India
  For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ-ಶಿವರಾಜ್ 'ಓಂ' ಚಿತ್ರದ ಡಿವಿಡಿ ಕೊಳ್ಳಿರೋ!

  By ಜೇಮ್ಸ್ ಮಾರ್ಟಿನ್
  |

  ಉಪೇಂದ್ರ ನಿರ್ದೇಶನದ ಶಿವರಾಜ್ ಕುಮಾರ್ ಹಾಗೂ ಪ್ರೇಮ ಅಭಿನಯದ 'ಓಂ' ಚಿತ್ರ ಕೊನೆಗೂ ಡಿವಿಡಿ/ಸಿಡಿ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೆಂಗಳೂರಿನ ಎಸ್ ಪಿ ರಸ್ತೆಯಲ್ಲಿ ಅಧಿಕೃತ ಡಿವಿಡಿ ಕೊಂಡು ನೋಡಿ ಆನಂದಿಸಿ. ಇಲ್ಲಿ ತನಕ ಹಲವು ಬಾರಿ ಈ ಚಿತ್ರ ನಕಲಿ ವಿಡಿಯೋಗಳು ಬಂದಿತ್ತು.

  ಸರಿ ಸುಮಾರು ಐನೂರಕ್ಕೂ ಹೆಚ್ಚು ಬಾರಿ ರೀ ರಿಲೀಸ್ ಆಗಿ ದಾಖಲೆ ಬರೆದ ಈ ಚಿತ್ರದ ಪ್ರಸಾರ ಹಕ್ಕುಗಳು ಕೂಡಾ ಮಾರಾಟವಾಗಿರಲಿಲ್ಲ. ಅದರೆ, ಉಪ್ಪಿ2 ಚಿತ್ರದ ಮರುದಿನವೇ ಉದಯ ಟಿವಿಯಲ್ಲಿ ಪ್ರಪ್ರಥಮ ಬಾರಿಗೆ ಓಂ ಚಿತ್ರ ತೆರೆ ಕಂಡಿತ್ತು. ಈಗ ಸುಮಾರು 20 ವರ್ಷಗಳ ನಂತರ ಮಾರುಕಟ್ಟೆಯಲ್ಲಿ 'ಓಂ' ಡಿವಿಡಿ ಸಿಗುತ್ತಿದೆ.

  ಓಂ ಡಿವಿಡಿಗೆ ಬೇಡಿಕೆ: 1995ರಲ್ಲಿ ತೆರೆ ಕಂಡ ಬೆಂಗಳೂರಿನ ಭೂಗತ ಜಗತ್ತಿನ ಕಥಾ ಹಂದರವುಳ್ಳ ಈ ಚಿತ್ರದ ಡಿವಿಡಿಗೆ ಬಂದಷ್ಟು ಬೇಡಿಕೆ ಬೇರೆ ಯಾವ್ ಚಿತ್ರಕ್ಕೂ ಬಂದಿಲ್ಲ. ಈಗಲೂ ಮಾರುಕಟ್ಟೆಯಲ್ಲಿ ಓಂ ಚಿತ್ರದ ಡಿವಿಡಿ/ಸಿಡಿ ಮಾರಾಟ ಹೆಚ್ಚಾದರೆ ಮಾತ್ರ ಡಿವಿಡಿ ಅಂಗಡಿಗೆ ಬೆಲೆ ಸಿಗಲಿದೆ ಎಂದು ದೊಡ್ಡ ದೊಡ್ಡ ವಿಡಿಯೋ ಸಿಡಿ ಅಂಗಡಿ ಮಾಲೀಕರು ಬೆಂಗಳೂರು ಮಿರರ್ ಜೊತೆ ತಮ್ಮ ವ್ಯಥೆ ಹಂಚಿಕೊಂಡಿದ್ದಾರೆ. ಡಿವಿಡಿ ಹಾಗೂ ಸಿಡಿ ಹಾಗೂ ಬೆಲೆ ಕ್ರಮವಾಗಿ 125 ಹಾಗೂ 59 ರು ಇಡಲಾಗಿದೆ.

  ಓಂ ಚಿತ್ರದ ನಕಲಿ ಸಿಡಿಗಳಿಗೆ ಬೆಲೆ ಇಲ್ಲ

  ಓಂ ಚಿತ್ರದ ನಕಲಿ ಸಿಡಿಗಳಿಗೆ ಬೆಲೆ ಇಲ್ಲ

  ಓಂ ಚಿತ್ರದ ನಕಲಿ ಸಿಡಿಗಳು ಎಷ್ಟೋ ಬಂದರೂ ಒಳ್ಳೆ ಗುಣಮಟ್ಟದ ಪ್ರಿಂಟ್ ಇಲ್ಲಿ ತನಕ ಬಂದಿಲ್ಲ. ಜನ ಕೂಡಾ ಓಂ ಚಿತ್ರವನ್ನು ಒಳ್ಳೆ ಪ್ರಿಂಟ್ ನಲ್ಲೇ ನೋಡಲು ಬಯಸಿದ್ದರಿಂದ ಈ ಚಿತ್ರಕ್ಕೆ ಅಷ್ಟು ಬೇಡಿಕೆ ಇದೆ ಎಂದು ಶ್ರೀ ಗಣೇಶ್ ವಿಡಿಯೋ ಕಂಪನಿ ಮಾಲೀಕ ರತನ್ ರಾಯ್ ಹೇಳಿದ್ದಾರೆ.

  ಬೇರೆ ಯಾವ ಡಿವಿಡಿಗೂ ಬೇಡಿಕೆ ಇಲ್ಲ

  ಬೇರೆ ಯಾವ ಡಿವಿಡಿಗೂ ಬೇಡಿಕೆ ಇಲ್ಲ

  ಗುರುವಾರ (ಆಗಸ್ಟ್ 19) ಮಾರುಕಟ್ಟೆಗೆ ಕಾಲಿಟ್ಟಿರುವ ಓಂ ಚಿತ್ರದ ಡಿವಿಡಿ ಬಿಟ್ಟರೆ ಬೇರೆ ಯಾವ ಚಿತ್ರದ ಡಿವಿಡಿಗೂ ಬೇಡಿಕೆ ಕಂಡು ಬಂದಿಲ್ಲ. ಈ ಹಿಂದೆ ಮಿ.ಅಂಡ್ ಮಿಸೆಸ್ ರಾಮಾಚಾರಿ ಸ್ವಲ್ಪ ಮಾರುಕಟ್ಟೆಗೆ ಜೀವ ತುಂಬಿತ್ತು. ಮಿಕ್ಕ ಎಲ್ಲಾ ಚಿತ್ರಗಳು ಆನ್ ಲೈನ್ ನಲ್ಲಿ ಲಭ್ಯವಾಗುವುದರಿಂದ ಈಗ ಯಾರೂ ಕೂಡಾ ಡಿವಿಡಿಗಾಗಿ ಕಾದು ಕೊಂಡುಕೊಳ್ಳುವುದಿಲ್ಲ ಎಂದರು.

  ಪೈರಸಿ ಬಗ್ಗೆ ಇನ್ನೂ ಹೆಚ್ಚಿನ ಕಠಿಣ ಕ್ರಮ ಅಗತ್ಯ

  ಪೈರಸಿ ಬಗ್ಗೆ ಇನ್ನೂ ಹೆಚ್ಚಿನ ಕಠಿಣ ಕ್ರಮ ಅಗತ್ಯ

  ಪೈರಸಿ ಬಗ್ಗೆ ಇನ್ನೂ ಹೆಚ್ಚಿನ ಕಠಿಣ ಕ್ರಮ ಅಗತ್ಯ. ಒಳ್ಳೆ ಪ್ರಾಡೆಕ್ಟ್ ಜನಕ್ಕೆ ನೀಡಬೇಕು ಎಂಬುದು ನಮ್ಮ ಗುರಿ. ವ್ಯಾಪಾರದಲ್ಲಿ ಲಾಭ ನಷ್ಟ ಇದ್ದದ್ದೇ. ಅದರೆ, ನಕಲಿ ವಿಡಿಯೋ ಹಾವಳಿ ವಿರುದ್ಧ ಇನ್ನೂ ಹೆಚ್ಚಿನ ಕ್ರಮ ಅಗತ್ಯ.

  ಹಲವು ಪ್ರಮುಖ ಬಡಾವಣೆಗಳ ಫುಟ್ ಪಾತ್ ಗಳಲ್ಲಿ ರಾಜರೋಷವಾಗಿ ಲೇಟೇಸ್ಟ್ ಸಿನಿಮಾದ ಸಿಡಿ ಸಿಗುತ್ತಿರುವಾಗ ಡಿವಿಡಿ ಹುಡುಕಿಕೊಂಡು ಯಾರು ಇಲ್ಲಿ ತನಕ ಬರುವುದಿಲ್ಲ ಎಂದು ರಾಯ್ ಹೇಳಿದರು.

  ಸಿಡಿ ಮಾರುಕಟ್ಟೆ ಕೋಮಾವಸ್ಥೆಯಲ್ಲಿದೆ

  ಸಿಡಿ ಮಾರುಕಟ್ಟೆ ಕೋಮಾವಸ್ಥೆಯಲ್ಲಿದೆ

  ಆನಂದ್ ವಿಡಿಯೋಸ್ ನ ಮೋಹನ್ ಛಾಬ್ರಿಯಾ ಮಾತನಾಡಿ, ಡಿವಿಡಿ ಹಾಗೂ ಸಿಡಿ ಮಾರುಕಟ್ಟೆ ಕೋಮಾವಸ್ಥೆಯಲ್ಲಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಇನ್ನೊಂದು ವರ್ಷದಲ್ಲಿ ಆಡಿಯೋ ವಿಡಿಯೋ ಮಾರುಕಟ್ಟೆ ಬಿದ್ದು ಹೋಗುತ್ತದೆ.ಸಿಡಿಗಿಂತ ಆಡಿಯೋ ಕ್ಯಾಸೆಟ್ ಕಾಲದಲ್ಲೇ ನಮಗೆ ಬೆಲೆ ಇತ್ತು.

  ಆಡಿಯೋ ವಿಡಿಯೋ ಮಾರುಕಟ್ಟೆಗೆ ರವಿ ಕೊಡುಗೆ

  ಆಡಿಯೋ ವಿಡಿಯೋ ಮಾರುಕಟ್ಟೆಗೆ ರವಿ ಕೊಡುಗೆ

  ಪ್ರೇಮಲೋಕ, ಯಜಮಾನ ಚಿತ್ರಗಳ ಕಾಲದಲ್ಲಿ ಲಕ್ಷಾಂತರ ಕ್ಯಾಸೆಟ್ ಸೇಲ್ ಆಗುತ್ತಿತ್ತು. ಈಗ ಸಾವಿರಕ್ಕೆ ಇಳಿದಿದೆ. ಕಳೆದ ಕೆಲ ವರ್ಷಗಳಿಂದ ಕನ್ನಡ ವಿಡಿಯೋ ಮಾರುಕಟ್ಟೆಗೆ ಬೆಲೆ ಇಲ್ಲ. ರವಿಚಂದ್ರನ್ ರಂಥ ಹಿರಿಯರು ಪೈರಸಿ ವಿರುದ್ಧ ಹೋರಾಟದ ಜೊತೆಗೆ ಮಾರುಕಟ್ಟೆ ಉಳಿಸಿ ಬೆಳೆಸುವ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಬೇಕು ಎಂದರು.

   ಯಶ್ ಚಿತ್ರಗಳಿಗೆ ಬೇಡಿಕೆ ಇದೆ

  ಯಶ್ ಚಿತ್ರಗಳಿಗೆ ಬೇಡಿಕೆ ಇದೆ

  ಯಶ್ ಅವರ ರಾಜಹುಲಿ, ಗಜಕೇಸರಿ, ಗೂಗ್ಲಿ, ಮಿ ಅಂಡ್ ಮಿಸೆಸ್ ರಾಮಾಚಾರಿ, ಶಿವರಾಜ್ ಕುಮಾರ್ ಅವರ ಭಜರಂಗಿ, ಶರಣ್ ಅವರ ಅಧ್ಯಕ್ಷ, ಇತ್ತೀಚೆಗೆ ಬೇಡಿಕೆ ಪಡೆದುಕೊಂಡ ಆಡಿಯೋ ಹಾಗೂ ಡಿವಿಡಿ ಗಳಾಗಿವೆ. ಮಿ ಅಂಡ್ ಮಿಸೆಸ್ ರಾಮಾಚಾರಿ ಡಿವಿಡಿ ಹಕ್ಕು 18 ಲಕ್ಷಕ್ಕೆ ಮಾರಾಟವಾಗಿದ್ದು ದಾಖಲೆ.

  English summary
  The DVD of the iconic film Om, directed by Upendra starring Shiva Rajkumar has hit the market on August 19 reports Bangalore Mirror.The DVD and CD market not in good position said Anand Audio and Sri Ganesh Video owners.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X