»   » ರಾಜಕೀಯಕ್ಕೂ ಸಿನಿಮಾಗೂ ಡೈವೋರ್ಸೇ ಹೆಚ್ಚು

ರಾಜಕೀಯಕ್ಕೂ ಸಿನಿಮಾಗೂ ಡೈವೋರ್ಸೇ ಹೆಚ್ಚು

By: ಜೀವನರಸಿಕ
Subscribe to Filmibeat Kannada

ಮೋಹಕತಾರೆ ರಮ್ಯಾ ಬಗ್ಗೆ ಇತ್ತೀಚೆಗೆ ಕನ್ನಡದ ಹಿರಿಯ ನಟಿಯೊಬ್ಬರು ಹೇಳಿದ್ದಾರೆ, "ಆ ಹುಡ್ಗಿ ಯಾಕಪ್ಪ ಹಂಗ್ ಮಾತಾಡುತ್ತೆ. ರಾಜಕೀಯ ಇಲ್ಲ ಅಂದಾಗ ಮತ್ತೆ ಸಿನಿಮಾಗೇ ಬರ್ಬೇಕಾಗುತ್ತೆ ಅನ್ನೋ ಅನುಭವ ಆ ಹುಡ್ಗಿಗಿಲ್ಲ. ಹೌದು ಇದು ಸತ್ಯ ಕೂಡ. ರಾಜಕೀಯಕ್ಕೆ ಕಾಲಿಟ್ಟ ಅದೆಷ್ಟೋ ಸಿನಿಮಾ ಸ್ಟಾರ್ ಗಳು ಜನ ನಮ್ಮ ಕೈ ಹಿಡೀತಾರೆ ಅನ್ಕೊಂಬಿಟ್ಟಿರ್ತಾರೆ. ಆದರೆ ಅವರಿಗೆ ಪರಿಸ್ಥಿತಿಯ ಅರಿವಾಗೋದು ಠೇವಣಿ ಕಳ್ಕೊಳ್ಳೋ ಸ್ಥಿತಿ ಬಂದಾಗ. ಇಂತಹಾ ಪರಿಸ್ಥಿತಿಯನ್ನ ಅದೆಷ್ಟೋ ನಟ ನಟಿಯರು ಫೇಸ್ ಮಾಡಿದ್ದಾರೆ.

ಸಿನಿಮಾದಲ್ಲಿ ಹೇಗೆ ನಾವು ಅಂದುಕೊಂಡ ಹಾಗೆ ಆಗೋದಿಲ್ಲವೋ ರಾಜಕೀಯ ಕೂಡ ಹಾಗೇನೇ. ಎಲ್ಲವೂ ನಮ್ಮ ಕೈಯ್ಯಲ್ಲಿ ಇಲ್ಲ ಅನ್ನೋದನ್ನ ಅರಿಯದೇ ಮಾತ್ನಾಡೋ ಎಳಸು ನಟ ನಟಿಯರು ಈಗ ಮತ್ತೆ ಸಿನಿಮಾದಲ್ಲಿ ಪೋಷಕ ಪಾತ್ರಗಳನ್ನ ಮಾಡ್ಕೊಂಡ್ ಸುಮ್ನೆ ಇರೋದನ್ನ ನಾವೆಲ್ಲ ನೋಡಿದ್ದೀವಿ. [ರೆಬಲ್ ಸ್ಟಾರ್ ಅಂಬಿ ಇಲ್ಲಿಲ್ಲ, ರಮ್ಯಾ ಕಥೆ ಗೊತ್ತಿಲ್ಲ]

ಇಷ್ಟೆಲ್ಲಾ ಹೇಳಿದ್ದು ಯಾಕೆ ಅಂದ್ರೆ ನಟಿ ರಮ್ಯಾ ಮಂಡ್ಯ ಲೋಕಸಭೆಯಿಂದ ಗೆದ್ದ ನಂತರ ನಂಗೆ ಸಿನಿಮಾ ಸಾಕು, ರಾಜಕೀಯದಲ್ಲೇ ಮುಂದುವರೀತೀನಿ ಅಂದಿದ್ದಾರೆ. ಸಿನಿಮಾ ಬೇಡವೇ ಬೇಡ ಅನ್ನೋ ಮಾತನ್ನಾಡಿದ್ದಾರೆ. ಆದರೆ ನೆನಪಿರ್ಲಿ ರಾಜಕೀಯ ಅನ್ನೋದು ಸಿನಿಮಾದವ್ರ ಕೈಗೆ ಸುಲಭವಾಗಿ ಸಿಗೋದಲ್ಲ.[ರಾಜ್ಯ ಸರ್ಕಾರದ ವಿರುದ್ಧ ಗುಟುರು ಹಾಕಿದ ಗಣೇಶ್ ಪತ್ನಿ]

ಒಂದೇ ಬಾರಿಗೆ ದೊಡ್ಡ ಮಟ್ಟಿಗೆ ಬೆಳೆದು ಮುಖ್ಯಮಂತ್ರಿಯಾಗೋ ಎನ್ಟಿಆರ್ ಎಂಜಿಆರ್ ಕಾಲ ಈಗಿಲ್ಲ. ಅತಿಯಾದ ಆತ್ಮ ವಿಸ್ವಾಸದಿಂದ ಅಲ್ಲೇ ಉಳಿದುಬಿಡ್ತೀನಿ ಅಂತ ಸಿನಿಮಾದಿಂದ ರಾಜಕೀಯಕ್ಕೆ ಹೋದವ್ರಲ್ಲಿ ಬಂದ ದಾರಿಗೆ ಸುಂಕ ಇಲ್ಲ ಅಂತ ವಾಪಾಸು ಬಂದವ್ರ ಒಂದು ಲಿಸ್ಟ್ ನಿಮ್ ಮುಂದೆ ನೋಡಿ.

ಪೂಜಾ ಗಾಂಧಿ ಪಾಪರ್ ಚೀಟಿ

ಸ್ಯಾಂಡಲ್ ವುಡ್ ಮಳೆ ಹುಡುಗಿ ಪೂಜಾಗಾಂಧಿ ರಾಯಚೂರಲ್ಲಿ ಚುನಾವಣೆಗೆ ನಿಂತು ರಾಯಚೂರು ಸುತ್ತಾಡಿ 10 ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದು ಬಿಟ್ರೆ ಮತ್ತೇನೂ ಮಾಡ್ಲಿಲ್ಲ. ಮೂರು ಪಕ್ಷ ಚೇಂಜ್ ಮಾಡಿದ್ರೂ ಠೇವಣಿ ಉಳಿಸಿಕೊಳ್ಳೋಕಾಗ್ಲಿಲ್ಲ.

ಅನಂತ್ ನಾಗ್ ಆಗಲಿಲ್ಲ ರಾಜಕೀಯ ಚತುರ

ಅಭಿನಯ ಚತುರ ಅನಂತ್ ನಾಗ್ ಅಭಿನಯದಲ್ಲಿ ಎಷ್ಟೇ ಚತುರ ಅನ್ನಿಸಿಕೊಂಡ್ರೂ ರಾಜಕೀಯದಲ್ಲಿ ದೊಡ್ಡ ಸಕ್ಸಸ್ ಪಡ್ಕೊಳ್ಳಲಿಲ್ಲ. ರಾಜಕೀಯಕ್ಕಿಂತ ಸಿನಿಮಾನೇ ಸೂಪರ್ ಅಂತ ವಾಪಾಸು ಬಂದ ಅನಂತ್ ನಾಗ್ ಮತ್ತೊಮ್ಮೆ ರಾಜಕೀಯಕ್ಕೆ ಹೋಗೋ ಮನಸ್ಸು ಮಾಡಿಲ್ಲ.

ನವರಸನಾಯಕ ಜಗ್ಗೇಶ್ ರನೌಟ್

ಜಗ್ಗೇಶ್ ಇತ್ತೀಚೆಗೆ ರಾಜಕೀಯಕ್ಕಿಂತ ಸಿನಿಮಾ ಬಗ್ಗೇನೇ ಜಾಸ್ತಿ ಯೋಚಿಸ್ತಿದ್ದಾರೆ. ಮೊದ್ಲು ಬದುಕುಕೊಟ್ಟ ಸಿನಿಮಾಗಿಂತ ರಾಜಕೀಯದ ಬಗ್ಗೆ ತಲೆಕೆಡಿಸಿಕೊಳ್ತಾ ಕುಳಿತ್ರೆ ಯೂಸ್ ಇಲ್ಲ. ಅದಕ್ಕಿಂತ ನಾಲ್ಕು ಸಿನಿಮಾ ಮಾಡಿದರೆ ಜನರ ಪ್ರೀತಿ ಗಳಿಸಬಹುದು ಅನ್ನಿಸಿದೆ ಅನ್ಸುತ್ತೆ. ಸಿನಿಮಾದಲ್ಲೆ ಸುದ್ದಿಯಾಗ್ತಿರೋ ಜಗ್ಗೇಶ್ ಲೋಕಸಭಾ ಚುನಾವಣೆ ಬಗ್ಗೆ ಎಲ್ಲೂ ಮಾತ್ನಾಡ್ತಿಲ್ಲ.

ದೊಡ್ಡಣ್ಣ ರಾಜಕೀಯದಲ್ಲಿ ದೊಡ್ಡಣ್ಣನಾಗಲಿಲ್ಲ

ಕಾಮಿಡಿ ದೊಡ್ಡಣ್ಣ, ವಿಲನ್ ಪಾತ್ರದಲ್ಲೂ ಮೋಡಿ ಮಾಡಿದ ದೊಡ್ಡಣ್ಣ ಎಷ್ಟು ಸಾರಿ ಸಿನಿಮಾದಲ್ಲಿ ಗೆದ್ರೂ ರಾಜಕೀಯದಲ್ಲಿ ಗೆಲ್ಲೋಕೇ ಆಗಿಲ್ಲ. ನಟನಾಗಿ ಜನರ ಮನಗೆದ್ದ ದೊಡ್ಡಣ್ಣರನ್ನ ಗೆಲ್ಲಿಸೋ ದೊಡ್ಡ ಮನಸ್ಸನ್ನ ಜನರು ಮಾಡಿಲ್ಲ. ಆದ್ರೆ ಸಿನಿಮಾ ಮಾತ್ರ ದೊಡ್ಡಣ್ಣರ ಕೈಬಿಟ್ಟಿಲ್ಲ.

ಅಂಬಿಯಂತಹಾ ಅಂಬೀನೇ ಯಶಸ್ವಿಯಲ್ಲ

ಕೇಂದ್ರ ಸರ್ಕಾರದಲ್ಲಿ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾದ್ರೂ ಅಂಬಿಯಂತಹ ಅಂಬಿಯನ್ನ ರಾಜಕೀಯ ಅದೆಷ್ಟೋ ಬಾರಿ ಮಕಾಡೆ ಮಲಗಿಸಿದೆ. ಅಂತಾಹದ್ರಲ್ಲಿ ರಾಜಕೀಯನೇ ಅಂತಿಮ ಅನ್ನೋದು ಎಷ್ಟರಮಟ್ಟಿಗೆ ಸರಿ ಹೇಳಿ.

ಉಮಾಶ್ರಿಯವರಿಗೆ ನಟನೆಯೇ ಉತ್ತಮ

ಇವತ್ತಿಗೂ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಉಮಾಶ್ರೀ ಅವರು ರಾಜಕೀಯಕ್ಕಿಂತ ಹೆಚ್ಚಾಗಿ ನೆಚ್ಚಿಕೊಂಡಿರೋದು ಸಿನಿಮಾವನ್ನೇ. ರಾಜಕೀಯದಲ್ಲಿ ಗೆದ್ರೂ ಸೋತ್ರೂ ಸಿನಿಮಾದಲ್ಲಿ ಉಮಾಶ್ರಿ ಪಾತ್ರಗಳು ಗೆದ್ದಿದ್ದೇ ಹೆಚ್ಚು. ಸೋತ ಮೇಲೆ ಹಳೆ ಗಂಡನ ಪಾದವೇ ಗತಿ ಅಂತ ವಾಪಾಸು ಬರೋರೇ ಹೆಚ್ಚು.

ದೇಶದಲ್ಲಿ ಯೂಟರ್ನ್ ತೊಗೊಂಡವ್ರೇ ಹೆಚ್ಚು

ರಾಷ್ಟ್ರ ರಾಜಕೀಯದಲ್ಲೂ ಇಂತಹ ಉದಾಹರಣೆಗಳು ಸಿಕ್ತವೆ. ಗಂಡನ ಮನೆಗೆ ಹೋದ ಕೂಡ್ಲೇ ತವರು ಮನೆಗೆ ಬರೋದೇ ಇಲ್ಲ. ಇಲ್ಲೇ ಜೀವನ ಪರ್ಯಂತ ಅಂದ್ಕೊಳ್ಳೋದು ಮೂರ್ಖತನ.

ರಾಜಕೀಯಕ್ಕೂ ಸಿನಿಮಾಗೂ ಡೈವೋರ್ಸೇ ಹೆಚ್ಚು

ಇವತ್ತು ಡೈವೋರ್ಸ್ ಗಳೇ ಜಾಸ್ತಿ ಯೋಚ್ನೇ ಮಾಡಿ, ರಮ್ಯಾ ಮೇಡಂ ನಿಮ್ದಿನ್ನೂ ಮದ್ವೇನೂ ಆಗಿಲ್ಲ ಬರೀ ಎಂಗೇಜ್ಮೆಂಟ್ ಆಗಿದೆ ಅಷ್ಟೇ..ಎಂಗೇಜ್ಮೆಂಟ್ ಅಂದ್ರೆ ರಾಜಕೀಯದ ಜೊತೆ.

English summary
It is rightly said that luck plays a vital role in making a star shine. Our Sandalwood favourite celebrities might entertain the audiences on the big screen. But it is equally difficult success in the politics. Check out the list Sandalwood stars who failed in politics.
Please Wait while comments are loading...