»   » ಅಪ್ಪು ಡ್ಯಾನ್ಸ್ ನೋಡಿ ಬೌಲ್ಡ್ ಆದ ವಿದೇಶಿ ನಟಿ ಎಲ್ಲಿ ಅವರಾಮ್.!

ಅಪ್ಪು ಡ್ಯಾನ್ಸ್ ನೋಡಿ ಬೌಲ್ಡ್ ಆದ ವಿದೇಶಿ ನಟಿ ಎಲ್ಲಿ ಅವರಾಮ್.!

Posted By:
Subscribe to Filmibeat Kannada

'ರಾಜಕುಮಾರ' ಪುನೀತ್ ರಾಜ್ ಕುಮಾರ್ ನಟನೆ ಹಾಗೂ ಅವರ ಡ್ಯಾನ್ಸ್ ನೋಡಿ ದಿಗ್ಗಜ ನಟರೇ ಭೇಷ್ ಎಂದಿದ್ದಾರೆ. ಈಗ ವಿದೇಶಿ ನಟಿ ಎಲ್ಲಿ ಅವರಾಮ್ ಅಪ್ಪು ಡ್ಯಾನ್ಸ್ ಬಗ್ಗೆ ಮಾತನಾಡಿದ್ದಾರೆ.

ಸದ್ಯ ರಮೇಶ್ ಅರವಿಂದ್ ಅವರ 'ಬಟರ್ ಪ್ಲೈ' ಸಿನಿಮಾದಲ್ಲಿ ನಟಿಸುತ್ತಿರುವ ಎಲ್ಲಿ ಅವರಾಮ್ ದಕ್ಷಿಣ ಭಾರತದ ಸಿನಿಮಾಗಳು ಹಾಗೂ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಒಬ್ಬ ಅದ್ಭುತ ಡ್ಯಾನ್ಸರ್ ಅಂತ ಈ ಬೆಡಗಿ ಹಾಡಿ ಹೊಗಳಿದ್ದಾರೆ. ಮುಂದೆ ಓದಿ...

ಕನ್ನಡ ಸುಮಧುರ ಭಾಷೆ

''ದಕ್ಷಿಣ ಭಾರತದ ಭಾಷೆಗಳು ನನಗೆ ಇಷ್ಟ. ಕೇಳಲು ಆ ಭಾಷೆಗಳು ಇಂಪಾಗಿರುತ್ತದೆ. ಅದರಲ್ಲೂ ಕನ್ನಡ ಸುಮಧುರ ಭಾಷೆ. ನಾನು ಯೂರೋಪಿಯನ್ ಆದರೂ, ಚಿತ್ರತಂಡ ನನಗೆ ಕನ್ನಡವನ್ನು ಚೆನ್ನಾಗಿ ಹೇಳಿಕೊಡುತ್ತಿದೆ. ನನಗೆ ಬೆಂಗಳೂರು ಹುಡುಗಿ ಎಂಬ ಫೀಲ್ ಆಗುತ್ತಿದೆ'' ಎಂದು ನಟಿ ಎಲ್ಲಿ ಅವರಾಮ್ ಹೇಳಿದ್ದಾರೆ.

ಪುನೀತ್ ಅದ್ಭುತ ಡ್ಯಾನ್ಸರ್

''ಪುನೀತ್ ರಾಜ್ ಕುಮಾರ್ ಕನ್ನಡದ ದೊಡ್ಡ ನಟ ಎಂಬುದು ನನಗೆ ಗೊತ್ತು. ಅವರ ಡ್ಯಾನ್ಸ್ ನೋಡಿದ್ದೇನೆ. ಅವರೊಬ್ಬ ಅದ್ಬುತ ಡ್ಯಾನ್ಸರ್. ಕನ್ನಡದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಖುಷಿ ಇದೆ'' ಎಂದು ತಮ್ಮ ಸಂತಸವನ್ನು ಎಲ್ಲಿ ಅವರಾಮ್ ವ್ಯಕ್ತಪಡಿಸಿದ್ದಾರೆ.

ಆಮಿ ಜಾಕ್ಸನ್ ಜಾಗಕ್ಕೆ ಎಲ್ಲಿ ಅವರಾಮ್

ಕನ್ನಡದ 'ಬಟರ್ ಪ್ಲೈ' ಸಿನಿಮಾದಲ್ಲಿ ಆಮಿ ಜಾಕ್ಸನ್ ನಟಿಸುತ್ತಿದ್ದ ಪಾತ್ರ ಡೇಟ್ಸ್ ಸಮಸ್ಯೆಯಿಂದ ಈಗ ಎಲ್ಲಿ ಅವರಾಮ್ ಪಾಲಾಗಿದೆ.

ಸದ್ದು ಮಾಡದೆ, ಸುದ್ದಿ ಇಲ್ಲದೆ ಮದುವೆಯಾದ್ರಾ ಪಾರೂಲ್..?

ಲೀಸಾ ಹೇಡನ್ ಪಾತ್ರ

'ಬಟರ್ ಪ್ಲೈ' ಹಿಂದಿಯ 'ಕ್ವೀನ್' ಚಿತ್ರದ ರಿಮೇಕ್ ಆಗಿದ್ದು, ಅಲ್ಲಿ ಲೀಸಾ ಹೇಡನ್ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಎಲ್ಲಿ ಅವರಾಮ್ ನಿರ್ವಹಿಸಲಿದ್ದಾರೆ.

ನೆನಪಿಡಿ.. ಪಾರೂಲ್ ಸಿನಿಮಾ ಹೆಸರು 'ಪಾತರಗಿತ್ತಿ' ಅಲ್ಲ, ಅದು 'ಬಟರ್ ಫ್ಲೈ'

ಇಂದಿನಿಂದ ಚಿತ್ರೀಕರಣ

ಸದ್ಯ ರಮೇಶ್ ಅರವಿಂದ್ ನಿರ್ದೇಶನದ 'ಬಟರ್ ಪ್ಲೈ' ಚಿತ್ರದ ಶೂಟಿಂಗ್ ಪ್ಯಾರಿಸ್ ನಲ್ಲಿ ನಡೆಯುತ್ತಿದೆ. ಚಿತ್ರೀಕರಣದಲ್ಲಿ ನಟಿ ಪಾರೂಲ್ ಯಾದವ್ ಮತ್ತು ಎಲ್ಲಿ ಅವರಾಮ್ ಭಾಗಿಯಾಗಿದ್ದಾರೆ.

ರಮೇಶ್ ಅರವಿಂದ್ ಮತ್ತು ಕಾಜಲ್ ಕಾಂಬಿನೇಶನ್ ಚಿತ್ರಕ್ಕೆ ಅದ್ದೂರಿ ಚಾಲನೆ!

ನಟಿ ಎಲ್ಲಿ ಅವರಾಮ್ ಬಗ್ಗೆ

ನಟಿ ಎಲ್ಲಿ ಅವರಾಮ್ ಮೂಲತಃ ಸ್ವೀಡನ್ ಚೆಲುವೆ. ಹಿಂದಿ 'ಬಿಗ್ ಬಾಸ್ 7' ಸ್ಪರ್ಧಿ ಆಗಿದ್ದ ಈಕೆ ಬಳಿಕ ಹಿಂದಿಯಲ್ಲಿ ಕೆಲ ಸಿನಿಮಾ ಮಾಡಿದ್ದರು. ಆದರೆ ಇದೀಗ ಕನ್ನಡ ಮೂಲಕ ಸೌತ್ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ.

English summary
Actress Elli AvRam spoke about Puneeth Rajkumar's dance.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada