು.

  English summary
  Kannada actor 'Black Cobra' Duniya Vijay wife Nagarathna breaks silence on divorce petition. She wants restoration of her ‘conjugal rights’, which means getting her husband back.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more