»   » 'ಹ್ಯಾರಿಪಾಟರ್' ಖ್ಯಾತಿಯ ಎಮ್ಮಾ ವ್ಯಾಟ್ಸನ್ ಗೆ 'ಎಂಟಿವಿ ಮೂವಿ' ಪ್ರಶಸ್ತಿ

'ಹ್ಯಾರಿಪಾಟರ್' ಖ್ಯಾತಿಯ ಎಮ್ಮಾ ವ್ಯಾಟ್ಸನ್ ಗೆ 'ಎಂಟಿವಿ ಮೂವಿ' ಪ್ರಶಸ್ತಿ

Posted By:
Subscribe to Filmibeat Kannada

ಹಾಲಿವುಡ್ 'ಹ್ಯಾರಿಪಾಟರ್' ಚಿತ್ರದಲ್ಲಿ ನಟಿಸಿರುವ ಎಮ್ಮಾ ವ್ಯಾಟ್ಸನ್ ನಿಮಗೆಲ್ಲಾ ಗೊತ್ತಿರಬಹುದು. ಸಖತ್ ಹಾಟ್ ಮತ್ತು ಕ್ಯೂಟಿ ಆಗಿರುವ ಎಮ್ಮಾ ವ್ಯಾಟ್ಸನ್ ಇತ್ತೀಚಿನ ಕೆಲ ತಿಂಗಳ ಹಿಂದೆ ಬಿಡುಗಡೆ ಆದ ಲೈವ್ ಆಕ್ಷನ್ ಮತ್ತು ಕ್ಲಾಸಿಕ್ ಆನಿಮೇಟೆಡ್ ಚಿತ್ರ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರದಲ್ಲಿಯೂ ಅಭಿನಯಿಸಿದ್ದರು. ಈ ನಟಿಗೆ ಈಗ ಪ್ರತಿಷ್ಠಿತ 'ಎಂಟಿವಿ ಮೂವಿ ಮತ್ತು ಟಿವಿ' ಪ್ರಶಸ್ತಿ ಲಭಿಸಿದೆ.[ಟ್ರೈಲರ್: ಜಾದು ಪ್ರಪಂಚಕ್ಕೆ ಕರೆದೊಯ್ಯುವ 'ಬ್ಯೂಟಿ ಅಂಡ್ ದಿ ಬೀಸ್ಟ್']

ಎಮ್ಮಾ ವ್ಯಾಟ್ಸನ್ ಗೆ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರದಲ್ಲಿಯ 'ಬೆಲ್ಲೆ' ಪಾತ್ರದ ಅಭಿನಯಕ್ಕಾಗಿ ನಿನ್ನೆ(ಮೇ 7) ಲಾಸ್ ಏಂಜಲೀಸ್ ನಲ್ಲಿ 'ಎಂಟಿವಿ ಸಿನಿಮಾ ಮತ್ತು ಟಿವಿ' ಪ್ರಶಸ್ತಿ ಪ್ರದಾನ ಮಾಡಲಾಗಿದೆ.

Emma Watson wins MTV Awards First 'gender free' category

ನಟರು ಮತ್ತು ನಟಿಯರು ಸೇರಿದಂತೆ ಹಲವು ಹಾಲಿವುಡ್ ತಾರೆಯರು 'ಎಂಟಿವಿ ಮೂವಿ ಮತ್ತು ಟಿವಿ'ಯ ಪ್ರಶಸ್ತಿಗಾಗಿ 'ಬೆಸ್ಟ್ ಆಕ್ಟರ್' ವಿಭಾಗದಲ್ಲಿ ನಾಮ ನಿರ್ದೇಶನ ಗೊಂಡಿದ್ದರು. ಜೆಂಡರ್ ನ್ಯಾಚುರಲ್ ಬೆಸ್ಟ್ ಬಿಗ್ ಸ್ಕ್ರೀನ್ ಆಕ್ಟರ್ ಪ್ರಶಸ್ತಿಯ ವಿಜೇತರಾಗಿ ಎಮ್ಮಾ ವ್ಯಾಟ್ಸನ್ ರವರು ನಟಿ Asia Kate Dillon ಅವರಿಂದ ಗೋಲ್ಡೆನ್ ಪಾಪ್ ಕಾರ್ನ್ ಟ್ರೋಫಿಯನ್ನು ಸ್ವೀಕರಿಸಿದರು.[ಚಿತ್ರಗಳು: 'ಹ್ಯಾರಿಪಾಟರ್' ನಟಿ ಸೆಕ್ಸಿ ಎಮ್ಮಾ ವ್ಯಾಟ್ಸನ್ ಭಾವ-ಭಂಗಿ]

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ 27 ವರ್ಷದ ನಟಿ ಎಮ್ಮಾ ವ್ಯಾಟ್ಸನ್ ಎಂಟಿವಿ ಜೆಂಡರ್-ಲೆಸ್ ಅವಾರ್ಡ್ ಶೋ ಬಗ್ಗೆ ಹೆಮ್ಮೆ ಪಟ್ಟು ಹೊಗಳಿದರು. "ಇತಿಹಾಸದಲ್ಲಿ ಪುರುಷ ಮತ್ತು ಮಹಿಳೆ ಎಂದು ಪ್ರತ್ಯೇಕವಾಗಿ ನಾಮನಿರ್ದೇಶನ ಪಡೆಯದ, ಮೊದಲ ಬಾರಿಗೆ ಪಡೆದ ಪ್ರಶಸ್ತಿ ಇದು. ಇದು ಮಾನವ ಅನುಭವವನ್ನು ನಾವು ಹೇಗೆ ಗ್ರಹಿಸುತ್ತೇವೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ" ಎಂದು ಹೇಳಿ ಎಮ್ಮಾ ವ್ಯಾಟ್ಸನ್ ತಮ್ಮ ಸಂತೋಷ ಹಂಚಿಕೊಂಡರು.

Emma Watson wins MTV Awards First 'gender free' category

ಎಮ್ಮಾ ವ್ಯಾಟ್ಸನ್ 'ಹ್ಯಾರಿ ಪಾಟರ್' ಚಿತ್ರದಲ್ಲಿಯ ಅಭಿನಯಕ್ಕಾಗಿಯೇ ಹಲವು ಪ್ರಶಸ್ತಿಗಳನ್ನು, 'ಬೆಸ್ಟ್ ಬ್ರಿಟಿಷ್ ಆರ್ಟಿಸ್ ಆಫ್ ದಿ ಇಯರ್', 'ಬೆಸ್ಟ್ ಬ್ರಿಟಿಷ್ ಸ್ಟೈಲ್' ಎಂಬ ನ್ಯಾಷನಲ್ ಅವಾರ್ಡ್‌ ಗಳನ್ನು ಮತ್ತು MTV Trailblazer ಪ್ರಶಸ್ತಿಗಳನ್ನು ಪಡೆದಿದ್ದಾರೆ.

English summary
Hollywood Actress Emma Watson was the first big winner at Sunday night's MTV Movie & TV Awards in Los Angeles on Sunday night. She Awarded 'MTV Movie & TV' Awards for her performance as Belle in 'Beauty And The Beast' movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X