»   » ಭೂಕಂಪನದಿಂದ ನಟಿ ಲೀಲಾವತಿ ಮನೆ ಬಿರುಕು.! ವಿನೋದ್ ರಾಜ್ ಗೆ ನಡುಕ.!

ಭೂಕಂಪನದಿಂದ ನಟಿ ಲೀಲಾವತಿ ಮನೆ ಬಿರುಕು.! ವಿನೋದ್ ರಾಜ್ ಗೆ ನಡುಕ.!

Posted By:
Subscribe to Filmibeat Kannada

ಇಂದು (ಏಪ್ರಿಲ್ 18) ಬೆಳಗ್ಗೆ ಸಂಭವಿಸಿದ ಭೂಕಂಪನದ ಬೆಂಗಳೂರಿನ ಜನ ಆತಂಕಕ್ಕೀಡಾಗಿದ್ದು, ಹಿರಿಯ ನಟಿ ಲೀಲಾವತಿ ಅವರಿಗೂ ಭೂಕಂಪನದ ಅನುಭವವಾಗಿದೆಯಂತೆ. ಈ ವೇಳೆ ಲೀಲಾವತಿ ಅವರ ಮನೆಯ ಗೋಡೆ ಬಿರುಕು ಬಿಟ್ಟಿರುವ ಘಟನೆ ಕೂಡ ನಡೆದಿದೆ.[ಉದ್ಯಾನನಗರಿ ಬೆಂಗಳೂರಿನಲ್ಲೂ ಭೂಕಂಪ?!]

ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಇಬ್ಬರಿಗೂ ಭೂಕಂಪನದ ಅನುಭವವಾಗಿದ್ದು, ಕೆಲ ಕಾಲ ಗಾಬರಿಯಾಗಿದ್ದರಂತೆ. ಈ ಕುರಿತು ಫಿಲ್ಮಿಬೀಟ್ ಜೊತೆ ಮಾತನಾಡಿದ ವಿನೋದ್ ರಾಜ್ ಅವರು ತಮಗಾದ ಅನುಭವ ಬಗ್ಗೆ ಹೇಳಿಕೊಂಡಿದ್ದಾರೆ.[ಬೆಳಗ್ಗೆ ಭೂಮಿ ಕಂಪಿಸಿದ್ದಕ್ಕೆ ಗಡಗಡ ನಡುಗಿದ ನಟಿ ರಕ್ಷಿತಾ ಪ್ರೇಮ್.!]

Earth Quake in Actress Leelavathi Home: Vinod Raj Experience

''ಬೆಳಿಗ್ಗೆ ಸುಮಾರು 7.15 ರಿಂದ 7,30 ಸಮಯ. ನಾನು ಬಾತ್ ರೂಂನಲ್ಲಿದ್ದೆ. ಇದ್ದಕ್ಕಿದ್ದಾಗೆ ದೊಡ್ಡ ಶಬ್ದ ಆಯಿತು. ನಾನೇನೋ ತೋಟದಲ್ಲಿ ಕೆಲಸ ನಡೆಯುತ್ತಿರುತ್ತೆ ಅಲ್ವಾ. ಮೊದಲು ಟ್ರ್ಯಾಕ್ಟರ್ ಏನಾದರೂ ಬಂದಿರಬಹುದು ಎಂದು ಕೊಂಡೆ, ಆದ್ರೆ, ಆ ಅನುಭವ 10-12 ಸೆಕೆಂಡ್ ಕಾಲ ಇತ್ತು. ಭಯ ಆಗಿ ಜೋರಾಗಿ ಅಮ್ಮ ಅಮ್ಮ ಅಂತ ಕಿರುಚಿಕೊಂಡೆ. ಆಮೇಲೆ ಅಮ್ಮನ ಬಳಿ ಓಡಿ ಬಂದೆ, ಅಮ್ಮನಿಗೂ ಆದೇ ರೀತಿಯ ಅನುಭವವಾಗಿತ್ತು'' ಎಂದರು.[ಮಂಡ್ಯ, ರಾಮನಗರದಲ್ಲಿ ಭೂಕಂಪ: ಆತಂಕದಲ್ಲಿ ಜನರು]

English summary
Kannada senior Actress Leelavathi and his son Vinod Raj felt the Tremor in Bengaluru today (April 18) morning.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada