twitter
    For Quick Alerts
    ALLOW NOTIFICATIONS  
    For Daily Alerts

    ಅಮೆರಿಕನ್ನಡಿಗರ 'ಏನೆಂದು ಹೆಸರಿಡಲಿ' ಕರ್ನಾಟಕಕ್ಕೂ ಬರಲಿ

    By Harshitha
    |

    ತಮ್ಮ ಕೆಲಸದ ಸಲುವಾಗಿ ಹಾಗೂ ಉನ್ನತ ವ್ಯಾಸಂಗ ಮಾಡಲು ಅಮೇರಿಕಾಗೆ ಹೋದ ಕೆಲ ಕನ್ನಡಿಗರು, ಅಲ್ಲಿನ ಸ್ಥಳೀಯ ಪ್ರತಿಭೆಗಳ ಜೊತೆಗೂಡಿ ಒಂದು ಕಿರುಚಿತ್ರ ತಯಾರಿಸಿದ್ದಾರೆ. ಅದೇ 'ಏನೆಂದು ಹೆಸರಿಡಲಿ'.

    ಅಮೇರಿಕಾದಲ್ಲೇ ಸಂಪೂರ್ಣ ತಯಾರಾಗಿರುವ ಕನ್ನಡ ಕಿರುಚಿತ್ರ 'ಏನೆಂದು ಹೆಸರಿಡಲಿ' ಭಾರತ ಸಂಸ್ಕೃತಿಯ ಬೇರು ಮತ್ತು ಅಮೇರಿಕಾ ಜೀವನಶೈಲಿಯ ಸಮಾಗಮವನ್ನು ಪ್ರತಿಬಿಂಬಿಸುವ ಹುಡುಗ-ಹುಡುಗಿ ನಡುವಿನ ಸಂಬಂಧದ ಕುರಿತಾದ ಕಥೆ ಹೊಂದಿದೆ.

    Enendhu Hesaridali; A short film by Kannadigas in US

    ಕ್ಲೌಡ್ 10 ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಹೊರಬಂದಿರುವ ಈ ಕಿರುಚಿತ್ರವನ್ನು ಶ್ವೇತ ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ಅಮೇರಿಕಾದಲ್ಲಿ ಕನ್ನಡ ಚಿತ್ರಗಳನ್ನು ವಿತರಿಸುವ ಕಸ್ತೂರಿ ಮೀಡಿಯಾ ಮತ್ತು ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟದ ಸಹಯೋಗದೊಂದಿಗೆ 'ಏನೆಂದು ಹೆಸರಿಡಲಿ' ಬಾಸ್ಟನ್ ಮತ್ತು ಅಟ್ಲಾಂಟ ನಗರಗಳ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. [ಅಕ್ಕ ನೋಂದಾವಣಿ ವಿಶೇಷ ದರ ಮಾ.15ರಂದು ಕೊನೆ]

    Enendhu Hesaridali; A short film by Kannadigas in US

    ಜೊತೆಗೆ, ಮೆಸ್ಯಾಚ್ಯುಸೆಟ್ಸ್ ನ ಫರ್ಮಿಂಗ್ಹ್ಯಾಮ್ ಮತ್ತು ಸ್ವಿಟ್ಜರ್ಲ್ಯಾಂಡ್ ನ ಜೂಜ್ ನಗರಗಳಲ್ಲಿ ಕನ್ನಡ ಸಂಘಗಳ ಸಹಯೋಗದೊಂದಿಗೆ ಸಾಮುದಾಯಿಕ ಪ್ರದರ್ಶನ ಕಂಡಿದೆ.

    Enendhu Hesaridali; A short film by Kannadigas in US

    ಅಂದ್ಹಾಗೆ, 'ಏನೆಂದು ಹೆಸರಿಡಲಿ' ಕಿರುಚಿತ್ರದಲ್ಲಿ ಕಿಶನ್ ಬದರಿನಾಥ್ ಹಾಗೂ ಮೇಘನಾ ಅನೂಪ್ ಮುಖ್ಯಭೂಮಿಕೆಯಲ್ಲಿದ್ದಾರೆ. ಚಾರೆಡ್ ರೋಡ್ಹರ್ಸ್ಟ್ ಸಂಗೀತ ನೀಡಿದ್ದಾರೆ.

    ಅಮೇರಿಕಾದಲ್ಲಿ ಉತ್ತಮ ಪ್ರಶಂಸೆಗೆ ಪಾತ್ರವಾಗಿರುವ 'ಏನೆಂದು ಹೆಸರಿಡಲಿ' ಕರ್ನಾಟಕದಲ್ಲೂ ಪ್ರದರ್ಶಿಸುವ ಯೋಜನೆ ಚಿತ್ರತಂಡಕ್ಕಿದೆ.

    English summary
    A group of Kannadigas in US have come up with a Kannada Short Film 'Enendhu Hesaridali'. Shweta Srinivas is the director of the film, which features Kishan Badarinath and Meghana Anoop.
    Tuesday, May 3, 2016, 18:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X