Don't Miss!
- Sports
IND vs NZ 3rd T20: ಶುಭ್ಮನ್ ಗಿಲ್ ಸ್ಫೋಟಕ ಶತಕ; ಕಿವೀಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಭಾರತ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಮೇಕ್ ಮಾಡಿದ್ರೆ ಹೀನಾಯವಾಗಿ ಸೋಲುತ್ತೀರ; 2022ರಲ್ಲಿ ಮಕಾಡೆ ಮಲಗಿದ ರಿಮೇಕ್ ಚಿತ್ರಗಳಿವು!
ರಿಮೇಕ್ ಮಾಡಿ ಗೆದ್ದವರು ಹಾಗೂ ದೊಡ್ಡ ಮಟ್ಟದ ಹೆಸರು ಮಾಡಿದ ಹಲವಾರು ನಟ ಹಾಗೂ ನಿರ್ದೇಶಕರ ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿಯೇ ಇದೆ. ಬೇರೆ ಭಾಷೆಗಳಲ್ಲಿ ಹಿಟ್ ಆದ ಚಿತ್ರಗಳ ಹಕ್ಕನ್ನು ಪಡೆದು ಅದನ್ನು ಯಥಾವತ್ತಾಗಿ ಚಿತ್ರೀಕರಿಸುವ ರೂಢಿ ಕನ್ನಡ ಚಿತ್ರರಂಗದಲ್ಲಿ ಡಬಿಂಗ್ ಇಲ್ಲದೇ ಇರುವ ಕಾರಣದಿಂದಾಗಿ ತುಸು ಹೆಚ್ಚಾಗಿಯೇ ಇತ್ತು. ಇನ್ನು ಈ ರಿಮೇಕ್ ಚಿತ್ರಗಳನ್ನು ನೋಡಲು ಸಿನಿ ರಸಿಕರು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದರು.
ಹೀಗೆ ರಿಮೇಕ್ ಚಿತ್ರಗಳು ಒಳ್ಳೆಯ ಗಳಿಕೆಯನ್ನು ಮಾಡುತ್ತಿದ್ದ ಕಾರಣ ರಿಮೇಕ್ ಮಾಡುವ ಕಡೆ ಸ್ಟಾರ್ ನಟರೂ ಸಹ ಮನಸ್ಸು ಮಾಡುತ್ತಿದ್ದರು. ಆದರೆ ಕನ್ನಡಕ್ಕೂ ಡಬಿಂಗ್ ಕಾಲಿಟ್ಟ ನಂತರ ಈ ರಿಮೇಕ್ ಹಾವಳಿ ಸೈಲೆಂಟ್ ಆಗಿಬಿಟ್ಟಿದೆ. ಹೌದು, ಪ್ಯಾನ್ ಇಂಡಿಯಾ ಹವಾ ಹೆಚ್ಚಾದ ನಂತರ ಕನ್ನಡಕ್ಕೂ ವಿವಿಧ ಭಾಷೆಯ ಹಿಟ್ ಚಿತ್ರಗಳು ಡಬ್ ಆಗಿ ಬಿಡುಗಡೆಯಾಗುತ್ತಿರುವ ಕಾರಣ ರಿಮೇಕ್ ಚಿತ್ರ ನೋಡುವುದನ್ನು ಕನ್ನಡ ಸಿನಿ ರಸಿಕರು ನಿಲ್ಲಿಸಿಬಿಟ್ಟಿದ್ದಾರೆ.
ಹಾಗಿದ್ದರೂ ಸಹ ಕೆಲ ಚಿತ್ರಗಳನ್ನು ಈ ವರ್ಷ ಕನ್ನಡಕ್ಕೆ ರಿಮೇಕ್ ಮಾಡಿ ಬಿಡುಗಡೆ ಮಾಡಲಾಯಿತು. ಆದರೆ ಮೊದಲಿನ ಹಾಗೆ ಈ ವರ್ಷ ಕನ್ನಡದ ಚಿತ್ರ ಪ್ರೇಕ್ಷಕರು ಮಣೆ ಹಾಕಲಿಲ್ಲ. ಪುನೀತ್ ರಾಜ್‌ಕುಮಾರ್ ಇದ್ದ ಕಾರಣ ತಮಿಳಿನ 'ಓ ಮೈ ಕಡವುಲೆ' ರಿಮೇಕ್ ಚಿತ್ರ 'ಲಕ್ಕಿಮ್ಯಾನ್' ಸದ್ದು ಮಾಡಿದ್ದು ಬಿಟ್ಟರೆ ಉಳಿದ ರಿಮೇಕ್ ಚಿತ್ರಗಳು ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿವೆ.

ಸೋತ ರಿಮೇಕ್ ಚಿತ್ರಗಳ ಪಟ್ಟಿ
ದಯಾಳ್ ಪದ್ಮನಾಭನ್ ನಿರ್ದೇಶನದ, ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ನಟನೆಯ 'ಒಂಬತ್ತನೇ ದಿಕ್ಕು'. ಇದು ತಮಿಳಿನ 'ಕುರಂಗು ಬೊಮ್ಮೈ' ರಿಮೇಕ್
ಶಿವ ರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ನಟನೆಯ 'ಬೈರಾಗಿ'. ಇದು ತಮಿಳಿನ 'ಕಡಗು' ಚಿತ್ರದ ರಿಮೇಕ್
ಶ್ರೇಯಸ್ ಮಂಜು ನಟನೆಯ ಹಾಗೂ ನಂದಕಿಶೋರ್ ನಿರ್ದೇಶನದ 'ರಾಣಾ. ಇದು 'ತಡಯಾರಾ ತಾಕ್ಕಾ' ತಮಿಳು ಚಿತ್ರದ ರಿಮೇಕ್
ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ. ಇದು ತೆಲುಗಿನ 'ಕೇರ್ ಆಫ್ ಕಾಂಚೆರಪಾಲೆಂ' ಚಿತ್ರದ ರಿಮೇಕ್.
ಧೀರನ್ ರಾಮ್‌ಕುಮಾರ್ ಮೊದಲ ಚಿತ್ರ 'ಶಿವ 143'. ಇದು ತೆಲುಗಿನ ಸೂಪರ್ ಹಿಟ್ ಚಿತ್ರ 'ಆರ್‌ಎಕ್ಸ್ 100'ನ ರಿಮೇಕ್.
ರವಿಚಂದ್ರನ್ ನಟನೆಯ 'ರವಿ ಬೋಪಣ್ಣ'. ಇದು ಮಲಯಾಳಂನ 'ಜೋಸೆಫ್' ಚಿತ್ರದ ರಿಮೇಕ್.
ಜಿಮ್ ರವಿ ನಟನೆಯ 'ಪುರುಷೋತ್ತಮ'. ಇದು ಮಲಯಾಳಂನ 'ಪುದಿಯ ನಿಯಮಮ್'ನ ರಿಮೇಕ್.

ಕೆಲವರು ರಿಮೇಕ್ ಎಂಬುದನ್ನೂ ಮುಚ್ಚಿಟ್ರು
ಇನ್ನು ಈ ಮೇಲಿನ ಚಿತ್ರಗಳ ಪೈಕಿ ಮಾನ್ಸೂನ್ ರಾಗ ಹಾಗೂ ರಾಣಾ ಚಿತ್ರಗಳು ರಿಮೇಕ್ ಎಂಬ ವಿಷಯವನ್ನೇ ಬಹಿರಂಗಪಡಿಸಿರಲಿಲ್ಲ. ಎಲ್ಲಿಯೂ ರಿಮೇಕ್ ಎಂಬುದನ್ನು ಹೇಳಿಕೊಳ್ಳದೇ ಚಿತ್ರಮಂದಿರಕ್ಕೆ ಬಂದರೂ ಸಹ ಚಿತ್ರಕ್ಕೆ ಸಕ್ಸಸ್ ಎಂಬುದು ಮಾತ್ರ ಸಿಗಲಿಲ್ಲ. ವಿವಿಧ ಭಾಷೆಗಳ ಚಿತ್ರಗಳನ್ನು ನೋಡಿರುವ ಕನ್ನಡ ಸಿನಿ ರಸಿಕರು ಈ ಚಿತ್ರಗಳ ಟ್ರೈಲರ್ ನೋಡಿಯೇ ಇವು ರಿಮೇಕ್ ಎಂಬುದನ್ನು ಕಂಡುಹಿಡಿದುಬಿಟ್ಟಿದ್ದರು.

ರಿಮೇಕ್ ಬಿಟ್ರೆ ಒಳ್ಳೆಯದು
ಮೊದಲೇ ಹೇಳಿದಂತೆ ಈ ವರ್ಷ ಬಿಡುಗಡೆಗೊಂಡ ರಿಮೇಕ್ ಚಿತ್ರಗಳ ಪೈಕಿ ಲಕ್ಕಿಮ್ಯಾನ್ ಚಿತ್ರ ಹೊರತುಪಡಿಸಿ ಉಳಿದ ಯಾವ ಚಿತ್ರಗಳೂ ಸಹ ಗೆಲ್ಲಲಿಲ್ಲ. ಪುನೀತ್ ರಾಜ್‌ಕುಮಾರ್ ಹೊರತುಪಡಿಸಿ ಈ ಪಾತ್ರವನ್ನು ಬೇರೆಯವರು ನಿರ್ವಹಿಸಿದ್ದರೆ ಚಿತ್ರದ ಫಲಿತಾಂಶ ಏನಾಗುತ್ತಿತ್ತು ಎಂಬುದು ನಿಮಗೇ ತಿಳಿದಿದೆ. ಒಟ್ಟಿನಲ್ಲಿ ಕನ್ನಡದ ಸಿನಿ ರಸಿಕರು ರಿಮೇಕ್ ಚಿತ್ರಗಳಿಗೆ ಬೆಂಬಲ ನೀಡುತ್ತಿಲ್ಲ ಎಂಬ ಸತ್ಯವನ್ನು ಅರಿತುಕೊಂಡು ಒಳ್ಳೆಯ ಸ್ವಂತ ಕಥೆ ಇರುವ ಚಿತ್ರಗಳನ್ನು ಇಟ್ಟುಕೊಂಡು ಜನರ ಮುಂದೆ ಬಂದರೆ ಮಾತ್ರ ಜನರು ಚಿತ್ರ ನೋಡುತ್ತಾರೆಯೇ ಹೊರತು ರಿಮೇಕ್ ಮಾಡಿ ಎಷ್ಟೇ ಗಿಮಿಕ್ ಮಾಡಿದರೂ ಚಿತ್ರ ಮಾತ್ರ ಗೆಲ್ಲುವುದಿಲ್ಲ.