For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರಗಳ ಕುರಿತು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ: ನಟ, ನಿರ್ಮಾಪಕರಿಗೆ ಆತಂಕ

  |

  ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಸಂಪೂರ್ಣ ಬಂದ್ ಆಗಿದ್ದ ಚಿತ್ರಮಂದಿರಗಳು. 2020 ರ ಅಕ್ಟೋಬರ್‌ನಲ್ಲಿ 50% ಸೀಟು ಮಾತ್ರವೇ ಭರ್ತಿ ಮಾಡಬೇಕೆಂಬ ನಿಯಮ ವಿಧಿಸಿ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಯಿತು.

  ಆ ನಂತರ 100% ಸೀಟು ಭರ್ತಿಗೆ ಅವಕಾಶ ನೀಡಿ ಕೇಂದ್ರ ಸರ್ಕಾರವು ಜನವರಿ 27 ರಂದು ಆದೇಶ ಹೊರಡಿಸಿತು. ರಾಜ್ಯದಲ್ಲಿ ಫೆಬ್ರವರಿ ತಿಂಗಳ ಮೊದಲ ವಾರದಿಂದ ಚಿತ್ರಮಂದಿರಗಳು ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಆರಂಭಿಸಿದವು. ಆದರೆ ಈಗ ಮತ್ತೆ ಚಿತ್ರಮಂದಿರಕ್ಕೆ ಕುತ್ತು ಬಂದಿದೆ.

  ಆ ಅನಿಷ್ಟ ಈಗ ನಮ್ಮ ಬುಡಕ್ಕೆ ಬಂದಿದೆ: ರಿಷಬ್ ಶೆಟ್ಟಿ ಆಕ್ರೋಶಆ ಅನಿಷ್ಟ ಈಗ ನಮ್ಮ ಬುಡಕ್ಕೆ ಬಂದಿದೆ: ರಿಷಬ್ ಶೆಟ್ಟಿ ಆಕ್ರೋಶ

  ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು. ಈ ಬಗ್ಗೆ ಬಿಬಿಎಂಪಿ ಆತಂಕಗೊಂಡಿದೆ. ಹಾಗಾಗಿ ಚಿತ್ರಮಂದಿರಗಳ ಒಟ್ಟು ಸೀಟು ಸಾಮರ್ಥ್ಯದ ಅರ್ಧದಷ್ಟು ಮಾತ್ರವೇ ಪ್ರೇಕ್ಷಕರು ಸಿನಿಮಾ ನೋಡುವಂತೆ ಮತ್ತೆ ನಿಯಮ ವಿಧಿಸಬೇಕು ಎಂದು ಬಿಬಿಎಂಪಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

  ಇಂದು (ಮಾರ್ಚ್ 19) ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಒಂದೇ ದಿನ ಬೆಂಗಳೂರಿನಲ್ಲಿ 1048 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಮತ್ತೆ ಕೊರೊನಾ ಹೆಚ್ಚಾಗುತ್ತಿದೆ. ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ಭಾಗಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

  ಸೋಂಕು ಹೆಚ್ಚಾಗಲು ಟ್ರಾವೆಲ್ ಹಿಸ್ಟರಿ ಕಾರಣ: ಮಂಜುನಾಥ್ ಪ್ರಸಾದ್

  ಸೋಂಕು ಹೆಚ್ಚಾಗಲು ಟ್ರಾವೆಲ್ ಹಿಸ್ಟರಿ ಕಾರಣ: ಮಂಜುನಾಥ್ ಪ್ರಸಾದ್

  ಪ್ರಕರಣ ಹೆಚ್ಚಲು ಸೋಂಕಿತರ ಟ್ರಾವೆಲ್ ಹಿಸ್ಟರಿ ಕಾರಣ. ಜಾತ್ರೆ, ದೇವಸ್ಥಾನ, ಚಿತ್ರಮಂದಿರ, ಜಿಮ್, ಪಾರ್ಟಿ ಹಾಲ್, ಮದುವೆಗಳಿಗೆ ಹೋಗಿ ಬಂದವರಲ್ಲಿ ಕೊರೊನಾ ಹೆಚ್ಚಾಗಿ ಕಂಡುಬರುತ್ತಿದೆ. ಇವುಗಳು ಕೊರೊನಾ ಹಾಟ್‌ಸ್ಪಾಟ್‌ಗಳಾಗಿವೆ ಎಂದು ಅವರು ಮಾಹಿತಿ ನೀಡಿದರು.

  ಚಿತ್ರಮಂದಿರಗಳಲ್ಲಿ ಕೊರೊನಾ ಹರಡುವ ಸಾಧ್ಯತೆ ಹೆಚ್ಚು: ಪ್ರಸಾದ್

  ಚಿತ್ರಮಂದಿರಗಳಲ್ಲಿ ಕೊರೊನಾ ಹರಡುವ ಸಾಧ್ಯತೆ ಹೆಚ್ಚು: ಪ್ರಸಾದ್

  ಚಿತ್ರಮಂದಿರಗಳಲ್ಲಿ ಕೊರೊನಾ ಹರಡುವ ಸಾಧ್ಯತೆ ಅತಿ ಹೆಚ್ಚಿದೆ. ಹಾಗಾಗಿ ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಿಗಷ್ಟೆ ಸಿನಿಮಾ ವೀಕ್ಷಿಸಲು ಅವಕಾಶ ನೀಡಬೇಕು ಎಂದು ನಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು ಮಂಜುನಾಥ್ ಪ್ರಸಾದ್.

  ಪಾರ್ಟಿ ಹಾಲ್, ಜಿಮ್‌ಗಳನ್ನು ಬಂದ್ ಮಾಡಬೇಕು: ಪ್ರಸಾದ್

  ಪಾರ್ಟಿ ಹಾಲ್, ಜಿಮ್‌ಗಳನ್ನು ಬಂದ್ ಮಾಡಬೇಕು: ಪ್ರಸಾದ್

  ಚಿತ್ರಮಂದಿರ ಮಾತ್ರವೇ ಅಲ್ಲದೆ, ಅಪಾರ್ಟ್‌ಮೆಂಟ್ ಗಳಲ್ಲಿನ ಪಾರ್ಟಿ ಹಾಲ್, ಜಿಮ್‌ಗಳನ್ನು ಬಂದ್ ಮಾಡಬೇಕು. ಮಾಲ್‌ಗಳಲ್ಲಿ ಸಹ ಕಡಿಮೆ ಜನಕ್ಕೆ ಅವಕಾಶ ಕೊಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

  ಚಿತ್ರಮಂದಿರ, ಮಾಲ್‌ಗಳಿಗೆ ಹೋಗಿ ದಂಡ ವಿಧಿಸುವಷ್ಟು ಮಾರ್ಷಲ್‌ಗಳಿಲ್ಲ

  ಚಿತ್ರಮಂದಿರ, ಮಾಲ್‌ಗಳಿಗೆ ಹೋಗಿ ದಂಡ ವಿಧಿಸುವಷ್ಟು ಮಾರ್ಷಲ್‌ಗಳಿಲ್ಲ

  ನಮ್ಮಲ್ಲಿ ಮಾಲ್‌, ಚಿತ್ರಮಂದಿರಗಳು, ಮದುವೆ ಮನೆ, ಪಾರ್ಟಿ ಹಾಲ್‌ಗಳಿಗೆ ಹೋಗಿ ದಂಡ ವಿಧಿಸುವಷ್ಟು ಮಾರ್ಷಲ್‌ಗಳಿಲ್ಲ ಹಾಗಾಗಿ ಸರ್ಕಾರವೇ ಈ ಸ್ಥಳಗಳಿಗೆ ಜನರು ಕಡಿಮೆ ಬರುವಂತೆ ನಿಯಮ ಹೇರಿದರೆ ಸೂಕ್ತ ಎಂದು ಮಂಜುನಾಥ್ ಹೇಳಿದ್ದಾರೆ.

  Recommended Video

  ಮಾಲ್, ಚಿತ್ರ ಮಂದಿರ ಬಂದ್ | Gujarat lockdown | Filmibeat Kannada
  ಆತಂಕದಲ್ಲಿ ನಿರ್ಮಾಪಕರು, ಸ್ಟಾರ್ ನಟರು

  ಆತಂಕದಲ್ಲಿ ನಿರ್ಮಾಪಕರು, ಸ್ಟಾರ್ ನಟರು

  ಚಿತ್ರಮಂದಿರಗಳು ಮತ್ತೆ ಪೂರ್ಣ ತೆರೆದವೆಂಬ ಖುಷಿಯಲ್ಲಿ ಕನ್ನಡ ಸಿನಿಮಾರಂಗದ ಹಲವು ನಿರ್ಮಾಪಕರು, ಸ್ಟಾರ್‌ ನಟರು ತಮ್ಮ ಸಿನಿಮಾ ಬಿಡುಗಡೆ ದಿನಾಂಕಗಳನ್ನು ಘೋಷಿಸಿದ್ದಾರೆ. ಪುನೀತ್ ರಾಜ್‌ಕುಮಾರ್, ದುನಿಯಾ ವಿಜಯ್, ಶಿವರಾಜ್ ಕುಮಾರ್, ಸುದೀಪ್ ಇನ್ನೂ ಹಲವು ನಟರ ಸಿನಿಮಾಗಳು ಮುಂದಿನ ದಿನಗಳಲ್ಲಿ ಬಿಡುಗಡೆ ಆಗಬೇಕಿದೆ. ಆದರೆ ಬಿಬಿಎಂಪಿಯ ಈ ಪ್ರಸ್ತಾವನೆ ಚಿತ್ರರಂಗಕ್ಕೆ ಮತ್ತೆ ಆತಂಕ ತಂದಿದೆ.

  English summary
  Expert committee recommends 50% occupancy in theatres in Karnataka again; Sandalwood irked.
  Friday, March 19, 2021, 16:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X