For Quick Alerts
  ALLOW NOTIFICATIONS  
  For Daily Alerts

  'ಟಗರು' ಸಿನಿಮಾ ನೋಡಿದ ಇಂಗ್ಲೆಂಡ್ ಕ್ರಿಕೆಟರ್ ಮಾಡಿದ್ದೇನು?

  By Pavithra
  |
  ಕ್ರಿಕೆಟ್ ಅಂಗಳದಲ್ಲಿ ಟಗರು ದರ್ಬಾರ್ | Tagaru movie craze has reached cricket field | Filmibeat Kannada

  ಯಶಸ್ವಿಯಾಗಿ 50 ದಿನ ಪೂರೈಸಿರುವ ಟಗರು ಸಿನಿಮಾ ನೂರನೇ ದಿನದತ್ತ ಮುನ್ನುಗುತ್ತಿದೆ. ಹ್ಯಾಟ್ರಿಕ್ ಹೀರೋ ಅಭಿನಯದ ಹಾಗೂ ಸೂರಿ ನಿರ್ದೇಶನಕ್ಕೆ ಇಡೀ ಸಿನಿಮಾರಂಗವೇ ಫಿದಾ ಆಗಿದ್ದು, ಪರಭಾಷೆಯ ಪ್ರೇಕ್ಷಕರು ಹಾಗೂ ಸಿನಿಮಾರಂಗದ ನಂಟು ಇಲ್ಲದವರು ಕೂಡ ಟಗರು ಚಿತ್ರವನ್ನು ನೋಡಲು ಇಷ್ಟ ಪಡುತ್ತಿದ್ದಾರೆ.

  ಇತ್ತೀಚಿಗಷ್ಟೆ ಇಂಗ್ಲೆಂಡ್ ಕ್ರಿಕೆಟರ್ 'ಒವೈಶ್ ಷಾ' ಟಗರು ಸಿನಿಮಾವನ್ನ ನೋಡಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾವನ್ನ ನೋಡಿರುವ ಒವೈಶ್ ಷಾ ಚಿತ್ರ ಮತ್ತು ಶಿವಣ್ಣನ ಅಭಿನಯಕ್ಕೆ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದಾರೆ.

  50 ದಿನ ಪೂರೈಸಿದ 'ಟಗರು' : ಅಭಿಮಾನಿಗಳ ಜೊತೆಗೆ ಯಶಸ್ವಿ ಕಾರ್ಯಕ್ರಮ 50 ದಿನ ಪೂರೈಸಿದ 'ಟಗರು' : ಅಭಿಮಾನಿಗಳ ಜೊತೆಗೆ ಯಶಸ್ವಿ ಕಾರ್ಯಕ್ರಮ

  ಟಗರು ಸಿನಿಮಾ ನೋಡಿದ ನಂತರ ಒವೈಶ್ ಷಾ ಖುದ್ದು ಶಿವಣ್ಣನ ಸಿನಿಮಾ ಸೆಟ್ ಗೆ ಬೇಟಿ ಕೊಟ್ಟು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಿನಿಮಾರಂಗಕ್ಕೂ ಕ್ರಿಕೆಟ್ ಲೋಕಕ್ಕೂ ಒಂಥರಾ ನಂಟು. ಕ್ರಿಕೆಟರ್ ಆಗಬೇಕು ಎಂದಿದ್ದವರು ಸಿನಿಮಾ ಸ್ಟಾರ್ ಗಳಾಗಿರುವ ಸಾಕಷ್ಟು ಉದಾಹರಣೆಗಳಿವೆ.

  ಶಿವರಾಜ್ ಕುಮಾರ್ ಕೂಡ ಒವೈಶ್ ಷಾ ಟಗರು ಸಿನಿಮಾ, ಅದರಲ್ಲಿಯೂ ಕನ್ನಡ ಚಿತ್ರವನ್ನ ನೋಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮಾತ್ರವಲ್ಲದೆ ಎಲ್ಲೆಡೆ ಟಗರು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಹಾಗೂ ಬೇರೆ ಭಾಷೆಯ ಜನರು ಸಿನಿಮಾವನ್ನ ಮೆಚ್ಚಿಕೊಳ್ಳುತ್ತಿರುವುದು ಕನ್ನಡಿಗರಿಗೆ ಖುಷಿಯ ವಿಚಾರ.

  English summary
  England cricketer Owais Shah watched tagaru kannada movie, After watching the movie Owais Shah met Shivarajkumar and share his experience about the film, Shivarajkumar, Manvitha Harish and Bhavana are acted in Tagaru movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X