twitter
    For Quick Alerts
    ALLOW NOTIFICATIONS  
    For Daily Alerts

    Shivamogga Subbanna: ರಾಷ್ಟ್ರಪ್ರಶಸ್ತಿ ವಿಜೇತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

    |

    ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇಂದು (ಆಗಸ್ಟ್ 11) ರಂದು ಸಂಜೆ ವೇಳೆಗೆ ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಸುಗಮ ಸಂಗೀತದಲ್ಲಿ ಸುಬ್ಬಣ್ಣನವರದ್ದು ದೊಡ್ಡ ಹೆಸರು.

    ಶಿವಮೊಗ್ಗ ಸುಬ್ಬಣ್ಣನವರು ಅನಾರೋಗ್ಯದಿಂದ ಜಯದೇವಾ ಆಸ್ಪತ್ರೆಗೆ ದಾಖಲಾಗಿದ್ದರು, ಗುರುವಾರ ರಾತ್ರಿ ಅದೇ ಆಸ್ಪತ್ರೆಯಲ್ಲಿ ಸುಬ್ಬಣ್ಣನವರು ಕೊನೆ ಉಸಿರೆಳೆದಿದ್ದಾರೆ.

    ಶಿವಮೊಗ್ಗ ಸುಬ್ಬಣ್ಣನವರು ಹಾಡಿರುವ 'ಕಾಡು ಕುದುರೆ' ಸಿನಿಮಾದ 'ಕಾಡು ಕುದುರೆ ಓಡಿ ಬಂದಿತ್ತ' ಹಾಡಿಗೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಎಂಬ ಖ್ಯಾತಿ ಶಿವಮೊಗ್ಗ ಸುಬ್ಬಣ್ಣನವರದ್ದು.

    ಜಿ ಸುಬ್ರಹ್ಮಣ್ಯಂ ಜನ್ಮ ನಾಮದ ಸುಬ್ಬಣ್ಣನವರು ಶಿವಮೊಗ್ಗ ಜಿಲ್ಲೆಯ ನಗರದಲ್ಲಿ 1938 ರಲ್ಲಿ ಜನಿಸಿದರು. ಇವರ ತಾತ ಸುಬ್ಬಣ್ಣನವರು ಸಂಗೀತ ವಿದ್ವಾಂಸರಾಗಿದ್ದರು. ಸಂಗೀತದ ಪ್ರಥಮ ಪಾಠಗಳನ್ನು ತಾತನ ಬಳಿಯೇ ಕಲಿತರು ಸುಬ್ಬಣ್ಣ.

    Famous Singer Shivamogga Subbanna Passed Away

    Recommended Video

    Gaalipata 2 Public Opinion | 'ಗಾಳಿಪಟ 2' ನೋಡಿದ ಜನ ಗಣಿ, ಭಟ್ರಿಗೆ ಕೊಟ್ರು ಫುಲ್ ಮಾರ್ಕ್ಸ್ | Filmibeat

    ವೃತ್ತಿಯಲ್ಲಿ ವಕೀಲರಾಗಿದ್ದ ಸುಬ್ಬಣ್ಣ ಹಲವು ವರ್ಷ ಸಂಗೀತದಿಂದ ದೂರವೇ ಉಳಿದಿದ್ದರು. ಆದರೆ 'ಕರಿಮಾಯಿ' ಸಿನಿಮಾದ ಮೂಲಕ ಸಿನಿಮಾ ಗಾಯನ ಆರಂಭಿಸಿದರು. ಆ ಬಳಿಕ 'ಕೋಡಗನ ಕೋಳಿ ನುಂಗಿತ್ತ', 'ಅಳಬ್ಯಾಡ ತಂಗಿ ಅಳಬ್ಯಾಡ', 'ಬಿದ್ದೀಯ ಬೇ ಮುದುಕಿ' ಇನ್ನೂ ಹಲವರು ಹಾಡುಗಳು ಇವರಿಗೆ ಹೆಸರು ಹಾಗೂ ಪ್ರಶಸ್ತಿಗಳನ್ನು ತಂದುಕೊಟ್ಟವು. ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲವನ್ನು ಸುಬ್ಬಣ್ಣನವರು ಪಡೆದಿದ್ದರು. ಅವರ 'ಕಾಡು ಕುದರೆ ಓಡಿ ಬಂದಿತ್ತ' ಹಾಡು ಬಹಳ ಜನಪ್ರಿಯ ಹಾಗೂ ಇದೇ ಹಾಡಿಗಾಗಿ ಅವರು ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

    English summary
    Famous singer Shivamogga Subbanna passed away. He is a national award singer. He got national award for Kadu Kudure Odi Banditha song.
    Friday, August 12, 2022, 11:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X