For Quick Alerts
  ALLOW NOTIFICATIONS  
  For Daily Alerts

  ಒಂದೇ ದಿನದಲ್ಲಿ 3 ಬಿರುದು ದಕ್ಕಿಸಿಕೊಂಡ ಚಾಲೆಂಜಿಂಗ್ ಸ್ಟಾರ್

  By Suneetha
  |

  ಕನ್ನಡ ನಟ ದರ್ಶನ್ ಅವರಿಗೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ 'ಬಾಕ್ಸಾಫೀಸ್ ಸುಲ್ತಾನ' ಮತ್ತು 'ಚಾಲೆಂಜಿಂಗ್ ಸ್ಟಾರ್' ಎಂಬ ಎರಡು ಬಿರುದುಗಳಿವೆ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ನಡುವೆ ಅವರಿಗೆ ಇನ್ನೂ ಕೆಲವು ಹೊಸ-ಹೊಸ ಬಿರುದುಗಳಿವೆ ದಕ್ಕಿವೆ.

  ಹೌದು ಇದೀಗ ದರ್ಶನ್ ಅವರಿಗೆ ಹೊಸದಾಗಿ 'ಈ ಯುಗದ ಬಂಗಾರದ ಮನುಷ್ಯ', 'ಬಾಕ್ಸಾಫೀಸ್ ದಾದಾ', 'ಮೈಸೂರು ಹುಲಿ' ಅಂತ ಬರೋಬ್ಬರಿ ಮೂರು ಬಿರುದುಗಳು ಸಿಕ್ಕಿವೆ. ಅಂದಹಾಗೆ ಈ ಬಿರುದುಗಳನ್ನು ಕೊಟ್ಟವರು ಬೇರಾರು ಅಲ್ಲ. 'ಜಗ್ಗುದಾದಾ' ಚಿತ್ರದ ನಿರ್ದೇಶಕ ರಾಘವೇಂದ್ರ ಹೆಗಡೆ, ನಿರ್ಮಾಪಕ ಗೋವಿಂದ ರಾಜ್ ಮತ್ತು ದರ್ಶನ್ ಅವರ ಖಾಸ ದೋಸ್ತ್ ನಟ ಆದಿತ್ಯ.['ಜಗ್ಗುದಾದಾ' ಚಿತ್ರಕ್ಕೆ ಹೀರೋ ಯಾರು ದರ್ಶನ್/ಸೃಜನ್ ಲೋಕೇಶ್?]

  ಮೇ 9, ಸೋಮವಾರದಂದು ನಡೆದ 'ಜಗ್ಗುದಾದಾ' ಚಿತ್ರದ ಆಡಿಯೋ ಬಿಡುಗಡೆಯ ಅದ್ದೂರಿ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ರಾಘವೇಂದ್ರ ಹೆಗಡೆ ಅವರು "ನಾನು ಈ ಚಿತ್ರವನ್ನು ಮಾಡುತ್ತೇನೆ ಎಂದಾಗ ಎಲ್ಲರೂ ನನಗೆ ಭಯಪಡಿಸಿದರು. ದರ್ಶನ್ ಅವರನ್ನು ಹಾಕ್ಕೊಂಡು ಸಿನಿಮಾ ಮಾಡೋದು ಕಷ್ಟ, ಅವರು ಸಮಯಕ್ಕೆ ಸರಿಯಾಗಿ ಶೂಟಿಂಗ್ ಸೆಟ್ ಗೆ ಬರೋದಿಲ್ಲ ಎಂದಿದ್ದರು. ಆದರೆ ನನಗೆ ಮಾತ್ರ ಆ ವಿಷಯದಲ್ಲಿ ಒಂದು ದಿನವೂ ಸಮಸ್ಯೆ ಆಗಲಿಲ್ಲ" ಎಂದರು.[ದರ್ಶನ್ ರವರ 'ಜಗ್ಗುದಾದಾ' ಚಿತ್ರದ ಹಾಡುಗಳು ಹೇಗಿವೆ.?]

  "ಮಾತ್ರವಲ್ಲದೆ ದರ್ಶನ್ ಅವರು ಬೆಳಗ್ಗೆ 10 ರಿಂದ ರಾತ್ರಿ 9 ಘಂಟೆಯವರೆಗೂ ಸೆಟ್ ನಲ್ಲಿ ಇರುತ್ತಿದ್ದರು. ಒಂದು ದಿನ ಬೆಳಗ್ಗೆ 8 ಘಂಟೆಯಿಂದ ಮಧ್ಯರಾತ್ರಿ 2 ಘಂಟೆಯವರೆಗೂ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಅವರ ಕಾಲ್ ಶೀಟ್ ಸಿಗೋದೇ ಕಷ್ಟ ಅಂತದ್ರಲ್ಲಿ ನಾನು ಅವರ ಸಿನಿಮಾ ಮಾಡಿದ್ದೀನಿ. ಅವರನ್ನು "ಈ ಯುಗದ ಬಂಗಾರದ ಮನುಷ್ಯ' ಅಂತ ಕರೆದರೂ ತಪ್ಪಿಲ್ಲ" ಎಂದು ನಿರ್ದೇಶಕ ರಾಘವೇಂದ್ರ ಹೆಗಡೆ ಹೊಸ ಬಿರುದು ದಯಪಾಲಿಸಿದ್ದಾರೆ.[ದರ್ಶನ್ ಅಭಿನಯದ 'ಜಗ್ಗು ದಾದಾ' ಟೈಟಲ್ ಟೀಸರ್ ನೋಡಿದ್ರಾ.?]

  ಇದೇ ಸಂದರ್ಭದಲ್ಲಿ ಹಿರಿಯ ನಿರ್ಮಾಪಕ ಗೋವಿಂದ ರಾಜ್ ಅವರು ದರ್ಶನ್ ಅವರನ್ನು 'ಬಾಕ್ಸ್ ಆಫೀಸ್ ದಾದಾ' ಎಂದರೆ ದರ್ಶನ್ ಅವರ ಚಡ್ಡಿ ದೋಸ್ತ್ ನಟ 'ಡೆಡ್ಲಿ' ಆದಿತ್ಯ ಅವರು 'ದರ್ಶನ್ ಅವರನ್ನು ಎಲ್ಲರೂ ಬಾಕ್ಸಾಫೀಸ್ ಸುಲ್ತಾನ', 'ಚಾಲೆಂಜಿಂಗ್ ಸ್ಟಾರ್' ಅಂತೆಲ್ಲಾ ಕರೆಯುತ್ತಾರೆ. ಆದರೆ ನಾನು ಮಾತ್ರ ಅವರನ್ನು ಸದಾ 'ಮೈಸೂರು ಹುಲಿ' ಅಂತ ಕರೆಯೋಕೆ ಇಷ್ಟಪಡ್ತೀನಿ' ಎಂದು ನುಡಿದರು.

  ಅಂತೂ ಇಂತೂ ಒಂದೇ ದಿನ ದರ್ಶನ್ ಅವರಿಗೆ ಒಂದಲ್ಲಾ, ಮೂರು ಹೊಸ ಬಿರುದುಗಳು ಸಿಕ್ಕಿದ್ದು, ಇನ್ನು ಮುಂದೆ ಅವರನ್ನು ಯಾವ-ಯಾವ ರೀತಿಯಲ್ಲಿ ಕರೀತೀರಾ ಅನ್ನೋದು ಅಭಿಮಾನಿಗಳಿಗೆ ಬಿಟ್ಟಿದ್ದು.

  English summary
  Kannada Movie 'Jaggu Dada' Audio released. On this occasion, Kannada Actor Darshan has got new title 'Ee Yugada Bangaarada Manushya', 'Box Office Dada' and 'Mysore Huli' from Director Raghavendra Hegde, Producer Govinda Raj and Actor Aditya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X