»   » ಪ್ರೇಮಿಗಳ ದಿನ ತುಪ್ಪದ ಬೆಡಗಿ ರಾಗಿಣಿ ಏನ್ಮಾಡ್ತಾರೆ?

ಪ್ರೇಮಿಗಳ ದಿನ ತುಪ್ಪದ ಬೆಡಗಿ ರಾಗಿಣಿ ಏನ್ಮಾಡ್ತಾರೆ?

Posted By:
Subscribe to Filmibeat Kannada

ಹದಿಹರೆಯದ ಪ್ರೇಮಿಗಳ ಪಾಲಿಗೆ ನಾಳೆ (ಫೆಬ್ರವರಿ 14) ಯುಗಾದಿ ಹಬ್ಬ ಇದ್ದ ಹಾಗೆ. ಇಂತಹ ವಾಲೆಂಟೈನ್ಸ್ ಡೇ ದಿನ ನಮ್ಮ ಸ್ಯಾಂಡಲ್ ವುಡ್ಡಿನ ತುಪ್ಪದ ಬೆಡಗಿ ರಾಗಿಣಿ ಏನ್ಮಾಡ್ತಾರೆ? ತೆರೆಮೇಲೆ ಪಡ್ಡೆಗಳ ಮೈಬೆಚ್ಚಗೆ ಮಾಡುವ ರಾಗಿಣಿಗೆ ನಿಜ ಜೀವನದಲ್ಲಿ ಪ್ರಾಣ ಕೊಡುವ ಇನಿಯ ಇದ್ದಾನಾ?

ಈ ಕೂತುಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ತಮ್ಮ ಲವ್ ಲೈಫ್ ಬಗ್ಗೆ ರಾಗಿಣಿ ಎಲ್ಲೂ ಹೇಳಿಕೊಂಡಿಲ್ಲ. ಹಾಗಾದ್ರೆ, ಪ್ರೇಮಿಗಳ ದಿನ ರಾಗಿಣಿ ಪ್ಲಾನ್ ಏನಪ್ಪಾ ಅಂದ್ರೆ, ಬೆಳ್ಳಗ್ಗೆ 10 ಗಂಟೆ ಸುಮಾರಿಗೆ ಗಾಂಧಿನಗರದಲ್ಲಿರುವ ಕಾನಿಷ್ಕಾ ಹೋಟೆಲ್ ಗೆ ತೆರಳುತ್ತಿದ್ದಾರೆ.

Actress Ragini

ವಿಶೇಷತೆ ಇರುವುದೇ ಇಲ್ಲಿ. ಆರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿರುವ ರಾಗಿಣಿಗೆ, ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ಇಂತಹ ಅಭಿಮಾನಿಗಳೆಲ್ಲಾ ಒಟ್ಟುಗೂಡಿ, ಅಧಿಕೃತವಾಗಿ 'ಅಖಿಲ ಕರ್ನಾಟಕ ರಾಗಿಣಿ ಅಭಿಮಾನಿಗಳ ಸಂಘ' ಸ್ಥಾಪಿಸಿದ್ದಾರೆ.

ಅದರ ಉದ್ಘಾಟನಾ ಸಮಾರಂಭ ನಾಳೆ ಕಾನಿಷ್ಕಾ ಹೋಟೆಲ್ ನಲ್ಲಿ ನಡೆಯಲಿದೆ. ಪ್ರೇಮಿಗಳ ದಿನ ರಾಗಿಣಿಗೆ ಉಡುಗೊರೆ ರೂಪದಲ್ಲಿ ಅವರ ಅಭಿಮಾನಿಗಳು ಪ್ರೀತಿಯಿಂದ ಸೇರಿ ಮಾಡಿರುವ ಪ್ಲಾನ್ ಇದು. [ಟಾಪ್ ಟು ಬಾಟಮ್ ಬದಲಾಗಿದ್ದಾರೆ ರಾಗಿಣಿ ನೋಡಿ]

ಇಲ್ಲಿಯವರೆಗೂ ಸ್ಟಾರ್ ನಟರ ಹೆಸರಲ್ಲಿ ಹಲವಾರು ಅಭಿಮಾನಿ ಸಂಘಗಳಿವೆ. ಆದ್ರೆ, ನಟಿಯೊಬ್ಬರಿಗಾಗಿ ಇರುವ ಅಭಿಮಾನಿ ಬಳಗ ಬೆರಳೆಣಿಕೆಯಷ್ಟು ಮಾತ್ರ. ಅಂತಹ ಸಾಲಿಗೆ ಈಗ ರಾಗಿಣಿ ಹೊಸ ಸೇರ್ಪಡೆ ಅಷ್ಟೆ. (ಏಜೆನ್ಸೀಸ್)

English summary
Fans of Actress Ragini Dwivedi have formed The association named Akhila Karnataka Ragini Abhimanigala Sangha, which is all set to be inaugurated tomorrow on Valentines Day (February 14th)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada