»   » ಕಾಮಿಡಿ ಕಿಲಾಡಿ ಚಿಕ್ಕಣ್ಣನ ಮಾತಿಗೆ ಬೆರಗಾದೀರಿ..ಜೋಕೆ.!

ಕಾಮಿಡಿ ಕಿಲಾಡಿ ಚಿಕ್ಕಣ್ಣನ ಮಾತಿಗೆ ಬೆರಗಾದೀರಿ..ಜೋಕೆ.!

Posted By:
Subscribe to Filmibeat Kannada

ಕಾಮಿಡಿ ಕಿಲಾಡಿ ಚಿಕ್ಕಣ್ಣ ಈಗ ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಬಿಸಿಯೆಸ್ಟ್ ಕಾಮಿಡಿಯನ್. ಯಾರ ಕೈಗೂ ಚಿಕ್ಕಣ್ಣ ಸಿಗ್ತಾಯಿಲ್ಲ. ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಇಂತಿಪ್ಪ ಚಿಕ್ಕಣ್ಣ ಹೆಸರಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ದೋಖಾ ನಡೆದಿದೆ.

ಹಾಸ್ಯ ನಟ ಚಿಕ್ಕಣ್ಣ ಹೆಸರಲ್ಲಿ ಫೇಸ್ ಬುಕ್ ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡುವ ಮೂಲಕ ಪ್ರಜ್ವಲ್ ಅನ್ನುವ ವ್ಯಕ್ತಿಯೊಬ್ಬ ಹುಡುಗಿಯೊಬ್ಬಳನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. [ಕಾಮಿಡಿಯನ್ ಚಿಕ್ಕಣ್ಣನ ದಿನದ ಸಂಭಾವನೆ ಎಷ್ಟು?]

ಹಾಗ್ನೋಡಿದ್ರೆ, ಚಿಕ್ಕಣ್ಣ ಕೂಡ ಒಂದ್ಕಾಲದಲ್ಲಿ ಫೇಸ್ ಬುಕ್‌ ನಲ್ಲಿ ಆಕ್ಟೀವ್ ಆಗಿದ್ದವರು. ಈಗ ಚಿಕ್ಕಣ್ಣ ಫೇಸ್ ಬುಕ್ ನಿಂದ ದೂರ ಸರಿದಿದ್ದಾರೆ. ಅದಕ್ಕೆ ಕಾರಣ ಏನು? ಪ್ರಜ್ವಲ್ ಅನ್ನುವ ವ್ಯಕ್ತಿ ಪೊಲೀಸರ ಅತಿಥಿ ಆಗಿದ್ದು ಹೇಗೆ ಅನ್ನುವ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಚಿಕ್ಕಣ್ಣ ಹೆಸರಲ್ಲಿ ಫೇಕ್ ಅಕೌಂಟ್

ಚಿಕ್ಕಣ್ಣ ಕನ್ನಡದ ಜನಪ್ರಿಯ ಹಾಸ್ಯನಟ. ಅವರ ಜನಪ್ರಿಯತೆಯನ್ನ ಎನ್ ಕ್ಯಾಶ್ ಮಾಡಿಕೊಳ್ಳುವುದಕ್ಕೆ ಕಿಡಿಗೇಡಿಗಳು ಅವರ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫೇಕ್ ಅಕೌಂಟ್ ಗಳನ್ನ ಕ್ರಿಯೇಟ್ ಮಾಡಿದ್ದಾರೆ.

ಚಿಕ್ಕಣ್ಣಗೆ ಫೀಮೇಲ್ ಫ್ಯಾನ್ಸ್ ಜಾಸ್ತಿ

ಚಿಕ್ಕಣ್ಣ ಹೆಸರಿನಲ್ಲಿ ಕ್ರಿಯೇಟ್ ಆಗಿರುವ ಫೇಸ್ ಬುಕ್ ಫೇಕ್ ಅಕೌಂಟ್ ನಲ್ಲಿ ಫಾಲೋವರ್ಸ್ ಸಿಕ್ಕಾಪಟ್ಟೆ ಇದ್ದಾರೆ. ಅದ್ರಲ್ಲೂ ಹುಡುಗೀರ ಸಂಖ್ಯೆಯೇ ಹೆಚ್ಚು. ಇದನ್ನೇ ಅಡ್ವಾಂಟೇಜ್ ತೆಗೆದುಕೊಂಡ ಫೇಕ್ ಅಕೌಂಟ್ ರುವಾರಿ ಪ್ರಜ್ವಲ್ ಹುಡುಗಿಯೊಬ್ಬಳಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿದ್ದಾನೆ.

ಬೆತ್ತಲೆ ಫೋಟೋ ಕಳಿಸಬೇಕು.!

ಸಾಲದಕ್ಕೆ ಪ್ರಜ್ವಲ್ ಆ ಹುಡುಗಿಯನ್ನ ಮೀಟ್ ಮಾಡಿ ಫೋನ್ ಕಸಿದುಕೊಂಡಿದ್ದಾನೆ. ಹುಡುಗಿಯ ಬೆತ್ತಲೆ ಫೋಟೋ ಕಳುಹಿಸಿದರೆ ಮಾತ್ರ ಫೋನ್ ವಾಪಸ್ ನೀಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.

ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ದೂರು

ಮನನೊಂದ ಯುವತಿ ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಭೇದಿಸಿದ ಪೊಲೀಸರು ಫೇಕ್ ಅಕೌಂಟ್ ರುವಾರಿ ಪ್ರಜ್ವಲ್ ನ ಬಂಧಿಸಿದ್ದಾರೆ. [ಚಿಕ್ಕಣ್ಣಗೆ 'ರನ್ನ' ಸುದೀಪ್ ದುಬಾರಿ ಉಡುಗೊರೆ!]

ಚಿಕ್ಕಣ್ಣ ಏನಂತಾರೆ?

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕಣ್ಣ, ''ಈ ಘಟನೆ ಕೇಳಿ ಶಾಕ್ ಆಯ್ತು. ನನ್ನ ಹೆಸರು ಹೇಳಿಕೊಂಡು ಹೆಣ್ಣು ಮಕ್ಕಳಿಗೆ ಮೋಸ ಮಾಡುವುದು ಅಪರಾಧ. ನಾನು ಮೊದಲು ಫೇಸ್ ಬುಕ್ ಬಳಸುತ್ತಿದ್ದೆ. ನನ್ನ ಹೆಸರಲ್ಲಿ ಫೇಕ್ ಅಕೌಂಟ್ ಗಳು ಕ್ರಿಯೇಟ್ ಆಗ್ತಿವೆ ಅಂತ ಗೊತ್ತಾದಾಗ ನಾನು ನನ್ನ ಅಕೌಂಟ್ ನ ಡೀಆಕ್ಟೀವೇಟ್ ಮಾಡಿದೆ. ನನ್ನ ಹೆಸರು ಹೇಳಿಕೊಂಡು ಯಾರೇ ಚಾಟ್ ಮಾಡಿದರೂ, ಪೊಲೀಸರಿಗೆ ದೂರು ನೀಡಿ'' ಅಂತ ಹೇಳಿದ್ದಾರೆ.

ಇದು ಮೊದಲೇನಲ್ಲ

ಸೆಲೆಬ್ರಿಟಿಗಳ ಹೆಸರಲ್ಲಿ ವಂಚನೆ ಪ್ರಕರಣ ದಾಖಲಾಗಿರುವುದು ಇದು ಮೊದಲೇನಲ್ಲ. ಈಗಾಗಲೇ ರಾಧಿಕಾ ಪಂಡಿತ್, ಗಣೇಶ್ ಹೆಸರಲ್ಲಿ ಕೆಲವರು ನಾಮ ಹಾಕುವುದಕ್ಕೆ ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ. ಈಗ ಡ್ಯೂಪ್ಲಿಕೇಟ್ ಚಿಕ್ಕಣ್ಣನ ಸರದಿ ಅಷ್ಟೆ.

English summary
Kannada Comedy Actor Chikkanna is the latest victim to the fake Facebook account. According to the reports, a fake Facebook ID was created in the name of Chikkanna by a person called Prajwal. The culprit is said to have been arrested by J.P.Nagar Police, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada