»   » ಯಶ್-ರಾಧಿಕಾ ರೋಮ್ಯಾನ್ಸ್ ಗೆ ಸಾಕ್ಷಿಯಾದ ಚೆಂದದ ಹಾಡುಗಳು

ಯಶ್-ರಾಧಿಕಾ ರೋಮ್ಯಾನ್ಸ್ ಗೆ ಸಾಕ್ಷಿಯಾದ ಚೆಂದದ ಹಾಡುಗಳು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಹಾಟ್ ಕಪಲ್ ಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ನಡುವೆ ನಡೆಯುತ್ತಿದ್ದ 'ಸಂಥಿಂಗ್ ಸಂಥಿಂಗ್' ಬಗ್ಗೆ ಕೊನೆಗೂ ಎಲ್ಲರಿಗೂ ನಿಖರ ಉತ್ತರ ದೊರೆತಿದೆ.

ಇದೀಗ ಈ ಕ್ಯೂಟ್ ಜೋಡಿಯ 5 ವರ್ಷದ ದೀರ್ಘ ಕಾಲದ ಪ್ರೀತಿಗೆ ಅಧೀಕೃತ ಮುದ್ರೆ ಬಿದ್ದಿದ್ದು, ನಾಳೆ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ನ ರಾಜ-ರಾಣಿ ಅಂತಾನೇ ಖ್ಯಾತಿ ಗಳಿಸಿರುವ ಈ ಜೋಡಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ.[ನಟ ಯಶ್ - ರಾಧಿಕಾ ಪಂಡಿತ್ ಲವ್ ಸಕ್ಸಸ್: ನಿಶ್ಚಿತಾರ್ಥ ಫಿಕ್ಸ್.!]

ಇವರಿಬ್ಬರ ಸಿನಿಮಾವನ್ನು ಕೂಡ ತುಂಬಾ ಪ್ರೇಕ್ಷಕರು ಇಷ್ಟಪಟ್ಟು ನೋಡುತ್ತಾರೆ. ಮಾತ್ರವಲ್ಲದೇ ಯಶ್ ಗೆ ಆನ್ ಸ್ಕ್ರೀನ್ ನಲ್ಲಿ ಸರಿಯಾದ ಜೋಡಿ ಎಂದರೆ ಅದು ರಾಧಿಕಾ ಪಂಡಿತ್ ಅನ್ನೋದು ಹಲವು ಅಭಿಮಾನಿಗಳ ಅಭಿಪ್ರಾಯ.

ಅಂದಹಾಗೆ ಇವರಿಬ್ಬರ ಕೆಮಿಸ್ಟ್ರಿ ಆನ್ ಸ್ಕ್ರೀನ್ ಮಾತ್ರವಲ್ಲದೇ ಆಫ್ ಸ್ಕ್ರೀನ್ ನಲ್ಲೂ ಬಹಳ ಚೆನ್ನಾಗಿ ವರ್ಕೌಟ್ ಆಗುತ್ತೆ. ಇದಕ್ಕೆ ಉತ್ತಮ ನಿದರ್ಶನ ಅಂದ್ರೆ ಈಗಾಗಲೇ ತೆರೆಗೆ ಬಂದಿರುವ ಸಿನಿಮಾಗಳು.[ಯಶ್-ರಾಧಿಕಾ ನಿಶ್ಚಿತಾರ್ಥ: ಹುಡುಗನ ತಾಯಿ ಏನಂತಾರೆ.?]

ಇದೀಗ ಯಶ್-ರಾಧಿಕಾ ಪಂಡಿತ್ ನಿಶ್ಚಿತಾರ್ಥದ ಸ್ಪೆಷಲ್ ಅಂತ ಇವರಿಬ್ಬರ ಬೆಸ್ಟ್ ರೋಮ್ಯಾಂಟಿಕ್ ಹಾಡುಗಳ ಕಲೆಕ್ಷನ್ಸ್ ನಿಮಗಾಗಿ ಹೊತ್ತು ತಂದಿದ್ದೇವೆ. ನೋಡಿ ಎಂಜಾಯ್ ಮಾಡಿ....

ಬುಕ್ಕ್ ಆದ ರಾಮಾಚಾರಿ

ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಮಿ.ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿನ, ಟೈಟಲ್ ಸಾಂಗ್ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಯಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಪಕ್ಕಾ ನಿಜ ಜೀವನದ ಪ್ರೇಮಿಗಳಾಗೇ ಮಿಂಚಿದ್ದಾರೆ. ಯಶ್ ವಿಭಿನ್ನವಾಗಿ ರಾಧಿಕಾ ಪಂಡಿತ್ ಅವರಿಗೆ ಪ್ರಪೋಸ್ ಮಾಡಿದ ಮೇಲೆ ಈ ಹಾಡು ಶುರುವಾಗುತ್ತದೆ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಟೈಟಲ್ ಸಾಂಗ್ ಇಲ್ಲಿದೆ ನೋಡಿ.....[ಯಶ್ ಈ ತರಹ ಪ್ರಪೋಸ್ ಮಾಡಿದ್ರೆ, ಯಾರ್ ಬೇಕಾದ್ರೂ ಒಪ್ಕೊಳ್ತಾರೆ.!]

ಮಳೆ ಬರುವ ಹಾಗಿದೆ

'ಮೊಗ್ಗಿನ ಮನಸು' ಚಿತ್ರದಲ್ಲಿ, ಕಾಲೇಜಿಗೆ ಕಾಲಿಟ್ಟ ಮೊದ-ಮೊದಲ ದಿನಗಳಲ್ಲಿ ಪ್ರೀತಿ-ಪ್ರೇಮದ ಬಗ್ಗೆ ಹಲವಾರು ಕನಸುಗಳನ್ನು ಇಟ್ಟುಕೊಂಡು ಹೋಗುವ ರಾಧಿಕಾ ಪಂಡಿತ್ ಗೆ ಯಶ್ ಮೇಲೆ ಪ್ರೀತಿ ಹುಟ್ಟುತ್ತದೆ. ಪ್ರೀತಿ ಆದ ಮೇಲೆ ಇವರಿಬ್ಬರು ಜೋಡಿಹಕ್ಕಿಗಳಾಗಿ ಸ್ವಚ್ಛಂದವಾಗಿ ಹಾರಾಡುತ್ತಾರೆ. ಆವಾಗ ಪರಿಸ್ಥಿತಿಗೆ ತಕ್ಕಂತೆ ಈ ಹಾಡು. ಈ ಹಾಡಿನಲ್ಲಿ ಇಬ್ಬರೂ ಮುದ್ದು-ಮುದ್ದಾಗಿ ಕಾಣಿಸುತ್ತಾರೆ. 'ಮೊಗ್ಗಿನ ಮನಸು' ಚಿತ್ರದ 'ಮಳೆ ಬರುವ ಹಾಗಿದೆ' ಹಾಡನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ....[ಯಶ್ ಗೆ 'ಪ್ರೇಮಲೋಕ'ದ ರವಿಚಂದ್ರನ್ 'Hats Off' ಹೇಳಿದ್ದು ಇದೇ ಕಾರಣಕ್ಕೆ.!]

ಮೊಗ್ಗಿನ ಮನಸುಗಳು ಒಡೆದು ಚೂರಾದಾಗ

ಹರೆಯದ ವಯಸ್ಸಿನಲ್ಲಿ ಪ್ರೀತಿ-ಪ್ರೇಮ ಅಂತ ಆಗುತ್ತೆ. ಎಲ್ಲವೂ ಚೆನ್ನಾಗೇ ಇರುತ್ತೆ, ಆದ್ರೆ ತನ್ನ ಆತ್ಮೀಯ ಗೆಳತಿಗೆ ಒಬ್ಬ ಕೈ ಕೊಟ್ಟು ಮೋಸ ಮಾಡಿ ಹೋದಾಗ, ಆಕೆ ಆತ್ಮಹತ್ಯೆಗೆ ಪ್ರಯತ್ನ ಪಡುತ್ತಾಳೆ. ಆವಾಗ ರಾಧಿಕಾ ಪಂಡಿತ್ ಕೂಡ ಹೆದರಿ ಯಶ್ ಗೆ ಮರೆತು ಬಿಡು ಎನ್ನುತ್ತಾಳೆ. ಎರಡೂ ಮನಸುಗಳು ಒಡೆದು-ಒಡೆದು ಚೂರು-ಚೂರಾಗುತ್ತವೆ. ಮಾಡದ ತಪ್ಪಿಗೆ ಯಶ್ ಕೊರಗುತ್ತಾನೆ. ಮೊಗ್ಗಿನ ಮನಸು ಚಿತ್ರದ ಬ್ರೇಕ್ ಅಪ್ ದೃಶ್ಯ ನೋಡಿ ಇಲ್ಲಿದೆ...

ಪ್ಯಾಚಪ್ ಸಾಂಗ್

ಭಯದಿಂದ ಬಿಟ್ಟು ಹೋಗುವ ರಾಧಿಕಾಳ ನೆನಪಲ್ಲೇ ಕೊರಗುವ ಯಶ್, ಕೊನೆಗೆ ತನ್ನ ಪ್ರೀತಿ ಶುದ್ಧವಾದದ್ದು, ಅದರಲ್ಲಿ ಯಾವುದೇ ಮೋಸ ಇಲ್ಲ ಅಂತ ಹಾಡಿನ ಮೂಲಕ ಹೇಳುತ್ತಾರೆ. 'ಮೊಗ್ಗಿನ ಮನಸು' ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಯಶ್ ಹಾಡುವ ಪ್ಯಾಚಪ್ ಸಾಂಗ್ 'ಐ ಲವ್ ಯೂ' ಅಂದು ಎಲ್ಲಾ ಭಗ್ನ ಪ್ರೇಮಿಗಳ ಹೃದಯವನ್ನು ಮೀಟಿತ್ತು. 'ಐ ಲವ್ ಯೂ' ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ....

ಹೃದಯಕ್ಕೆ ಮುಟ್ಟುವ ಹಾಡು

'ಡ್ರಾಮಾ' ಚಿತ್ರದಲ್ಲಿ ಯಶ್ ಮತ್ತು ರಾಧಿಕಾ ಮಾಡಿದ ನಟನೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗಿದೆ. ಅದರಲ್ಲೂ ಆ ಚಿತ್ರದ 'ಚೆಂದುಟಿಯ ಪಕ್ಕದಲಿ, ತುಂಬಾ ಹತ್ತಿರ ನಿಂತು, ಗುರಿಯಿಟ್ಟು ಕಾಡಿಗೆಯ ಬೊಟ್ಟಿಡ್ಲಾ' ಎಂಬ ಹಾಡಂತೂ ಎಲ್ಲರಿಗೂ ಫೇವರಿಟ್. ತುಂಬಾ ನಿಧಾನವಾಗಿ, ಹೃದಯಕ್ಕೆ ಹತ್ತಿರವಾಗುವ ಈ ಹಾಡು ತುಂಬಾನೇ ರೋಮ್ಯಾಂಟಿಕ್ ಆಗಿದೆ. ಈ ಹಾಡಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಬಹು ಜನುಮಗಳ ಅನುಬಂಧ

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಸಖತ್ ರೋಮ್ಯಾಂಟಿಕ್ ಹಾಡು 'ಉಪವಾಸ ಈ ಕಣ್ಣಿಗೆ' ಎಲ್ಲಾ ಪ್ರೇಮಿಗಳ ಹಾಟ್ ಫೇವರಿಟ್. ಈ ಹಾಡಿನಲ್ಲಿ ಯಶ್ ಮತ್ತು ರಾಧಿಕಾ ಅವರು ತಮ್ಮ ನಿಜ ಪ್ರೀತಿಯನ್ನು ತೆರೆಯ ಮೇಲೆ ಕೂಡ ಅಷ್ಟೇ ಸುಂದರವಾಗಿ ಬಣ್ಣಿಸಿದ್ದಾರೆ. ಈ ಕ್ಯೂಟ್ ಕಪಲ್ ಗಳ 'ಉಪವಾಸ ಈ ಕಣ್ಣಿಗೆ' ಹಾಡು ಇಲ್ಲಿದೆ ನೋಡಿ...

ಏನಪ್ಪಾ ಸಂಗತಿ

'ಮಿಸ್ಟರ್ ಅಂಡ್ ಮಿಸಸ್' ರಾಮಾಚಾರಿ ಚಿತ್ರದ 'ಏನಪ್ಪಾ ಸಂಗತಿ' ಹಾಡು ಕೇಳೋದಕ್ಕಿಂತಲೂ, ನೋಡಲು ತುಂಬಾನೇ ಖುಷಿ ಎನಿಸುತ್ತದೆ. ಈ ಹಾಡಿನಂತೆ ನಿಜ ಜೀವನದಲ್ಲೂ ಇವರಿಬ್ಬರು ಇದೇ ತರ ಇರಬಹುದಲ್ಲವೇ, ಯಶ್ ಪ್ರೀತಿಯಿಂದ ಮಾಡೋ ತರ್ಲೆ, ರಾಧಿಕಾ ಪಂಡಿತ್ ಮುದ್ದು-ಮುದ್ದಾದ ಪ್ರತಿಕ್ರಿಯೆ ಎಲ್ಲವೂ ಚೆಂದ. ಈ ಹಾಡು ನೋಡುತ್ತಿದ್ದರೆ, ಪ್ರೇಮಿಗಳಿಗೂ ಏನೋ ಒಂಥಾರ ಖುಷಿ ಎನಿಸುತ್ತೆ. 'ಏನಪ್ಪಾ ಸಂಗತಿ' ಹಾಡಿಗಾಗಿ ಈ ವಿಡಿಯೋ ನೋಡಿ...

English summary
After 5 long years of Dating, Kannada Actor Yash and Kannada Actress Radhika Pandit are finally getting engaged tomorrow (August 12th, 2016) in Goa. Here is the Best Romantic songs of Yash and Radhika Pandit. Check it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada