For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲು? ಸುದ್ದಿ ನಿಜವೇ?

  |

  ಚಿರಂಜೀವಿ ಸರ್ಜಾ ನಿಧನ ಹೊಂದಿ ತಿಂಗಳು ಸಹ ಆಗಿಲ್ಲ. ಚಿರಂಜೀವಿ ಅಗಲಿಕೆಯ ನೋವು ಕುಟುಂಬದವರನ್ನು, ಗೆಳೆಯರನ್ನು, ಅಭಿಮಾನಿಗಳನ್ನು ಇನ್ನೂ ಬಿಟ್ಟಿಲ್ಲ.

  Shivarajkumar,ಶಿವರಾಜ್ ಕುಮಾರ್ ತಮ್ಮ ಹುಟ್ಟುಹಬ್ಬಕ್ಕೆ ಈ ಬಾರಿ ಏನು ಮಾಡಲಿದ್ದಾರೆ ಗೊತ್ತೇ | Filmibeat Kannada

  ಈ ನೋವಿನ ನಡುವೆಯೇ ಚಿರಂಜೀವಿ ಸರ್ಜಾ ಸಹೋದರ, ಖ್ಯಾತ ನಟ ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದು ಅರ್ಧ ಸತ್ಯವಾಗಿದೆ.

  ಫನ್ ಗಾಗಿ ಮಾಡಿದ್ದು, ಆದರೀಗ ಅಮೂಲ್ಯವಾದ ವಿಡಿಯೋವಾಗಿದೆ: ಧ್ರುವ ಸರ್ಜಾ ಪತ್ನಿಫನ್ ಗಾಗಿ ಮಾಡಿದ್ದು, ಆದರೀಗ ಅಮೂಲ್ಯವಾದ ವಿಡಿಯೋವಾಗಿದೆ: ಧ್ರುವ ಸರ್ಜಾ ಪತ್ನಿ

  ಅಣ್ಣ ಚಿರಂಜೀವಿ ಸರ್ಜಾ ಅವರನ್ನು ಬಹಳ ಹಚ್ಚಿಕೊಂಡಿದ್ದ ಧ್ರುವ ಸರ್ಜಾ ಅಣ್ಣನ ನೆನಪಿನಿಂದ ಹೊರಬರಲಾರದೆ ಖಿನ್ನತೆಗೆ ಒಳಗಾಗಿದ್ದಾರೆ (ಡಿಪ್ರೆಶನ್‌) ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಧ್ರುವ ಸರ್ಜಾ ಹಾಗೂ ಅವರ ಪೋಷಕರು ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಈಗ ಡಿಸ್ಚಾರ್ಜ್‌ ಆಗಿ ಮನೆಗೆ ಬಂದಿದ್ದಾರೆ.

  ಧ್ರುವ ಸರ್ಜಾ ಖಿನ್ನತೆಗೆ ಒಳಗಾಗಿದ್ದಾರೆ?

  ಧ್ರುವ ಸರ್ಜಾ ಖಿನ್ನತೆಗೆ ಒಳಗಾಗಿದ್ದಾರೆ?

  ಧ್ರುವ ಸರ್ಜಾ ಅವರು ತುಸು ಖಿನ್ನತೆಗೆ ಒಳಗಾಗಿರುವುದು ನಿಜ. ಅವರು ಊಟ-ತಿಂಡಿ ಸರಿಯಾಗಿ ಮಾಡುತ್ತಿಲ್ಲ. ಬೇಸರದಲ್ಲಿದ್ದರು, ಹಾಗಾಗಿ ಅವರು ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಪಡೆದಿದ್ದಾರೆ. ಅವರ ಪೋಷಕರೂ ಸಹ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಈಗ ಎಲ್ಲರೂ ಡಿಸ್ಚಾರ್ಜ್ ಆಗಿ ಬಂದಿದ್ದಾರೆ.

  ಪನ್ನಗಾಭರಣ ಅವರಿಂದ ಸ್ಪಷ್ಟನೆ

  ಪನ್ನಗಾಭರಣ ಅವರಿಂದ ಸ್ಪಷ್ಟನೆ

  ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಇಬ್ಬರಿಗೂ ಆತ್ಮೀಯರಾಗಿರುವ ನಿರ್ದೇಶಕ ಪನ್ನಗಾಭರಣ ಅವರ ಬಳಿ ಫಿಲ್ಮೀಬೀಟ್ ತಂಡ ಮಾತನಾಡಿದ್ದು, ಧ್ರುವ ಸರ್ಜಾ ಅವರು ಆರಾಮವಾಗಿದ್ದಾರೆ. ಅವರು ಆಸ್ಪತ್ರೆಗೆ ಸೇರಿಲ್ಲ ಮನೆಯಲ್ಲಿಯೇ ಇದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಇನ್ನೂ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

  'ನೀನಿಲ್ಲದೆ ಇರಲು ಆಗುತ್ತಿಲ್ಲ': ಅಣ್ಣ ಚಿರು ಬಗ್ಗೆ ಧ್ರುವ ಭಾವುಕ ನುಡಿ'ನೀನಿಲ್ಲದೆ ಇರಲು ಆಗುತ್ತಿಲ್ಲ': ಅಣ್ಣ ಚಿರು ಬಗ್ಗೆ ಧ್ರುವ ಭಾವುಕ ನುಡಿ

  ಧ್ರುವ ಅವರು ಆರೋಗ್ಯವಾಗಿದ್ದಾರೆ

  ಧ್ರುವ ಅವರು ಆರೋಗ್ಯವಾಗಿದ್ದಾರೆ

  ನಾನು ಧ್ರುವ ಅವರ ಪತ್ನಿ ಪ್ರೇರಣ ಅವರೊಟ್ಟಿಗೂ ಮಾತನಾಡಿ ಧ್ರುವ ಸರ್ಜಾ ಆರೋಗ್ಯದ ಬಗ್ಗೆ ವಿಚಾರಿಸಿದ್ದು ಧ್ರುವ ಸರ್ಜಾ ಅವರು ಪೂರ್ಣವಾಗಿ ಆರೋಗ್ಯವಾಗಿದ್ದಾರೆ ಅದರ ಬಗ್ಗೆ ಸ್ವಲ್ಪವೂ ಅನುಮಾನ ಬೇಡ ಎಂದು ಪನ್ನಗಾಭರಣ ಭರವಸೆ ನೀಡಿದ್ದಾರೆ.

  ಚಿರು ನಿಧನ ಹೊಂದುವ ಹಿಂದಿನ ದಿನ ಕ್ಲಿಕ್ಕಿಸಿದ ಫೋಟೋ ಹಂಚಿಕೊಂಡ ಧ್ರುವ ಸರ್ಜಾಚಿರು ನಿಧನ ಹೊಂದುವ ಹಿಂದಿನ ದಿನ ಕ್ಲಿಕ್ಕಿಸಿದ ಫೋಟೋ ಹಂಚಿಕೊಂಡ ಧ್ರುವ ಸರ್ಜಾ

  ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ

  ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ

  ಚಿರಂಜೀವಿ ಸರ್ಜಾ ಅವರ ಅಗಲಿಕೆ ಧ್ರುವ ಸರ್ಜಾ ಅವರಿಗೆ ತೀವ್ರ ಆಘಾತ ಉಂಟುಮಾಡಿದೆ. ಚಿರಂಜೀವಿ ಸರ್ಜಾ ನೆನಪಲ್ಲಿ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಕೆಲ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಅಣ್ಣನ ನಿಂತುಹೋದ ಸಿನಿಮಾಗಳಿಗೆ ದನಿ ಕೊಟ್ಟು ಸಿನಿಮಾ ಪೂರ್ಣಗೊಳಿಸುತ್ತಿದ್ದಾರೆ.

  ಚಿರು ಮಣ್ಣಾದ ಸ್ಥಳದಲ್ಲಿ ಭವ್ಯ ಮಂಟಪ ನಿರ್ಮಿಸಲಿದ್ದಾರೆ ಧ್ರುವ ಸರ್ಜಾಚಿರು ಮಣ್ಣಾದ ಸ್ಥಳದಲ್ಲಿ ಭವ್ಯ ಮಂಟಪ ನಿರ್ಮಿಸಲಿದ್ದಾರೆ ಧ್ರುವ ಸರ್ಜಾ

  English summary
  A Fake news spreading that actor Dhruva Sarja has been hospitalized for depression.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X