For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಜನ್ಮದಿನ ಕೇಕ್ ಕತ್ತರಿಸಿ ಸಂಭ್ರಮಿಸಿದ ಅಂಧರು

  By ಮೋಹನ್ ಪಿ.
  |

  ಕನ್ನಡ ಚಿತ್ರರಂಗದ ನಂಬರ್ ಒನ್ ನಟಿ, ತಮ್ಮ ಅತ್ಯುತ್ತಮ ನಟನಾ ಕೌಶಲ್ಯದಿಂದಲೇ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಅಭಿಮಾನಿಗಳ ಆರಾಧ್ಯ ದೇವತೆ, ಲಕ್ಕಿ ಸ್ಟಾರ್, ಗೋಲ್ಡನ್ ಗರ್ಲ್ ಎಂದೇ ಖ್ಯಾತಿಯಾಗಿರುವ ರಮ್ಯಾ ಅವರ ಹುಟ್ಟುಹಬ್ಬವನ್ನು ನವೆಂಬರ್ 29ರಂದು ಅವರ ಸ್ಯಾಂಡಲ್ ವುಡ್ ಕ್ವೀನ್ ಅಭಿಮಾನಿಗಳ ಸಂಘ ವಿಶಿಷ್ಟವಾಗಿ ಆಚರಿಸಿತು.


  ರಮ್ಯಾ ಹುಟ್ಟುಹಬ್ಬದ ಅಂಗವಾಗಿ ನಿನ್ನೆ(ನ. 29) ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿಮಾನಿಗಳ ಸಂಘದವರಿಂದ ಜೆ.ಪಿ.ನಗರದಲ್ಲಿರುವ ಶಿವನ ದೇವಾಲಯದಲ್ಲಿ ಮಹಾಭಿಷೇಕ ಮತ್ತು ರಮ್ಯಾ ಹೆಸರಿನಲ್ಲಿ ವಿಶೇಷವಾದ ಪೂಜೆ ಸಲ್ಲಿಸಲಾಯಿತು.

  ರಮ್ಯಾರವರು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತರಾಗಿದ್ದರು. ಆದರೆ ಅವರು ಪ್ರವಾಸ ಹೋಗಿರುವುದರಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾದ್ಯವಾಗಲಿಲ್ಲ. ಆದಕಾರಣ ರಮ್ಯಾರವರ ಅನುಪಸ್ಥಿತಿಯಲ್ಲಿ ಜೆ.ಪಿ.ನಗರದಲ್ಲಿರುವ ಶ್ರೀ ರಮಣ ಮಹರ್ಷಿ ಶಾಲೆಯಲ್ಲಿನ ಅಂಧ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ರಮ್ಯಾರವರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

  ಅಭಿಮಾನಿಗಳಿಂದ ಶ್ರೀ ರಮಣ ಮಹರ್ಷಿ ಶಾಲೆಯಲ್ಲಿನ ಅಂಧ ಮಕ್ಕಳಿಗೆ ವಿಶೇಷವಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ನಾರಾಯಣ ನೇತ್ರಾಲಯ ಸಹಯೋಗದಲ್ಲಿ ನೇತ್ರದಾನ ಶಿಬಿರವನ್ನು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿಮಾನಿಗಳ ಸಂಘ ಆಯೋಜಿಸಿತ್ತು. ಈ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ಸಿಕ್ಕಿತು. ಅಭಿಮಾನಿಗಳು ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕು ನೀಡುವ ಮಹತ್ವದ ಕೆಲಸದಲ್ಲಿ ಭಾಗಿಯಾದರು.

  ರಮ್ಯಾ ಅವರು ಕೂಡ 2009ರಲ್ಲಿ ತನ್ನ ಹುಟ್ಟುಹಬ್ಬದ ದಿನದಂದೇ ಅವರ ಕಣ್ಣುಗಳನ್ನು ದಾನ ಮಾಡಿದನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದು. ದಿಲ್ ಕಾ ರಾಜಾ, ನೀರ್ ದೋಸೆ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವ ರಮ್ಯಾ ಅಭಿಮಾನಿಗಳ ಸಂಘ ಆಯೋಜಿಸಿದ್ದ ರಮ್ಯಾ ಜನ್ಮದಿನದ ಸಂಭ್ರಮ ಮತ್ತು ನೇತ್ರದಾನ ಶಿಬಿರ ಯಶಸ್ವಿಯಾಗಿ ನಡೆಯಿತು.

  English summary
  Fans of Kannada actress Ramya celebrated her birthday on November 29, 2012 by organizing blood donation camp. On this occasion blind children cut the cake and sumptuous food was supplied to the children. Special pooja was too performed at Shiva temple in JP Nagar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X