»   » ಸ್ಯಾಂಡಲ್ ವುಡ್ ನಲ್ಲಿ ಈಗ 'ಎಕ್ಸ್ ಪ್ರೆಸ್' ವೇಗ

ಸ್ಯಾಂಡಲ್ ವುಡ್ ನಲ್ಲಿ ಈಗ 'ಎಕ್ಸ್ ಪ್ರೆಸ್' ವೇಗ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ಡಲ್ಲಿ ಒಂದು ಥರದ ಸಿನಿಮಾ ಹಿಟ್ಟಾಯ್ತು ಅಂದ್ರೆ ಅಂತಹಾ ಸಿನಿಮಾಗಳನ್ನ ಮಾಡೋದು ಸಾಮಾನ್ಯ. ಅದೇನೋ ಒಂಥರಾ ನಂಬಿಕೆ. ಅದರಲ್ಲೂ ಒಂದೇ ರೀತಿಯ ಟೈಟಲ್ ಗಳನ್ನ ಇಟ್ಟು ಪಬ್ಲಿಸಿಟಿ ಪಡ್ಕೊಳ್ಳೋದು ಇತ್ತೀಚೆಗೆ ಮಾಮೂಲು. ಲವ್ ಸಿನಿಮಾಗಳು ಗೆದ್ದಾಗ ಅದೇ ತರಹದ ಫಾರ್ಮಾಟ್ನ ಅದೆಷ್ಟೋ ಲವ್ ಸಿನಿಮಾಗಳು ಬರ್ತವೆ.

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಬಂದ ನಂತರ ಅಂತಹಾ ಡೈಲಾಗ್ ನ ಅದೆಷ್ಟೋ ಸಿನಿಮಾಗಳು ಬಂದ್ವು. '6-5=2' ಬಂದ ನಂತರ ಒಂದಷ್ಟು ಹಾರರ್ ಸಿನಿಮಗಳು ರಿಜಿಸ್ಟರ್ ಆದವು. ಈಗ ಸುದ್ದಿ ಮಾಡ್ತಿರೋ ಅಂತಹಾ ಒಂದು ಸಿರೀಸ್ ಅಂದ್ರೆ ಎಕ್ಸ್ ಪ್ರೆಸ್ ಸಿರೀಸ್.

ಇದು ಎಕ್ಸ್ ಪ್ರೆಸ್ ಜಮಾನಾ. ಎಷ್ಟೇ ಎಕ್ಸ್ ಪ್ರೆಸ್ ಗಳು ಓಡ್ಲಿ. ಆದರೆ ಅಭಿನಯಿಸೋರಲ್ಲಿ ಸ್ವಲ್ಪ ಎಕ್ಸ್ಪ್ರೆಶನ್ನೂ ಇರ್ಲಿ ಅನ್ನೋದು ನಮ್ಮ ಆಶಯ. ಈಗ ಬರುತ್ತಿರುವ ಎಕ್ಸ್ ಪ್ರೆಸ್ ಚಿತ್ರಗಳ ಮೇಲೊಂದು ಸೂಪರ್ ಫಾಸ್ಟ್ ನೋಟ.

ಸ್ಯಾಂಡಲ್ ವುಡ್ ನ ತಿರುಪತಿ ಎಕ್ಸ್ ಪ್ರೆಸ್ ಶುರು

ಸ್ಯಾಂಡಲ್ ವುಡ್ ನಲ್ಲಿ ಎಕ್ಸ್ ಪ್ರೆಸ್ ಸಿನಿಮಾಗಳ ಸೀರೀಸ್ ಗೆ ಮತ್ತೊಂದು ಸೇರ್ಪಡೆ 'ತಿರುಪತಿ ಎಕ್ಸ್ ಪ್ರೆಸ್ ಸಿನಿಮಾ. ಶೈಲೇಂದ್ರಬಾಬು ಪ್ರೊಡಕ್ಷನ್ಸ್ ನ ಹೊಸ ಸಿನಿಮಾ ಇದು. 'ದಿಲ್ ವಾಲಾ' ಸುಮಂತ್ ಇಲ್ಲಿ ನಾಯಕನಾಗಿದ್ರೆ ಸುಮಂತ್ ಗೆ ಜೋಡಿಯಾಗ್ತಿರೋದು ಕೃತಿ ಖರಬಂದ.

ಬಾಲಿವುಡ್ ನಿಂದ ಯಶಸ್ವಿ 'ಚೆನ್ನೈ ಎಕ್ಸ್ ಪ್ರೆಸ್

'ಚೆನ್ನೈ ಎಕ್ಸ್ ಪ್ರೆಸ್' ಇತ್ತೀಚೆಗೆ ಭರ್ಜರಿ ಸಕ್ಸಸ್ ಪಡ್ಕೊಂಡ ಸಿನಿಮಾ. ಶಾರುಖ್, ದೀಪಿಕಾ ಅಭಿನಯದ 'ಚೆನ್ನೈ ಎಕ್ಸ್ ಪ್ರೆಸ್ ಬಾಲಿವುಡ್ ನ ದಾಖಲೆಗಳನ್ನೆಲ್ಲಾ ಅಳಿಸಿ ಹಾಕಿದ ಸಿನಿಮಾ.

ಟಾಲಿವುಡ್ ನ ವೆಂಕಟಾದ್ರಿ ಎಕ್ಸ್ ಪ್ರೆಸ್

ಕನ್ನಡ, ಹಿಂದಿಯಲ್ಲಿ ಮಾತ್ರ ಯಾಕೆ? ಇತ್ತ ಪಕ್ಕದ ತೆಲುಗಿನಲ್ಲೂ ಎಕ್ಸ್ ಪ್ರೆಸ್ ಹವಾ ಜೋರಾಗಿದೆ. ಇತ್ತೀಚೆಗೆ ಬಂದ ವೆಂಕಟಾದ್ರಿ ಎಕ್ಸ್ ಪ್ರೆಸ್ ಸಿನಿಮಾ ಭರ್ಜರಿ ಯಶಸ್ಸು ಪಡ್ಕೊಂಡಿದೆ.

ಮೋಡಿ ಮಾಡಿತ್ತು ಡಕೋಟಾ ಎಕ್ಸ್ ಪ್ರೆಸ್

ಕನ್ನಡದಲ್ಲಿ ಎಕ್ಸ್ ಪ್ರೆಸ್ ಸಿನಿಮಾಗಳ ಧಮಾಕಾ ಇವತ್ತು ನಿನ್ನೆಯದಲ್ಲ. ಹಿಂದೆ ರಾಕ್ ಲೈನ್ ವೆಂಕಟೇಶ್, ಓಂಪ್ರಕಾಶ್ ರಾವ್ ಕಾಂಬಿನೇಷನ್ನ ಸಿನಿಮಾ 'ಡಕೋಟಾ ಎಕ್ಸ್ ಪ್ರೆಸ್' ಸೂಪರ್ ಡ್ಯೂಪರ್ ಹಿಟ್ಟಾಗಿತ್ತು.

ಜರ್ನಿ ಶುರುಮಡಿದೆ ಮೆಜೆಸ್ಟಿಕ್ ಎಕ್ಸ್ ಪ್ರೆಸ್

ಕನ್ನಡದಲ್ಲಿ ಮತ್ತೊಂದು ಎಕ್ಸ್ ಪ್ರೆಸ್ ಜರ್ನಿ ಶುರುಮಾಡಿದೆ. ಅದು 'ಮೆಜೆಸ್ಟಿಕ್ ಎಕ್ಸ್ ಪ್ರೆಸ್'. ಉಮೇಶ್ ಬಣಕರ್ ಅಭಿನಯದ ಚಿತ್ರವನ್ನ ದರ್ಶನ್ ಅಭಿನಯದ ಮೆಜೆಸ್ಟಿಕ್ ಸಿನಿಮಾ ನಿರ್ಮಿಸಿದ್ದ ಭಾ ಮಾ ಹರೀಶ್ ನಿರ್ಮಿಸುತ್ತಿದ್ದಾರೆ.

English summary
Kannada movie buffs are awiting for series of 'Express' movies. After Sharukh Khan's Chennai Express Sandalwood also making Express movies. Tirupati Express, Majestic Express movies are under production.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada