»   » 'ದಾಸ' ದರ್ಶನ್ ಜೊತೆ ಡ್ಯಾನ್ಸ್ ಮಾಡ್ಬೇಕಾ.? ಇಲ್ಲಿದೆ ಗೋಲ್ಡನ್ ಚಾನ್ಸ್

'ದಾಸ' ದರ್ಶನ್ ಜೊತೆ ಡ್ಯಾನ್ಸ್ ಮಾಡ್ಬೇಕಾ.? ಇಲ್ಲಿದೆ ಗೋಲ್ಡನ್ ಚಾನ್ಸ್

By: ಮೈಸೂರು ಪ್ರತಿನಿಧಿ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸುದ್ದಿ ಮಾಡುತ್ತಿರುವ 'ನಾಗರಹಾವು' ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವುದಂತೂ ಸತ್ಯ. ಈ ಚಿತ್ರದಲ್ಲಿ ನಟ ವಿಷ್ಣುವರ್ಧನ್ ರಾರಾಜಿಸುತ್ತಿದ್ದು, ತೆರೆಮೇಲೆ ಡಾ.ವಿಷ್ಣುವರ್ಧನ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಸಂಪೂರ್ಣ ಉತ್ತರ ಸಿಗಬೇಕಾದರೆ ಚಿತ್ರ ಬಿಡುಗಡೆ ಆಗಬೇಕು.

ಈಗಾಗಲೇ ರಿಲೀಸ್ ಆಗಿರುವ 'ನಾಗರಹಾವು' ಚಿತ್ರದ ಟೀಸರ್ ಸದ್ದು ಮಾಡಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಹೆಡ್ ರೀಪ್ಲೇಸ್ಮೆಂಟ್ ತಂತ್ರಜ್ಞಾನದ ಮೂಲಕ ಮತ್ತೆ ತೆರೆಯ ಮೇಲೆ ತರುವ ಪ್ರಯತ್ನವನ್ನ ಚಿತ್ರತಂಡ ಮಾಡಿದೆ. ['ನಾಗರಹಾವು' ಚಿತ್ರದಲ್ಲಿ ದರ್ಶನ್: ಎಕ್ಸ್ ಕ್ಲೂಸಿವ್ ಡೀಟೇಲ್ಸ್ ಇಲ್ಲಿದೆ]


ಇನ್ನೂ ಇದೇ 'ನಾಗರಹಾವು' ಚಿತ್ರದ ವಿಶೇಷ ಹಾಡಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಳ್ಳುತ್ತಿರುವುದು ಸೂಪರ್ ಸ್ಪೆಷಾಲಿಟಿ. ಇದೇ ಹಾಡಲ್ಲಿ ದರ್ಶನ್ ಜೊತೆ ನೀವೂ ಡ್ಯಾನ್ಸ್ ಮಾಡಬಹುದು.! ಹೆಚ್ಚಿನ ಮಾಹಿತಿ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ....


ಸಮಸ್ತ ಕನ್ನಡ ಅಭಿಮಾನಿಗಳಿಗೆ ಆದರದ ಸುಸ್ವಾಗತ

'ನಾಗರಹಾವು' ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸಲು ಎಲ್ಲಾ ಕನ್ನಡ ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ['ವಿಷ್ಣು' ದಾದಾ ಮತ್ತು 'ಜಗ್ಗು ದಾದಾ' ದರ್ಶನ್ ಕುರಿತು ಈಗಷ್ಟೇ ಬಂದ ಬಿಗ್ ನ್ಯೂಸ್]


ಚಿತ್ರೀಕರಣ ಯಾವಾಗ?

ಸೆಪ್ಟೆಂಬರ್ 2 ಹಾಗೂ 3 ರಂದು ದರ್ಶನ್ ಹೆಜ್ಜೆ ಹಾಕಲಿರುವ 'ನಾಗರಹಾವು' ಚಿತ್ರದ ಸ್ಪೆಷಲ್ ಸಾಂಗ್ ಶೂಟಿಂಗ್ ನಡೆಯಲಿದೆ.


ಶೂಟಿಂಗ್ ಎಲ್ಲಿ?

ಸಾಂಸ್ಕೃತಿಕ ನಗರಿ ಮೈಸೂರಿನ ಮಹಾರಾಜ ಕಾಲೇಜ್ ಗ್ರೌಂಡ್ ನಲ್ಲಿ 'ನಾಗರಹಾವು' ಹಾಡಿನ ಚಿತ್ರೀಕರಣ ನಡೆಯಲಿದೆ.


ಇದು ಡಾ.ವಿಷ್ಣುವರ್ಧನ್ ರವರಿಗೆ ಅರ್ಪಣೆ

ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರಿಗೆ ಗೌರವಾರ್ಥವಾಗಿ ಈ ಹಾಡನ್ನ ರೆಡಿ ಮಾಡಲಾಗುತ್ತಿದೆ. ಹಾಡಿಗೆ ಕವಿರಾಜ್ ಸಾಹಿತ್ಯ, ಗುರುಕಿರಣ್ ಸಂಗೀತವಿದೆ.


ನೀವು ಅಪ್ಪಟ ವಿಷ್ಣುದಾದಾ, ಜಗ್ಗುದಾದಾ ಫ್ಯಾನ್ಸ್ ಆಗಿದ್ರೆ.....

ನೀವು ಡಾ.ವಿಷ್ಣುವರ್ಧನ್ ಹಾಗೂ ದರ್ಶನ್ ರವರ ಅಪ್ಪಟ ಅಭಿಮಾನಿ ಆಗಿದ್ರೆ, ಈ ಚಾನ್ಸ್ ಮಿಸ್ ಮಾಡ್ಬೇಡಿ. ಗಣೇಶ್ ಆಚಾರ್ಯ ನೃತ್ಯ ಸಂಯೋಜಿಸುವ ಹಾಡಲ್ಲಿ ದರ್ಶನ್ ಜೊತೆ ನೀವೂ ಸ್ಟೆಪ್ ಹಾಕಿ....


English summary
Hardcore fans can also take part in the shooting of 'Nagarahavu' song along with Darshan, which will be held in Mysuru, on September 2nd and 3rd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada