twitter
    For Quick Alerts
    ALLOW NOTIFICATIONS  
    For Daily Alerts

    ಟಾಟಾ, ಬಿರ್ಲಾಗಳೂ ಪ್ರಶಸ್ತಿ ಕೊಳ್ಳಲು ಸಾಧ್ಯವಿಲ್ಲ

    By ರಾಜೇಂದ್ರಚಿಂತಾಮಣಿ
    |
    <ul id="pagination-digg"><li class="previous"><a href="/news/if-hdk-watches-movie-he-will-keep-quite-sheshadri-083792.html">« Previous</a>

    5. ತಮ್ಮ ಮುಂದಿನ ಚಿತ್ರ ಯಾವಾಗ? ಯಾವ ವಿಷಯ ಆಯ್ಕೆ ಮಾಡಿಕೊಂಡಿದ್ದೀರಿ?
    ಮುಂದೆ ಯಾವ ಸಿನಿಮಾ ಮಾಡಬೇಕು ಎಂದು ಯೋಚನೆ ಮಾಡಬೇಕಿದೆ. ಮೊದಲೆಲ್ಲಾ ಕ್ಲಾರಿಟಿ ಇತ್ತು, ಯಾವ ತರಹದ ಸಿನಿಮಾ ಮಾಡಬಹುದು ಎಂದು. ಈಗ ಇಷ್ಟೊಂದು ಆತ್ಮಸ್ಥೈರ್ಯವನ್ನು ಕುಗ್ಗಿಸುವಂತೆ ಮಾಡಿದ್ದಾರೆ. ಆದರೆ ನನಗೆ ಆತ್ಮಸ್ಥೈರ್ಯ ಕುಗ್ಗಿಲ್ಲ, ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಿದ್ದೇನೆ. ಮುಂದಿನ ಸಿನಿಮಾ ಬಗ್ಗೆ ಯೋಚನೆ ಮಾಡಿ ಹೆಜ್ಜೆ ಇಡಬೇಕಾಗಿದೆ. ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಸಾಲದು.

    ಜವಾಬ್ದಾರಿಯಿಂದ ನಾನು ಚಿತ್ರ ಮಾಡಿದರೂ ಹೀಗೆಲ್ಲಾ ಆದರೆ ಇನ್ನು ಉಳಿದವರ ಪಾಡೇನು. ರಾಷ್ಟ್ರಪ್ರಶಸ್ತಿಗಾಗಿ ಸಿನಿಮಾ ಮಾಡ್ತಾರೆ ಅಂತಾರೆ, ರಾಷ್ಟ್ರಪ್ರಶಸ್ತಿಗಾಗಿ ಸಿನಿಮಾ ಮಾಡ್ತೀನಿ ಅನ್ನೋದಾದರೆ ಈ ಸಿನಿಮಾವನ್ನು ಹನ್ನೆರಡು ಕೇಂದ್ರಗಳಲ್ಲಿ ಯಾಕೆ ಬಿಡುಗಡೆ ಮಾಡಬೇಕಾಗಿತ್ತು? ಜನ ನೋಡಲಿ ಎಂಬುದು ತಾನೆ ನನ್ನ ಉದ್ದೇಶ.

    Even Tata Birla cant buy awards P Sheshadri

    ವಿಕೃತ ಮನಸ್ಸು ಎಂಬ ಪದ ಬಳಸುತ್ತಾರೆ. ಆ ಪದ ಕೇಳಿ ನನ್ನ ಮನಸ್ಸಿಗೆ ತುಂಬ ನೋವಾಯಿತು. ಒಂದು ವೇಳೆ ನಿರ್ಮಾಪಕ, ನಿರ್ದೇಶಕರದು ವಿಕೃತ ಮನಸ್ಸೇ ಆಗಿದ್ದರೆ ಚುನಾವಣೆ ಸಂದರ್ಭದಲ್ಲೇ ಈ ಚಿತ್ರವನ್ನು ಬಿಡುಗಡೆ ಮಾಡಿ ಉಳಿದ ಪಕ್ಷಗಳಿಗೆ ಆಹಾರವಾಗುವಂತೆ ಮಾಡಬಹುದಿತ್ತಲ್ಲಾ. ಚಿತ್ರಕ್ಕೆ ಬೇರೆ ತರಹ ಪ್ರಚಾರ ಸಿಗುತ್ತಿರಲಿಲ್ವಾ, ಹೆಚ್ಚು ಜನ ನೋಡುತ್ತಿರಲಿಲ್ಲವೇ? ಇನ್ನೊಂದಿಷ್ಟು ಕಾಂಟ್ರವರ್ಸಿ ಆಗುತ್ತಿರಲಿಲ್ಲವೇ? ಈ ರೀತಿಯ ಸಲಹೆಗಳು ನಮಗೂ ಬಂದವು. ಆ ರೀತಿಯ ವಿಕೃತ ಮನಸ್ಸಿನವರೇ ಆಗಿದ್ದರೆ ಆಗಲೇ ಬಿಡುಗಡೆ ಮಾಡುತ್ತಿದ್ದೆವು. ಚುನಾವಣೆ ಮುಗಿದ ಒಂದು ವಾರದ ಬಳಿಕ ಚಿತ್ರ ಬಿಡುಗಡೆ ಮಾಡುತ್ತಿರಲಿಲ್ಲ. ಸಾಮಾಜಿಕ ಕಳಕಳಿಯಿಂದ ಚಿತ್ರವನ್ನು ಬಿಡುಗಡೆ ಮಾಡಿದ್ದೇವೆ.

    ಯಾವುದೇ ಲಾಬಿ ಮಾಡಿ ರಾಷ್ಟ್ರ ಪ್ರಶಸ್ತಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಎಷ್ಟು ದಿನ ಎಂದು ನೀವು ಓಲೈಸಲು ಸಾಧ್ಯ. ಹದಿನೈದು ಮಂದಿ ಜ್ಯೂರಿ ಮೆಂಬರ್ಸ್ ಇರುತ್ತಾರೆ, ಎಲ್ಲಾ ರಾಜ್ಯಗಳಿಂದ ಬಂದಿರುತ್ತಾರೆ. ಅವರೆಲ್ಲರನ್ನೂ ಕೊಂಡುಕೊಳ್ಳಲು ಸಾಧ್ಯವೆ? ಟಾಟಾ, ಬಿರ್ಲಾಗಳಿಂದಲೂ ಸಾಧ್ಯವಿಲ್ಲ, ಅವರನ್ನು ಕೊಂಡುಕೊಳ್ಳಲು. ಎಷ್ಟು ಜನರನ್ನು ಕೊಂಡುಕೊಳ್ಳಲು ಸಾಧ್ಯ. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗೆ ಒಂದು ಘನತೆ ಇದೆ. ಆ ಘನತೆ, ಗೌರವನ್ನು ನಾವು ಉಳಿಸಬೇಕು. ಒಂದು ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ರದ್ದಾದರೂ ನಾನು ಇದೇ ರೀತಿಯ ಚಿತ್ರವನ್ನು ಮಾಡುತ್ತೇನೆ.

    <ul id="pagination-digg"><li class="previous"><a href="/news/if-hdk-watches-movie-he-will-keep-quite-sheshadri-083792.html">« Previous</a>

    English summary
    National films award winning director P Sheshadri interview. The director rejects all allegations on his latest film December 1. Former chief minister HD Kumaraswamy, who popularised the village stay (grama vastavya) during his tenure, is upset with the film 'December 1'. Actor-director Omprakash Naik accused National award winner director P Sheshadri of plagiarism. Here is the P Sheshadri answers to all allegations.
    Saturday, May 3, 2014, 12:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X