For Quick Alerts
  ALLOW NOTIFICATIONS  
  For Daily Alerts

  'ಈ ಸಲ ಕಪ್ ನಮ್ದೆ' ಅನ್ನೋದಕ್ಕೆ ಇದೊಂದು ಕಾರಣ ಸಾಕು.!

  By Bharath Kumar
  |

  ಐಪಿಎಲ್ ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿದ್ದಂತೆ ಕ್ರಿಕೆಟ್ ಜ್ವರ ಎಲ್ಲೆಲ್ಲೂ ಹೆಚ್ಚಾಗಿದೆ. ಅದರಲ್ಲೂ ಆರ್.ಸಿ.ಬಿ ಅಭಿಮಾನಿಗಳಂತೂ 'ಈ ಸಲ ಕಪ್ ನಮ್ದೆ' ಅಂತ ಅಭಿಯಾನ ಮಾಡುತ್ತಿದ್ದಾರೆ. ಈ ಕ್ರೇಜ್ ಬರಿ ಕ್ರಿಕೆಟ್ ವಲಯದಲ್ಲಿ ಮಾತ್ರವಲ್ಲ ಸಿನಿಮಾರಂಗದಲ್ಲೂ ಹಚ್ಚಾಗಿದೆ.

  ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬೆಂಬಲವಾಗಿ ಸ್ಯಾಂಡಲ್ ವುಡ್ ಸ್ಟಾರ್ ನಟ-ನಟಿಯರು ಸಾಥ್ ಕೊಡ್ತಿದ್ದಾರೆ. ಈ ಸಲ ಬೆಂಗಳೂರು ತಂಡ ಕಪ್ ಗೆದ್ದೇ ಗೆಲ್ಲುತ್ತೆ ಅಂತ ಭವಿಷ್ಯ ನುಡಿಯುತ್ತಿದ್ದಾರೆ.

  ಇನ್ನು 'ಈ ಸಲ ಕಪ್ ನಮ್ದೆ' ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ನಲ್ಲಿ ಟ್ರೋಲ್ ಗಳು ವೈರಲ್ ಆಗಿದೆ. ಇದರಲ್ಲಿ ಈ ಒಂದು ಟ್ರೋಲ್ ಸರ್ಪ್ರೈಸ್ ಆಗಿದ್ದರೂ ನಿಜಾನೇ ಎನ್ನುವಂತಿದೆ. ಹಾಗಿದ್ರೆ, ಯಾವೆಲ್ಲ ಸ್ಟಾರ್ ಗಳು ಹೇಗೆ ಆರ್.ಸಿ.ಬಿ ಗೆ ಸಪೋರ್ಟ್ ಮಾಡ್ತಿದ್ದಾರೆ.? ಈ ಸಲ ಕಪ್ ನಮ್ದೆ ಅನ್ನೋದಕ್ಕೆ ಸಿಕ್ಕಿರುವ ಆ ಒಂದು ಕಾರಣ ಏನು ಎಂದು ತಿಳಿಯಲು ಮುಂದೆ ನೋಡಿ...

  ಚಿತ್ರಕೃಪೆ: ಟ್ರೋಲ್ ಪೇಜ್ ಗಳು

  ಇದು ಕಾಕತಾಳೀಯವೋ ಅಥವಾ ಅಚ್ಚರಿಯೋ.!

  ಇದು ಕಾಕತಾಳೀಯವೋ ಅಥವಾ ಅಚ್ಚರಿಯೋ.!

  ದಾಖಲೆಗಳ ಪ್ರಕಾರ ಐಪಿಎಲ್ ತಂಡಗಳ ನಾಯಕರು ಮದುವೆಯಾದ ಮುಂದಿನ ವರ್ಷವೇ ಐಪಿಎಲ್ ಟೂರ್ನಿ ಗೆದ್ದಿದ್ದಾರೆ. ಉದಾಹರಣೆ 2010ರಲ್ಲಿ ಎಂ.ಎಸ್ ಧೋನಿ ಮದುವೆ ಆದರು. 2011ರ ಐಪಿಎಲ್ ಟ್ರೋಪಿಗೆ 'ಚೆನ್ನೈ ಸೂಪರ್ ಕಿಂಗ್' ಮುತ್ತಿಟ್ಟಿತ್ತು. 2011ರಲ್ಲಿ ಗೌತಮ್ ಗಂಭೀರ್ ಮದುವೆ ಆದ್ರು. 2012ರಲ್ಲಿ ಗಂಭೀರ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ವಿನ್ ಆಗಿದ್ದರು. 2015ರಲ್ಲಿ ಡೇವಿಡ್ ವಾರ್ನರ್ ಮದುವೆ ಆದ್ರು. 2016ರಲ್ಲಿ ವಾರ್ನರ್ ನಾಯಕತ್ವದ 'ಸನ್ ರೈಸ್ ಹೈದ್ರಾಬಾದ್' ಐಪಿಎಲ್ ಗೆದ್ದಿತ್ತು.

  2018ರಲ್ಲಿ ಈ ನಿಜವಾಗುತ್ತಾ.?

  2018ರಲ್ಲಿ ಈ ನಿಜವಾಗುತ್ತಾ.?

  ಹೀಗೆ ಕಳೆದ ಮೂರ್ನಾಲ್ಕು ಆವೃತ್ತಿಗಳಲ್ಲಿ ಹೊರಬಿದ್ದಿರುವ ಫಲಿತಾಂಶವನ್ನ ಗಮನಿಸಿದ್ರೆ ಈ ಸಲ ಇಂತಹ ಫಲಿತಾಂಶಕ್ಕೆ ಸಾಕ್ಷಿಯಾಗುತ್ತಾ ಎಂಬ ಕುತೂಹಲ ಕಾಡುತ್ತಿದೆ. ಯಾಕಂದ್ರೆ, ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆ 2017ರಲ್ಲಿ ಆಗಿತ್ತು. ಈಗ 2018ನೇ ಐಪಿಎಲ್ ಆರಂಭವಾಗುತ್ತಿದೆ. ಹೀಗಾಗಿ, ಈ ಸಲ ಕಪ್ ಆರ್.ಸಿ.ಬಿದ್ದೇ ಎನ್ನಲಾಗುತ್ತಿದೆ.

  ಶಿವರಾಜ್ ಕುಮಾರ್ ರಾಯಭಾರಿ

  ಶಿವರಾಜ್ ಕುಮಾರ್ ರಾಯಭಾರಿ

  ಇನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಾಯಭಾರಿ ಆಗಿದ್ದಾರೆ. ಇದು ಅಭಿಮಾನಿಗಳ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ, ಆರ್.ಸಿ.ಬಿ ತಂಡಕ್ಕೆ ಇದು ಜೋಶ್ ಹೆಚ್ಚಿಸಲಿದೆ ಎಂಬ ಭರವಸೆ. ಇದಕ್ಕೂ ಮುಂಚೆ ದೀಪಿಕಾ ಪಡುಕೋಣೆ, ರಮ್ಯಾ, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ಆರ್.ಸಿ.ಬಿ ತಂಡಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು.

  ಟ್ರೋಲ್ ಪೇಜ್ ಗಳಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್

  ಟ್ರೋಲ್ ಪೇಜ್ ಗಳಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್

  ಇನ್ನು ಈ ಸಲ ಕಪ್ ನಮ್ದೆ ಅಭಿಯಾನದಲ್ಲಿ ಕನ್ನಡ ಸಿನಿಮಾ ನಟರ ಭಾವಚಿತ್ರಗಳನ್ನ ಬಳಸಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಇವುಗಳಲ್ಲಿ ಕೆಲವನ್ನ ನಿಮ್ಮ ಮುಂದೆ ಇಟ್ಟಿದ್ದೀವಿ. ದರ್ಶನ್, ಸುದೀಪ್ ಮತ್ತು ಯಶ್ ಅವರ ಫೇಸ್ ಡೈಲಾಗ್ ಗಳನ್ನ ಬಳಸಿ ಟ್ರೋಲ್ ಮಾಡಿರುವುದು ಗಮನ ಸೆಳೆಯುತ್ತಿದೆ.

  ರವಿಶಂಕರ್, ರವಿಚಂದ್ರನ್ ಟ್ರೋಲ್

  ರವಿಶಂಕರ್, ರವಿಚಂದ್ರನ್ ಟ್ರೋಲ್

  ಕಾಲೇಜ್ ಕುಮಾರ್ ಚಿತ್ರದಲ್ಲಿ ರವಿಶಂಕರ್, ಹಾಗೂ ಬಕಾಸುರ ಚಿತ್ರದಲ್ಲಿ ರವಿಚಂದ್ರನ್ ಅವರು ಕೂಡ ಆರ್.ಸಿ.ಬಿ ಪರವಾಗಿ ಟ್ರೋಲ್ ಆಗಿದ್ದಾರೆ. ಈ ಸಲ ಕಪ್ ನಮ್ದೆ ಅಂತ ಪೋಸ್ಟರ್ ಗಳು ಆಕರ್ಷಣೆ ಮಾಡುತ್ತಿದೆ.

  English summary
  Royal challengers bangalore captain virat kohli married actress anushka sharma at 2017. so, 2018 Ipl Trophy will win Rcb Says Trolls.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X