For Quick Alerts
  ALLOW NOTIFICATIONS  
  For Daily Alerts

  'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ವೀಕ್ಷಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ

  By Harshitha
  |

  ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ: ರಾಮಣ್ಣ ರೈ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೆಚ್ಚಿಸುವ ಈ ಚಿತ್ರಕ್ಕೆ ಯುವಕರು ಜೈಕಾರ ಹಾಕುತ್ತಿದ್ದಾರೆ.

  ಇದೀಗ ಇದೇ ಚಿತ್ರವನ್ನ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಣ್ತುಂಬಿಕೊಂಡಿದ್ದಾರೆ. ಹೌದು, ಕೊಂಚ ರಿಲ್ಯಾಕ್ಸ್ ಮೂಡಿನಲ್ಲಿದ್ದ ಸಿದ್ಧರಾಮಯ್ಯ ನಿನ್ನೆ ಸಂಜೆ ಮೈಸೂರಿನ ಡಿ.ಆರ್.ಸಿ ಮಾಲ್ ನಲ್ಲಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ: ರಾಮಣ್ಣ ರೈ' ಚಿತ್ರವನ್ನ ವೀಕ್ಷಿಸಿದರು.

  2007 ರಲ್ಲಿ ಕಾಸರಗೋಡಿನಲ್ಲಿ ನಡೆದ ಒಂದು ಘಟನೆಯನ್ನ ಇಟ್ಟುಕೊಂಡು ರಿಷಬ್ ಶೆಟ್ಟಿ ಮಾಡಿರುವ ಮಜವಾದ ಚಿತ್ರವಿದು. ಗಡಿಭಾಗದಲ್ಲಿ ಕನ್ನಡ ಶಾಲೆಗಳು ಒಂದೊಂದಾಗಿ ಮರೆಯಾಗುತ್ತಿರುವ ಗಂಭೀರ ವಿಷಯವನ್ನ ಹೊತ್ತಿರುವ ಈ ಚಿತ್ರ ಸಿದ್ಧರಾಮಯ್ಯ ರವರನ್ನು ಆಕರ್ಷಿಸಿದೆ.

  ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'

  ಅಷ್ಟಕ್ಕೂ, ಸಿದ್ಧರಾಮಯ್ಯ ಥಿಯೇಟರ್ ಗೆ ಹೋಗಿ ಸಿನಿಮಾ ವೀಕ್ಷಿಸಿರುವುದು ಇದೇ ಮೊದಲಲ್ಲ. ತೆಲುಗಿನ 'ಬಾಹುಬಲಿ' ಚಿತ್ರವನ್ನ ಮೊಮ್ಮಕ್ಕಳ ಜೊತೆಗೆ ಸಿದ್ಧರಾಮಯ್ಯ ವೀಕ್ಷಿಸಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರವನ್ನೂ ಸಿದ್ಧರಾಮಯ್ಯ ನೋಡಿದ್ದರು. ಇದೀಗ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ: ರಾಮಣ್ಣ ರೈ' ಚಿತ್ರದ ಸರದಿ.

  ಸಿನಿಮಾ ನೋಡಿದ ನಂತರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ: ರಾಮಣ್ಣ ರೈ' ಬಗ್ಗೆ ಸಿದ್ಧರಾಮಯ್ಯ ಹಾಡಿ ಹೊಗಳಿದರು.

  ಅಂದ್ಹಾಗೆ, ನೀವು 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ: ರಾಮಣ್ಣ ರೈ' ಚಿತ್ರವನ್ನ ನೋಡಿದ್ರಾ.? ನೋಡಿದ್ರೆ, ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  EX CM Siddaramaiah watched 'Sarkari Hi.Pra.Shaale, Kasaragod' in DRC Mall, Mysuru.
  Sunday, August 26, 2018, 13:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X