For Quick Alerts
  ALLOW NOTIFICATIONS  
  For Daily Alerts

  ಜಾಮೀನು ಸಿಕ್ಕಿಲ್ಲ, ದುನಿಯಾ ವಿಜಯ್ ಮುಂದಿನ ನಿರ್ಧಾರವೇನು.?

  |
  ಮುಂದೆ ಏನ್ ಮಾಡ್ತಾರೆ ದುನಿಯಾ ವಿಜಯ್..? | Filmibeat Kannada

  ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲಿನ ಹಲ್ಲೆ ಮತ್ತು ಕಿಡ್ನ್ಯಾಪ್ ಪ್ರಕರಣದಲ್ಲಿ ಜೈಲು ಸೇರಿರುವ ನಟ ದುನಿಯಾ ಜಾಮೀನು ಅರ್ಜಿಯನ್ನ ಮ್ಯಾಜಿಸ್ಟ್ರೇಟ್ ಕೋರ್ಟ್ ಇಂದು ತಿರಸ್ಕರಿಸಿದೆ.

  ದುನಿಯಾ ವಿಜಯ್, ಪ್ರಸಾದ್, ಮಣಿ ಮತ್ತು ಪ್ರಸಾದ್ ನಾಲ್ಕು ಜನ ಹಲ್ಲೆ ಪ್ರಕರಣದಲ್ಲಿ ಬಂಧನವಾಗಿದ್ದು, ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ವಿಚಾರಣೆ ನಡೆಸಿದ್ದ 8ನೇ ಎಸಿಎಂಎಂ ಕೋರ್ಟ್ ಇಂದು ಅರ್ಜಿ ವಜಾ ಮಾಡಿದೆ.

  ಹೀಗಾಗಿ, ಮತ್ತಷ್ಟು ದಿನ ದುನಿಯಾ ವಿಜಯ್ ಜೈಲಿನಲ್ಲೇ ಇರಬೇಕಾಗಿದೆ. ಎಲ್ಲೋ ಒಂದು ಕಡೆ ವಿಜಿ ಮತ್ತು ಬೆಂಬಲಿಗರಿಗೆ ಬೇಲ್ ಸಿಗುತ್ತೆ ಎಂಬ ನಿರೀಕ್ಷೆ ಇತ್ತು. ಆದ್ರೆ, ಆ ನಿರೀಕ್ಷೆ ಫಲ ಕೊಡಲಿಲ್ಲ.

  ಸದ್ಯ, ಸೆರೆಮನೆಯಲ್ಲಿರುವ ವಿಜಿ ಅವರ ಮುಂದಿನ ನಿರ್ಧಾರವೇನು ಎಂಬುದು ಕುತೂಹಲ ಮೂಡಿಸಿದೆ. ಈ ಮಧ್ಯೆ ವಿಜಿ ಪರ ವಕೀಲ ಶಿವಕುಮಾರ್ ಅವರು ಮಾತನಾಡಿದ್ದು, ಸೆಷನ್ಸ್ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

  ಹಲ್ಲೆಗೆ ಒಳಗಾಗಿರುವ ವ್ಯಕ್ತಿ ಮಾರುತಿ ಗೌಡ ಇನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದೇ ಇರುವುದು ವಿಜಯ್ ಅವರಿಗೆ ಜಾಮೀನು ನಿರಾಕರಿಸಲು ಕಾರಣವಿರಬಹುದು ಎಂದು ವಕೀಲ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಕೋರ್ಟ್ ಆದೇಶದ ಪ್ರತಿ ಇನ್ನು ವಕೀಲ ಕೈಸೇರಿಲ್ಲ. ಒಮ್ಮೆ ಆದೇಶ ಪ್ರತಿಯಲ್ಲಿ ಕೈಸೇರಿದ ನಂತರ ಯಾಕೆ ಜಾಮೀನು ವಜಾ ಮಾಡಲಾಗಿದೆ ಎಂದು ತಿಳಿಯಲಿದೆ.

  English summary
  8th Acmm Court rejected Kannada actor duniya vijay bail application in assault case. now, Duniya vijay will appeal to session court for bail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X