For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ತಂಡದಿಂದ ಭರ್ಜರಿ ಅಪ್‌ಡೇಟ್: ಟ್ರೈಲರ್ ಬಿಡುಗಡೆ?

  |

  ಲಾಕ್‌ಡೌನ್ ಅಂತ್ಯವಾದ ನಂತರ ಕೆಜಿಎಫ್ 2 ತಂಡ ಬಹು ವೇಗವಾಗಿ ಕೆಲಸ ಮಾಡಿದ್ದು, ಪ್ರೇಕ್ಷಕರಿಗೆ ಸಿನಿಮಾ ತೋರಿಸುವ ಧಾವಂತದಲ್ಲಿದೆ. ಕೆಜಿಎಫ್ 2 ನ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಕುಂಬಳಕಾಯಿ ಒಡೆಯಲಿದೆ ತಂಡ.

  ಕೆಜಿಎಫ್ 2 ನಿರ್ದೇಶಕ ಪ್ರಶಾಂತ್ ನೀಲ್ ಇಂದು ಟ್ವೀಟ್ ಮಾಡಿದ್ದು, ಚಿತ್ರೀಕರಣ ಅಂತಿಮ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವೂ ಆಗಲಿದೆ ಎಂದಿದ್ದಾರೆ. ಜೊತೆಗೆ ಒಂದು ಪ್ರಮುಖ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

  ಡಿಸೆಂಬರ್ 21 ರಂದು ಕೆಜಿಎಫ್ 2 ಸಿನಿಮಾದ ಬಗ್ಗೆ ಮಹತ್ವದ ಅಪ್‌ಡೇಟ್ ಒಂದನ್ನು ಅಭಿಮಾನಿಗಳಿಗೆ ನೀಡಲಿದ್ದೇವೆ ಎಂದಿದ್ದಾರೆ ಪ್ರಶಾಂತ್ ನೀಲ್.

  ಡಿಸೆಂಬರ್ 21 ರ ದಿನ ಕೆಜಿಎಫ್ ತಂಡಕ್ಕೆ ಅತ್ಯಂತ ಮಹತ್ವದ್ದು, ಕಳೆದ ಎರಡು ವರ್ಷಗಳ ಹಿಂದೆ ಇದೇ ದಿನದಂದು ಕೆಜಿಎಫ್ ಚಾಪ್ಟರ್ 1 ಸಿನಿಮಾ ಬಿಡಗುಡೆ ಆಗಿ ಇತಿಹಾಸ ಸೃಷ್ಟಿಸಿತ್ತು. ಈಗ ಇದೇ ದಿನ ಸಿನಿಮಾ ಕುರಿತಂತೆ ಪ್ರಮುಖ ಅಪ್‌ಡೇಟ್ ಒಂದು ಪ್ರೇಕ್ಷಕರಿಗೆ ನೀಡಲಿದೆ ಚಿತ್ರತಂಡ.

  ಅಭಿಮಾನಿಗಳು ಈ ವರ್ಷ ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ, ಅವರಿಗಾಗಿ ಡಿಸೆಂಬರ್ 21 ರಂದು 10 ಗಂಟೆಗೆ ನಮ್ಮ ತಂಡದ ಎಲ್ಲಾ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ಪ್ರಮುಖ ಅಪ್‌ಡೇಟ್ ಒಂದು ಅಭಿಮಾನಿಗಳಿಗೆ ಸಿಗಲಿದೆ ಎಂದಿದ್ದಾರೆ ಪ್ರಶಾಂತ್ ನೀಲ್.

  ಶರಣ್ ಅಭಿನಯದ ಹೊಸ ಚಿತ್ರ ಘೋಷಣೆ | Saran | Tarun Sudhir | Filmibeat kannada

  ಡಿಸೆಂಬರ್ 21 ರಂದು ಕೆಜಿಎಫ್ 2 ತಂಡದ ಟ್ರೇಲರ್ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

  English summary
  Exciting Update from Yash’s Most Expected Movie KGF Chapter 2 on Dec 21st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X