For Quick Alerts
  ALLOW NOTIFICATIONS  
  For Daily Alerts

  ಚೇತನ್ 'ಅತಿರಥ' ಚಿತ್ರದಲ್ಲಿ ಸೊಂಟ ಬಳುಕಿಸಿದ ನಟಿ ಎಸ್ತರ್!

  By Suneel
  |

  ಮಂಗಳೂರು ಮೂಲದ ಬಹುಭಾಷಾ ನಟಿ ಎಸ್ತರ್ ನರೋನ್ಹಾ ಕನ್ನಡಕ್ಕಿಂತ ಇತರೆ ಭಾಷೆಗಳಲ್ಲಿ ಕಾಣಿಸಿಕೊಂಡಿದ್ದೆ ಹೆಚ್ಚು. ತೆಲುಗು, ತಮಿಳು, ಕೊಂಕಣಿ, ಮರಾಠಿ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಬಾಲಿವುಡ್ ಅಂಗಳದಲ್ಲೂ ಹೆಸರು ಮಾಡಿದ್ದಾರೆ. ಈ ಹಿಂದೆ 'ಉಸಿರಿಗಿಂತ ನೀನೆ ಹತ್ತಿರ' ಎಂಬ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದ ಇವರು ಈಗ ಮತ್ತೆ 'ಆ ದಿನಗಳು' ಖ್ಯಾತಿಯ ಚೇತನ್ ಚಿತ್ರದ ಮೂಲಕ ಕನ್ನಡಕ್ಕೆ ಹಿಂದಿರಿಗಿದ್ದಾರೆ.

  ಹೌದು, ಚೇತನ್ ಅಭಿನಯದ 'ಅತಿರಥ' ಚಿತ್ರದಲ್ಲಿನ ಸ್ಪೆಷಲ್ ಸಾಂಗ್ ಒಂದಕ್ಕೆ ಎಸ್ತರ್ ಸೊಂಟ ಬಳುಕಿಸಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ರವರು ಬರೆದಿರುವ ಈ ವಿಶೇಷ ಹಾಡನ್ನು ಎಸ್ತರ್ ರವರೇ ಹಾಡಿದ್ದಾರೆ. ಈ ಸಾಂಗ್ ಗೆ ಮುರಳಿ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಈ ವಿಶೇಷ ಹಾಡನ್ನು ಮೈಸೂರಿನಲ್ಲಿ ಸುಮಾರ್ 5 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆಯಂತೆ.

  'ನೂರೊಂದು ನೆನಪು' ಚಿತ್ರದ ನಂತರ ನಟ ಚೇತನ್ ಅಭಿನಯಿಸುತ್ತಿರುವ 'ಅತಿರಥ' ಚಿತ್ರವನ್ನು ಮಹೇಶ್ ಬಾಬು ರವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮನರಂಜನೆಗಾಗಿ ಹೆಚ್ಚು ಸ್ಪೆಷಲ್ ಸಾಂಗ್ ಯಾವುದನ್ನು ಇಟ್ಟಿಲ್ಲದಿರುವುದರಿಂದ ನಿರ್ದೇಶಕರು ಕತೆಗೆ ಪೂರಕವಾಗಿ ಹಾಡೊಂದನ್ನು ಬರೆಸಿ ಎಸ್ತರ್ ನರೋನ್ಹಾ ಅವರಿಂದ ಸ್ಟೆಪ್ ಹಾಕಿಸಿದ್ದಾರೆ.

  ಅಂದಹಾಗೆ ಚಿತ್ರದಲ್ಲಿ 'ಆ ದಿನಗಳು' ಚೇತನ್‌ಗೆ ನವ ನಟಿ ಲತಾ ಹೆಗಡೆ ರವರು ಜೊತೆಯಾಗಿದ್ದಾರೆ. ಚಿತ್ರಕ್ಕೆ ಸುರಾಗ್ ಸಂಗೀತ ಸಂಯೋಜನೆ, ಜೈ ಆನಂದ್ ಛಾಯಾಗ್ರಹಣ ನಿರ್ವಹಣೆ ಇದೆ.

  English summary
  In order to up the entertainment quotient of Athiratha, director Mahesh Babu has roped in Ester Noronha to do an item song in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X