For Quick Alerts
  ALLOW NOTIFICATIONS  
  For Daily Alerts

  ಕಿಡಿಗೇಡಿಗಳಿಂದ ವಿನೋದ್ ರಾಜ್‌ಗೆ ತೊಂದರೆ, ಠಾಣೆ ಮೆಟ್ಟಲೇರಿದ ನಟ

  |

  ನಟ ವಿನೋದ್ ರಾಜ್ ಗಾಂಧಿ ನಗರದ ಜಂಜಡಗಳಿಂದ ದೂರ ಉಳಿದು, ತಾಯಿ ಲೀಲಾವತಿ ಅವರೊಟ್ಟಿಗೆ ನೆಲಮಂಗಲದ ಹಳ್ಳಿಯೊಂದರಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

  ಸೈಬರ್ ರಾಣೆ ಮೆಟ್ಟಿಲೇರಿದ Vinod Raj | Filmibeat Kannada

  ಯಾರ ತಂಟೆಗೂ ಹೋಗದೆ, ತಾವಾಯಿತು, ತಮ್ಮ ಕೃಷಿಯಾಯಿತು ಎಂದಿರುವ ವಿನೋದ್ ರಾಜ್‌ ಗೆ ಕಿಡಿಗೇಡಿಗಳು ಯಾರೊ ಸಮಸ್ಯೆ ಕೊಟ್ಟಿದ್ದಾರೆ.

  ನಟ ವಿನೋದ್ ರಾಜ್ ಯಾವುದೇ ಸಾಮಾಜಿಕ ಜಾಲತಾಣವನ್ನು ಬಳಸುವುದಿಲ್ಲ, ಕೃಷಿ ಹಾಗೂ ತಾಯಿಯೇ ಸರ್ವಸ್ವವೆಂದು ಬದುಕುತ್ತಿರುವ ವಿನೋದ್‌ ರಾಜ್‌ಗೆ ಅದರ ಅವಶ್ಯಕತೆಯೂ ಬಂದಿಲ್ಲ. ಆದರೆ ಯಾರೊ ಕಿಡಿಗೇಡಿಗಳು ವಿನೋದ್ ರಾಜ್ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದಾರೆ.

  ವಿನೋದ್ ರಾಜ್ ಹೆಸರಲ್ಲಿ ನಕಲಿ ಖಾತೆ

  ವಿನೋದ್ ರಾಜ್ ಹೆಸರಲ್ಲಿ ನಕಲಿ ಖಾತೆ

  ವಿನೋದ್ ರಾಜ್ ಹೆಸರಲ್ಲಿ ಯಾರೊ ಕಿಡಿಗೇಡಿಗಳು ನಕಲಿ ಖಾತೆ ತೆರೆದು ಸಿನಿಮಾ ನಟ-ನಟಿಯರಿಗೆ ಸಂದೇಶಗಳನ್ನು ಕಳಿಸಿ, ಹಣ ಕೇಳುತ್ತಿದ್ದಾರಂತೆ. ವಿಷಯ ಗೊತ್ತಾಗುತ್ತಿದ್ದಂತೆ ವಿನೋದ್ ರಾಜ್ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  ಸಾಯಿಪ್ರಕಾಶ್ ಕರೆ ಮಾಡಿದಾಗ ನನಗೆ ಗೊತ್ತಾಯಿತು: ವಿನೋದ್ ರಾಜ್

  ಸಾಯಿಪ್ರಕಾಶ್ ಕರೆ ಮಾಡಿದಾಗ ನನಗೆ ಗೊತ್ತಾಯಿತು: ವಿನೋದ್ ರಾಜ್

  'ನಾನು ನನ್ನ ತಾಯಿ, ಹೊಲ, ತೋಟ, ಪರಿಸರ, ಆಸ್ಪತ್ರೆ, ಹಳ್ಳಿ ಎಂದುಕೊಂಡು ಇದ್ದೇವೆ. ನನಗೆ ಸಾಮಾಜಿಕ ಜಾಲತಾಣದ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಯಾರೊ ನನ್ನ ಹೆಸರಲ್ಲಿ ಖಾತೆ ತೆರೆದು ಸಂದೇಶ ಕಳಿಸಿದ್ದಾರೆ ಎಂದು ನಟ ಸಾಯಿಪ್ರಕಾಶ್ ಕರೆ ಮಾಡಿ ಹೇಳಿದಾಗ ಗೊತ್ತಾಯಿತು' ಎಂದಿದ್ದಾರೆ ವಿನೋದ್ ರಾಜ್.

  'ಈಗಾಗಲೇ ಕಷ್ಟ ನೋಡಿದ್ದೇವೆ, ಇನ್ನಷ್ಟು ಕಷ್ಟ ಕೊಡಬೇಡಿ'

  'ಈಗಾಗಲೇ ಕಷ್ಟ ನೋಡಿದ್ದೇವೆ, ಇನ್ನಷ್ಟು ಕಷ್ಟ ಕೊಡಬೇಡಿ'

  'ಸಮಾಜದಲ್ಲಿ ಕಲಾವಿದರಿಗೆ ಈ ರೀತಿ ಸಮಸ್ಯೆ ಕೊಡಬೇಡಿ, ಈ ರೀತಿ ನಡೆದುಕೊಂಡು ಕೆಟ್ಟ ಹೆಸರು ತರಬೇಡಿ, ಮನೆ ಹಾಳುಮಾಡುವಂತ ಕೆಲಸ ಮಾಡಬೇಡಿ, ಈಗಾಗಲೇ ಸಾಕಷ್ಟು ಕಷ್ಟ ಕಂಡಿದ್ದೇವೆ, ಇನ್ನಷ್ಟು ಕಷ್ಟ ಕೊಡಬೇಡಿ, ಯಾರು ಈ ಕೆಲಸ ಮಾಡಿದ್ದಾರೊ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ' ಎಂದಿದ್ದಾರೆ ವಿನೋದ್ ರಾಜ್.

  ಮುಖವಾಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಮತ್ತೆ ವಿನೋದ್?

  ಮುಖವಾಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಮತ್ತೆ ವಿನೋದ್?

  ನೆಲಮಂಗಲದ ಮೈಲನಹಳ್ಳಿ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿರುವ ವಿನೋದ್ ರಾಜ್, ಈಗ ಸಿನಿಮಾಕ್ಕೆ ಮರುಪ್ರವೇಶ ಮಾಡುವ ಉತ್ಸಾಹದಲ್ಲಿದ್ದಾರೆ. ಮುಖವಾಡ ಎಂಬ ಸಿನಿಮಾ ಮೂಲಕ ವಿನೋದ್ ರಾಜ್ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಇದೆ.

  English summary
  Fake Facebook account in the name of actor Vinod Raj. He gave complaint to cyber police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X