Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಳಾಸ ತಪ್ಪಿದ್ದರೂ ತಲುಪಿತು ಅಭಿಮಾನಿಯ ಪತ್ರ: ಶೈನ್ ಶೆಟ್ಟಿ ಭಾವುಕ
ಬಿಗ್ ಬಾಸ್ 7 ಮುಗಿದು ಒಂದು ತಿಂಗಳು ಕಳೆದರೂ ಅದರ ಹವಾ ಕಡಿಮೆಯಾಗಿಲ್ಲ. ಅದರ ಸ್ಪರ್ಧಿಗಳು ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲಿಯೂ ಸ್ಪರ್ಧೆಯ ವಿನ್ನರ್ ಶೈನ್ ಶೆಟ್ಟಿ ಅವರಿಗಂತೂ ಭಾರಿ ಬೇಡಿಕೆ. ನಟನಾಗಿದ್ದಾಗಲೇ ಅಭಿಮಾನಿಗಳನ್ನು ಸಂಪಾದಿಸಿದ್ದ, ಶೈನ್ ಶೆಟ್ಟಿ ಅವರಿಗೀಗ ಸಾವಿರಾರು ಹೊಸ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ಬಿಗ್ ಬಾಸ್‌ನಲ್ಲಿ ಶೈನ್ ಶೆಟ್ಟಿ 'ಶೈನ್' ಆಗಿದ್ದೇ ತಡ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಶೈನ್ ಶೆಟ್ಟಿ ಫೋನ್ ಕರೆಗಳನ್ನು ಸ್ವೀಕರಿಸುವುದರಲ್ಲಿಯೇ ಹೈರಾಣಾಗಿದ್ದಾರೆ. ಈ ನಡುವೆ ಅವರಿಗೆ ಅಭಿಮಾನಿಯೊಬ್ಬರು ಪತ್ರ ಬರೆದು ಅಚ್ಚರಿ ಹುಟ್ಟಿಸಿದ್ದಾರೆ. ಎಲ್ಲರೂ ಫೋನ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆ ಸಲ್ಲಿಸುತ್ತಿರುವಾಗ ಈ ಕಾಲದಲ್ಲಿ ಪತ್ರ ಬರೆದು ಅಭಿನಂದಿಸಿರುವುದು ಶೈನ್ ಶೆಟ್ಟಿ ಅವರಿಗೂ ವಿಸ್ಮಯ ಮೂಡಿಸಿದೆ.
ಅನಿಲ್
ಕುಂಬ್ಳೆ
ಮನೆಯಲ್ಲಿ
'ಬಿಗ್
ಬಾಸ್'
ವಿನ್ನರ್
ಶೈನ್
ಶೆಟ್ಟಿ:
ಭೇಟಿಯ
ಕಾರಣವೇನು?
ಆದರೆ ಅದಕ್ಕಿಂತಲೂ ವಿಶೇಷ ಅನಿಸಿದ ಮತ್ತೊಂದು ಅಂಶವಿದೆ. ಅದು ಶೈನ್ ಶೆಟ್ಟಿ ಅವರ ವಿಳಾಸ. ವಿಳಾಸ ಬರೆಯದೆ ನಿಮಗೆ ಪತ್ರ ಬರೆಯಲು ಸಾಧ್ಯವೇ? ಅದೇ ಶೈನ್‌ಗೆ ಅಚ್ಚರಿ ಮೂಡಿಸಿದೆ. ಮುಂದೆ ಓದಿ...

ಶೈನ್ ಶೆಟ್ಟಿ ತಾಯಿ ಬರೆದಿದ್ದ ಪತ್ರ
ಬಿಗ್ ಬಾಸ್ ಮನೆಯಲ್ಲಿದ್ದಾಗ ತಾಯಿ ಬರೆದ ಪತ್ರವನ್ನು ಶೈನ್ ಶೆಟ್ಟಿ ಓದಿ ಕಣ್ಣೀರಿಟ್ಟಿದ್ದರು. 'ನಿನಗೆ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೋ. ಬಿಗ್ ಬಾಸ್ ಮನೆಯಲ್ಲಿ ನೀನು ಚೆನ್ನಾಗಿ ಆಡುತ್ತಿದ್ದೀಯ ಎಂದು ಜನರು ಹೇಳುತ್ತಿದ್ದಾರೆ. ಮಗನೇ ನೀನು ಇಲ್ಲಿಯ ತನಕ ಅನುಭವಿಸಿರುವ ನೋವು ಕಷ್ಟ ಎಲ್ಲವನ್ನೂ ಎದುರಿಸಿ ನಿಂತಿದ್ದೀಯ. ಈಗ ಅವಕಾಶವನ್ನು ಉಪಯೋಗಿಸು' ಎಂದು ಶೈನ್ ತಾಯಿ ಪತ್ರ ಬರೆದಿದ್ದರು.

ತಾಯಿ ಬರೆದ ಪತ್ರದಂತೆಯೇ
ಬಿಗ್ ಬಾಸ್ ಮುಗಿದು ತಿಂಗಳ ಬಳಿಕ ಶೈನ್ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಲಕೋಟೆ ಮತ್ತು ಎರಡು ಪತ್ರಗಳಿವೆ. ಬಿಗ್ ಬಾಸ್ ಮನೆಗೆ ನನ್ನ ತಾಯಿ ಬರೆದ ಪತ್ರ ಎಷ್ಟು ಸಂತಸ ತಂದಿದೆಯೋ ಇಂದು ನೀವು ಬರೆದ ಪತ್ರವೂ ಅಷ್ಟೇ ಸಂತಸ ತಂದಿದೆ ಎಂದು ಶೈನ್ ಹೇಳಿಕೊಂಡಿದ್ದಾರೆ.
ಕಳೆದೆಲ್ಲ
ಸೀಸನ್
ವಿನ್ನರ್
ಗಿಂತ
ಹೆಚ್ಚು
ಬಹುಮಾನ
ಪಡೆದ
'ಬಿಗ್
ಬಾಸ್-7'
ವಿನ್ನರ್
ಶೈನ್
ಶೆಟ್ಟಿ

ಅಭಿಮಾನಿಯ ಮೊದಲ ಪತ್ರ
ಅಭಿಮಾನಿಯೊಬ್ಬರು ಪತ್ರ ಬರೆದಿರುವ ವಿಚಾರವನ್ನು ಶೈನ್ ಖುಷಿಯಿಂದ ಹೇಳಿಕೊಂಡಿದ್ದಾರೆ. ಕಾರಣ ಅವರಿಗೆ ಅಭಿಮಾನಿಗಳಿಂದ ಎಷ್ಟೇ ಫೋನ್ ಕರೆಗಳು, ಸಂದೇಶಗಳು ಬಂದಿದ್ದರೂ ಯಾರೂ ಪತ್ರ ಬರೆದಿರಲಿಲ್ಲ. ಇದು ಅವರಿಗೆ ಮೊದಲ ಬಾರಿಗೆ ಅಭಿಮಾನಿಯೊಬ್ಬರಿಂದ ಬಂದ ಪತ್ರವಾಗಿದೆ.

ಪತ್ರದಲ್ಲಿ ಶೈನ್ ವಿಳಾಸವೇ ಇಲ್ಲ
ಮತ್ತೊಂದು ವಿಶೇಷವೆಂದರೆ ಈ ಪತ್ರದಲ್ಲಿ ಶೈನ್ ಶೆಟ್ಟಿ ಅವರ ವಿಳಾಸವೇ ಇಲ್ಲ. ಪತ್ರ ಬರೆದ ಅಭಿಮಾನಿಗೆ ಬಹಶಃ ಅವರ ವಿಳಾಸ ತಿಳಿದಂತಿಲ್ಲ. ಶೈನ್ ಶೆಟ್ಟಿ ಅವರು ಬನಶಂಕರಿಯ ಎರಡನೆಯ ಹಂತದಲ್ಲಿ ವಾಸವಿದ್ದಾರೆ ಎಂಬುದಷ್ಟೇ ಅವರಿಗೆ ತಿಳಿದಂತಿದೆ. ಸಾಮಾನ್ಯವಾಗಿ ವಿಳಾಸ ಸರಿಯಾಗಿಲ್ಲದೆ ಇದ್ದರೆ ಪತ್ರ ಬರೆದವರಿಗೆ ವಾಪಸ್ ಹೋಗುತ್ತದೆ. ಆದರೆ ಶೈನ್ ಶೆಟ್ಟಿ ಜನಪ್ರಿಯರಾಗಿರುವುದರಿಂದ ಅವರ ಮನೆಗೇ ಪತ್ರ ತಲುಪಿದೆ. ವಿಳಾಸ ಸರಿ ಇಲ್ಲದೆ ಇದ್ದರೂ ಪತ್ರ ತಲುಪಿಸಿರುವ ಲೇಡಿ ಪೋಸ್ಟ್ ಮಾಸ್ಟರ್‌ಗೆ ಶೈನ್ ಶೆಟ್ಟಿ ಧನ್ಯವಾದ ಸಲ್ಲಿಸಿದ್ದಾರೆ.
ಬಿಗ್
ಬಾಸ್
ಬಳಿಕ
ಕುರಿ
ಪ್ರತಾಪ್
ಬೇಸರವಾದ್ರಾ!
ಸೋಲಿನ
ಬಗ್ಗೆ
ಪ್ರತಾಪ್
ಹೇಳಿದ್ದೇನು?

ಶೈನ್ ಶೆಟ್ಟಿಗೆ ಬಂದ ಪತ್ರದಲ್ಲಿ ಏನಿದೆ?
ಶೈನ್ ಅವರಿಗೆ ಬರೆದ ಪತ್ರದ ಲಕೋಟೆಯ ಮೇಲೆ ಅವರ ಚಿತ್ರವೊಂದನ್ನು ಕಟ್ ಮಾಡಿ ಅಂಟಿಸಲಾಗಿದೆ. ಪಕ್ಕದಲ್ಲಿ ಒಂದು ರೂ. ನ ಚಿಕ್ಕ ನಾಣ್ಯವನ್ನು ಇರಿಸಲಾಗಿದೆ. ಶೈನ್ ಅವರ ವಿಳಾಸವನ್ನು, 'ಬಿಗ್ ಬಾಸ್ ಶೈನ್ ಶೆಟ್ಟಿ, ಬಿಗ್‌ಬಾಸ್ ಗಲ್ಲಿ ಚಿಕನ್ ಶೈನ್ ಶೆಟ್ಟಿ ಬನಶಂಕರಿ, 2ನೇ ಹಂತ ಬೆಂಗಳೂರು ಎಂದಷ್ಟೇ ಬರೆಯಲಾಗಿದೆ. ನೀಲಿ ಹಾಗೂ ತೆಳು ಗುಲಾಬಿ ಬಣ್ಣದ ಎರಡು ಪತ್ರಗಳು ಹಿನ್ನೆಲೆಯಲ್ಲಿವೆ. ಈ ಪತ್ರವನ್ನು ಬರೆದವರು ಯಾರು? ಅದರಲ್ಲಿ ಏನು ಬರೆದಿದ್ದಾರೆ ಎಂಬ ಸಂಗತಿಯನ್ನು ಶೈನ್ ಬಹಿರಂಗಪಡಿಸಿಲ್ಲ.