For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ನಾಯಕಿಯ ಪಟ್ಟಕ್ಕೆ ಕೇಳಿ ಬಂದ ಟಾಪ್ ನಟಿಯರ ಹೆಸರು.!

  |
  ಅಭಿಮಾನಿಗಳು ಹೇಳುತ್ತಿದ್ದಾರೆ ದರ್ಶನ್ ಗೆ ಇವರೇ ನಾಯಕಿ ಆಗ್ಬೇಕಂತೆ..?

  ಸ್ಯಾಂಡಲ್ ವುಡ್ ನಲ್ಲೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ್ದೆ ಹವಾ. ಚಿತ್ರೀಕರಣ ಪ್ರಾರಂಭವಾಗಿ ದಿನಗಳೆ ಕಳೆದಿವೆ. ಆದ್ರಿನ್ನು 'ರಾಬರ್ಟ್' ನಾಯಕಿಯ ಹೆಸರು ಬಹಿರಂಗವಾಗಿಲ್ಲ. ದಚ್ಚು ಜೊತೆ ರೋಮ್ಯಾನ್ಸ್ ಮಾಡುವ ಬೆಡಗಿ ಯಾರು ಎನ್ನುವ ಕುತೂಹಲ ಗಾಂಧಿನಗರ ಮಂದಿಯ ನಿದ್ದೆಗೆಡಿಸಿದೆ.

  ನಿರ್ದೇಶಕ ತರುಣ್ ಸುಧೀರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ರಾಬರ್ಟ್' ಚಿತ್ರಕ್ಕೆ ಒಬ್ಬೊಬ್ಬರೆ ಎಂಟ್ರಿಯಾಗುತ್ತಿದ್ದಾರೆ. ಈಗಾಗಲೆ ಸೌತ್ ನಿಸಿ ಇಂಡಸ್ಟ್ರಿಯ ಖ್ಯಾತ ಖಳನಟ ಜಗಪತಿಬಾಬು ಆಗಮನವಾಗಿದೆ. ಮೊನ್ನೆ ಮೊನ್ನೆಯಷ್ಟೆ ಟಗರು ಖ್ಯಾತಿ ಕಾಕ್ರೋಚ್ ಸುಧಿ ಕೂಡ ಚಿತ್ರತಂಡ ಸೇರಿದ್ದಾರೆ.

  ಹೀಗೆ ಒಬ್ಬರೆ ಸೇರ್ಪಡೆಯಾಗುತ್ತಿದ್ದಾರೆ. ಆದ್ರಿನ್ನು ನಾಯಕಿಯ ಎಂಟ್ರಿಯಾಗಿಲ್ಲ. 'ರಾಬರ್ಟ್' ಚಿತ್ರಕ್ಕೆ ದಿನಕ್ಕೊಬ್ಬರಂತೆ ನಾಯಕಿಯ ಹೆಸರು ಕೇಳಿ ಬರುತ್ತಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಟಾಪ್ ನಟಿಮಣಿಯರು ದಚ್ಚು ಜೊತೆ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಇದುವರೆಗೂ ಕೇಳಿ ಬಂದ ನಾಯಕಿಯರ ಲಿಸ್ಟ್ ನಲ್ಲಿ ಯಾರೆಲ್ಲ ಇದ್ದಾರೆ.ಮುಂದೆ ಓದಿ..

  ಐಶ್ವರ್ಯ ರೈ ಬರ್ತಾರೆ

  ಐಶ್ವರ್ಯ ರೈ ಬರ್ತಾರೆ

  'ರಾಬರ್ಟ್' ಚಿತ್ರಕ್ಕೆ ನಾಯಕಿಯಾಗಿ ಐಶ್ವರ್ಯ ರೈ ಬರ್ತಾರೆ ಎನ್ನುವ ಸುದ್ದಿ ಭಾರಿ ಗುಲ್ಲಾಗಿತ್ತು. ಒಮ್ಮೆ ಸ್ಯಾಂಡಲ್ ಮಂದಿಯನ್ನು ಅಚ್ಚರಿ ಪಡುವಂತೆ ಮಾಡಿತ್ತು. ಆದ್ರೆ ಈ ಬಗ್ಗೆ ಸ್ವತಹ ದರ್ಶನ್ ಸ್ಪಷ್ಟನೆ ನೀಡುವ ಮೂಲಕ ಸಂಚಲನ ಮೂಡಿಸಿದ್ದ ಐಶ್ವರ್ಯ ರೈ ಎಂಟ್ರಿಗೆ ಬ್ರೇಕ್ ಹಾಕಿದ್ರು. ಅಷ್ಟು ದೊಡ್ಡ ನಟಿಯಲ್ಲ 'ರಾಬರ್ಟ್' ಚಿತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ಹೇಳಿದ ಮೇಲೆ ಐಶ್ ಗಾಂಧಿನಗರಕ್ಕೆ ಬರುವ ಸುದ್ದಿ ನಿಂತುಹೋಯ್ತು.

  ದರ್ಶನ್ ಜೊತೆ ಅನುಷ್ಕಾ ಜೋಡಿ ಸೂಪರ್

  ದರ್ಶನ್ ಜೊತೆ ಅನುಷ್ಕಾ ಜೋಡಿ ಸೂಪರ್

  ಸ್ಯಾಂಡಲ್ ವುಡ್ ಡಿ ಬಾಸ್ ಜೊತೆ ಕನ್ನಡತಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತೆಲುಗು, ತಮಿಳು ಚಿತ್ರರಂಗದ ಟಾಪ್ ನಟಿಯಾಗಿ ಮಿಂಚುತ್ತಿರುವ ಅನುಷ್ಕಾ ದರ್ಶನ್ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ವಿಚಾರ ತುಂಬಾ ಸದ್ದು ಮಾಡುತ್ತಿದೆ. ಆದ್ರೆ ತೆಲುಗು ಚಿತ್ರರಂಗದ ಬಹು ಬೇಡಿಯ ನಟಿ ಅನುಷ್ಕಾ ಬರ್ತಾರಾ ಎನ್ನುವುದು ಅನುಮಾನ ಮೂಡಿಸಿದೆ.

  ದರ್ಶನ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ ರಾಕುಲ್

  ದರ್ಶನ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ ರಾಕುಲ್

  ಸೌತ್ ಸಿನಿ ಇಂಡಸ್ಟ್ರಿ ಮತ್ತೋರ್ವ ಟಾಪ್ ನಟಿ ರಾಕುಲ್ ಪ್ರೀತಿ ಸಿಂಗ್ ಬರ್ತಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ರಾಕುಲ್ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ರಾಕುಲ್ ಕನ್ನಡ ಚಿತ್ರರಂಗದ ಮೂಲಕವೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಹಾಗಾಗಿ ಮತ್ತೆ 'ರಾಬರ್ಟ್' ಮೂಲಕ ಕನ್ನಡಕ್ಕೆ ಬಂದರು ಅಚ್ಚರಿ ಇಲ್ಲ.

  ಸಾಯಿ ಪಲ್ಲವಿ ಬರ್ತಾರಂತೆ

  ಸಾಯಿ ಪಲ್ಲವಿ ಬರ್ತಾರಂತೆ

  'ರಾಬರ್ಟ್' ಸಿನಿಮಾದ ನಾಯಕಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೂಡ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ದಕ್ಷಿಣ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿರುವ ಸಾಯಿ ಕನ್ನಡ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಮಿಂಚಿರುವ ಪಲ್ಲವಿ ಕನ್ನಡಕ್ಕೆ ಬಂದ್ರು ಅಚ್ಚರಿ ಇಲ್ಲ.

  ದರ್ಶನ್ ಜೊತೆ ಮಹಾನಟಿ

  ದರ್ಶನ್ ಜೊತೆ ಮಹಾನಟಿ

  ಸ್ವಲ್ಪ ದಿನಗಳು ನಟಿ ಕೀರ್ತಿ ಸುರೇಶ್ ಹೆಸರು ಕೇಳಿ ಬರುತ್ತಿತ್ತು. ತಮಿಳು ಮತ್ತು ತೆಲುಗು ಪ್ರೇಕ್ಷಕರನ್ನು ರಂಜಿಸಿರುವ ಕೀರ್ತಿ 'ರಾಬರ್ಟ್' ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸೌತ್ ಸಿನಿ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿಯಾಗಿರುವ ಕೀರ್ತಿ ದಚ್ಚು ಜೊತೆ ರೋಮ್ಯಾನ್ಸ್ ಮಾಡ್ತಾರಾ ಕಾದು ನೋಡಬೇಕು.

  ಚಾಲೆಂಜಿಂಗ್ ಸ್ಟಾರ್ ಜೊತೆ ಮೆಹರಿನ್

  ಚಾಲೆಂಜಿಂಗ್ ಸ್ಟಾರ್ ಜೊತೆ ಮೆಹರಿನ್

  ಈಗ ಲೆಟೆಸ್ಟ್ ಆಗಿ ತೆಲುಗು ನಟಿ ಮೆಹರಿನ್ ಪಿರ್ಜಾದ ಹೆಸರು ಕೇಳಿ ಬರುತ್ತಿದೆ. ತೆಲುಗಿನಲ್ಲಿ ಸಾಕಷ್ಟು ಸಿನಿಮಾಗನ್ನು ಮಾಡಿರುವ ಮೆಹರಿನ್ 'ರಾಬರ್ಟ್' ಗೆ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 'ಕೃಷ್ಣಗಾರಿ ವೀರ ಪ್ರೇಮಂ ಗದಾ‌', 'ರಾಜ್ ದಿ ಗ್ರೇಟ್', 'ಎಫ್​-2', 'ನೋಟ' ಸೇರಿದಂತೆ ಹಲವು ಚಿತ್ರಗಳಲ್ಲಿ ಮೆಹರಿನ್ ಅಭಿನಯಿಸಿದ್ದಾರೆ.

  ಕನ್ನಡ ನಟಿಯರೆ ದರ್ಶನ್ ಗೆ ನಾಯಕಿ

  ಕನ್ನಡ ನಟಿಯರೆ ದರ್ಶನ್ ಗೆ ನಾಯಕಿ

  ಬಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ನಟಿಮಣಿಯರ ಹೆಸರೇ ಹೆಚ್ಚಾಗಿ ಕೇಳಿ ಬರುತ್ತಿದೆ. ಆದ್ರೆ ಇದ್ರ ಜೊತೆಗೆ ಕನ್ನಡ ನಾಯಕಿಯರು ಹೆಸರು ಕೂಡ ಸೇರ್ಪಡೆಯಾಗಿದೆ. ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಶ್ರೀನಿಧಿ ಸದ್ಯ ಕೆಜಿಎಫ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಚಿತಾ ರಾಮ್ ಹೆಸರು ಕೂಡ ಕೇಳಿಬರುತ್ತಿದೆ. ಈಗಾಗಲೆ ದರ್ಶನ್ ಜೊತೆ ಎರಡು ಸಿನಿಮಾಗಳಲ್ಲಿ ಮಿಂಚಿರುವ ರಚಿತಾ 'ರಾಬರ್ಟ್' ಗೂ ನಾಯಕಿಯಾಗುತ್ತಾರೆ ಎನ್ನುವ ಮಾತುಗಳು ಕೇಳ ಬರುತ್ತಿವೆ. ಆದ್ರೆ ಇಷ್ಟೆಲ್ಲ ನಾಯಕಿಯರ ಹೆಸರುಗಳು ಹರಿದಾಡುತ್ತಿದ್ರು ಚಿತ್ರತಂಡ ಮಾತ್ರ ಯಾವುದೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

  English summary
  The names of famous South Indian actresses are listening to Robert kannada film. Keerthi Suresh, Anushka Shetty, Sai Pallavi Names and many other actress name is going around for Robert movie heroine list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X