For Quick Alerts
  ALLOW NOTIFICATIONS  
  For Daily Alerts

  ನಟ ಧನಂಜಯ್ ಹೆಸರಲ್ಲಿ ಮೋಸಕ್ಕೆ ಯತ್ನ: ಎಚ್ಚರವಾಗಿರಿ ಎಂದ ನಟ

  |

  ಖ್ಯಾತ ನಾಮರ ಹೆಸರನ್ನು ತಮ್ಮ ವೈಯಕ್ತಿಕ ಲಾಭಕ್ಕೆ ವಿಧ-ವಿಧವಾಗಿ ಬಳಸಿಕೊಳ್ಳುವರ ಸಂಖ್ಯೆ ಹೆಚ್ಚಿಗೆ ಇದೆ. ಗಾಂಧಿ ನಗರದಲ್ಲಿಯಂತೂ ಈ ಸಂಖ್ಯೆ ತುಸು ಹೆಚ್ಚೇ.

  ನಟ-ನಟಿಯರ ಹೆಸರು ಹೇಳಿಕೊಂಡು ದುಡ್ಡು ಹೊಡೆಯುವುದು, ಮೋಸ ಮಾಡುವುದು ಆಗಾಗ್ಗೆ ಕೇಳಿಬರುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣದ ಮೂಲಕ ನಟ-ನಟಿಯರು ನೇರವಾಗಿ ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರಾದರೂ ಆಗೊಮ್ಮೆ-ಈಗೊಮ್ಮೆ ಇಂಥಹಾ ಘಟನೆಗಳು ವರದಿ ಆಗುತ್ತಲೇ ಇರುತ್ತವೆ.

  ಇದೀಗ ನಟ ಧನಂಜಯ್ ಹೆಸರು ಬಳಸಿಕೊಂಡು ವಂಚನೆ ನಡೆಸುತ್ತಿರುವ ಘಟನೆ ಗಮನಕ್ಕೆ ಬಂದಿದ್ದು, ಸ್ವತಃ ನಟ ಧನಂಜಯ್ ಇಂಥಹಾ ಸುಳ್ಳುಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

  'ಧನಂಜಯ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ನವ ಯುವಕ-ಯುವತಿಯರು ನಟ-ನಟಿಯರಾಗಿ ಬೇಕಾಗಿದ್ದಾರೆ. ಆಸಕ್ತಿ ಇದ್ದವರು ನನಗೆ ಸಂದೇಶ ಕಳುಹಿಸಿ' ಎಂಬ ಪೋಸ್ಟ್ ಒಂದು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಆಕಾಶ್ ಗೌಡ ಎಂಬಾತ ಹಾಕಿರುವ ಇಂಥಹುದೇ ಪೋಸ್ಟ್‌ನ ಸ್ಕ್ರೀನ್‌ ಶಾಟ್ ಅನ್ನು ಹಂಚಿಕೊಂಡಿರುವ ಡಾಲಿ ಧನಂಜಯ್, 'ಇಂಥಹುಗಳನ್ನು ನಂಬಿ ಮೋಸಹೋಗಬೇಡಿ' ಎಂದು ಬರೆದುಕೊಂಡಿದ್ದಾರೆ.

  'ಈ ಥರಹದ ಪೋಸ್ಟ್‌ಗಳನ್ನು ನಂಬಿ ಮೋಸಹೋಗಬೇಡಿ. ಈ ಥರಹದ ಎರಡು ಮೂರು ಘಟನೆಗಳು ನಮ್ಮ ಗಮನಕ್ಕೆ ಬಂದಿದೆ. ಎಚ್ಚರಿಕೆಯಿಂದಿರಿ, ಏನನ್ನಾದರೂ ನಂಬುವುದಕ್ಕೆ ಮುನ್ನಾ ಹಿಮ್ಮಾಹಿತಿ ಕಲೆಹಾಕಿ, ತುಲನೆಗೆ ಒಳಪಡಿಸಿ' ಎಂದು ಧನಂಜಯ್ ಮನವಿ ಮಾಡಿದ್ದಾರೆ.

  ರಾಜಕೀಯ ಎಂಟ್ರಿಗೂ ಮುನ್ನ ಬೆಂಗಳೂರಿನಲ್ಲಿ ಅಣ್ಣನ ಆಶೀರ್ವಾದ ಪಡೆದ 'ತಲೈವಾ' | Filmibeat Kannada

  ನಿನ್ನೆ ವಿಡಿಯೋ ಒಂದರಲ್ಲಿ ಮಾತನಾಡಿದ್ದ ಮಾಸ್ಟರ್ ಆನಂದ್ ಸಹ ಇಂಥಹುದೇ ವಿಷಯದ ಬಗ್ಗೆ ಮಾತನಾಡಿದ್ದರು. 'ನನ್ನ ಹೆಸರಲ್ಲಿ ಕೆಲವರು ಕಾಸ್ಟಿಂಗ್ ಕಾಲ್‌ಗಳನ್ನು ನೀಡಿದ್ದಾರೆ. ಆದರೆ ಅಂಥಹುವನ್ನು ನಂಬಬೇಡಿ, ನಾನು ಹೊಸ ಧಾರಾವಾಹಿ ಮಾಡುತ್ತಿದ್ದು, ಅದರ ಕಾಸ್ಟಿಂಗ್ ಕಾಲ್ ಅನ್ನು ನಾನೇ ಕೊಡುತ್ತಿದ್ದೇನೆ' ಎಂದು ಹೇಳಿ ಇಮೇಲ್, ಇತರೆ ಮಾಹಿತಿಗಳನ್ನು ನೀಡಿದ್ದಾರೆ.

  English summary
  Fake casting call using actor Dhananjay's name. Dhananjay requested people to not to believe these kind posts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X