For Quick Alerts
  ALLOW NOTIFICATIONS  
  For Daily Alerts

  ಪ್ರಕಾಶ್ ರೈಗೆ 'ವಿಶಲ್' ಸುಮಲತಾಗೆ 'ಕಹಳೆ' ಊದುತ್ತಿರುವ ವ್ಯಕ್ತಿ

  |

  ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಮಂಡ್ಯ ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರಗಳು. ಯಾಕಂದ್ರೆ, ಈ ಎರಡು ಕ್ಷೇತ್ರದಲ್ಲಿ ಸಿನಿಮಾ ಕಲಾವಿದರು ಸ್ಪರ್ಧೆ ಮಾಡ್ತಿದ್ದಾರೆ.

  ಮಂಡ್ಯದಲ್ಲಿ ನಟಿ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರ್ ಎದುರಾಳಿಗಳಾಗಿ ಸ್ಪರ್ಧೆ ಮಾಡಿದ್ರೆ, ಬೆಂಗಳೂರು ಕೇಂದ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

  ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?

  ಇದೀಗ, ಪ್ರಕಾಶ್ ರೈ ಮತ್ತು ಸುಮಲತಾ ಅವರಿಗೆ ಚುನಾವಣೆ ಆಯೋಗದಿಂದ ಗುರುತಿನ ಚಿಹ್ನೆ ನೀಡಲಾಗಿದೆ. ಪ್ರಕಾಶ್ ರೈಗೆ ವಿಶಲ್ ಚಿಹ್ನೆ ಸಿಕ್ಕಿದೆ. ಆ ಕಡೆ ಸುಮಲತಾಗೆ ಕಹಳೆ ಊದುತ್ತಿರುವ ವ್ಯಕ್ತಿಯ ಚಿಹ್ನೆ ಸಿಕ್ಕಿದೆ.

  ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಕಾಶ್ ರೈ, ''ನಮ್ಮ ಆಯ್ಕೆಯಂತೆ ನಮಗೆ ವಿಶಲ್ ಚಿಹ್ನೆ ಸಿಕ್ಕಿದೆ. ಭ್ರಷ್ಟ ರಾಜಕಾರಣಿ, ಬೇಜವಾಬ್ದಾರಿ ನಾಯಕರ ವಿರುದ್ಧ ವಿಶಲ್ ಊದೋಣ'' ಎಂದಿದ್ದಾರೆ.

  ಪಕ್ಷೇತರರಾಗಿ ಪ್ರಚಾರ ಮಾಡುತ್ತಿರುವ ಪ್ರಕಾಶ್ ರೈ ಮತ್ತು ಸುಮಲತಾ ಅವರಿಗೆ ಈಗೊಂದು ಚಿಹ್ನೆ ಸಿಕ್ಕಿದೆ. ಇನ್ಮುಂದೆ ಈ ಚಿಹ್ನೆಯನ್ನ ಜನರಿಗೆ ತಲುಪಿಸಬೇಕಾಗಿದೆ.

  English summary
  Election commission gives symbol for mandya independent candidate sumalatha ambarish and visuals for bangalore central independent candidate prakash rai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X