For Quick Alerts
  ALLOW NOTIFICATIONS  
  For Daily Alerts

  'ಜೇಮ್ಸ್' ಚಿತ್ರಕ್ಕೆ 'ಇವರೇ' ನಾಯಕಿ ಆಗ್ಬೇಕಂತೆ: ಅಪ್ಪು ಫ್ಯಾನ್ಸ್ ಬೇಡಿಕೆ

  |
  ಅಪ್ಪುಗೆ ನಾಯಕಿಯಾಗೋ ಲಿಸ್ಟ್ ನಲ್ಲಿ ಇರೋ ಕನ್ನಡದ ನಟಿ ಯಾರು? | James | Puneeth Rajkumar | Heroine

  ಯುವರತ್ನ ಸಿನಿಮಾ ಮುಗಿಯುತ್ತಿದ್ದ ಪುನೀತ್ ರಾಜ್ ಕುಮಾರ್ ಜೇಮ್ಸ್ ಅವತಾರವೆತ್ತಲಿದ್ದಾರೆ. ಬಹುದ್ದೂರ್ ಖ್ಯಾತಿಯ ಚೇತನ್ ಕುಮಾರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಸಿನಿಮಾ ಮುಹೂರ್ತ ಮಾಡಿಕೊಂಡಿದೆ.

  ನಾಯಕಿ ವಿಚಾರಕ್ಕೆ ಜೇಮ್ಸ್ ಸಿನಿಮಾ ಭಾರಿ ಸದ್ದು ಮಾಡ್ತಿದೆ. ಪುನೀತ್ ಗೆ ಯಾರು ಜೋಡಿಯಾಗ್ತಾರೆ ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಈಗಾಗಲೇ ನಿರ್ದೇಶಕ ಚೇತನ್ ಮತ್ತು ಚಿತ್ರತಂಡ ಐದು ಸ್ಟಾರ್ ನಟಿಯರನ್ನು ಸಂಪರ್ಕಿಸಿದ್ದಾರಂತೆ.

  'ಜೇಮ್ಸ್' ನಾಯಕಿಗಾಗಿ ಕನ್ನಡ-ಪರಭಾಷಿಗರ ನಡುವೆ ಫೈಟ್! ನಿಮ್ಮ ಆಯ್ಕೆ ಯಾರು?'ಜೇಮ್ಸ್' ನಾಯಕಿಗಾಗಿ ಕನ್ನಡ-ಪರಭಾಷಿಗರ ನಡುವೆ ಫೈಟ್! ನಿಮ್ಮ ಆಯ್ಕೆ ಯಾರು?

  ಈ ಕುರಿತು ಫಿಲ್ಮಿಬೀಟ್ ಕನ್ನಡ ಪೋಲ್ ಆಯೋಜನೆ ಮಾಡಿತ್ತು. ಅಪ್ಪುಗೆ ಜೇಮ್ಸ್ ಚಿತ್ರದಲ್ಲಿ ನಾಯಕಿ ಯಾರಿದ್ದರೆ ಉತ್ತಮ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಫ್ಯಾನ್ಸ್ ಆಯ್ಕೆ ಮಾಡಿರುವ ನಟಿ ಯಾರು ಎಂದು ಮುಂದೆ ಓದಿ...

  ಇಬ್ಬರು ತೆಲುಗು-ಮೂವರು ಕನ್ನಡ ನಟಿಯರು

  ಇಬ್ಬರು ತೆಲುಗು-ಮೂವರು ಕನ್ನಡ ನಟಿಯರು

  ತೆಲುಗು ನಟಿ ಪೂಜಾ ಹೆಗ್ಡೆ, ನಿಧಿ ಅಗರ್ವಾಲ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ ಮತ್ತು ನಭಾ ನಟೇಶ್ ಅವರ ಜೊತೆ ಜೇಮ್ಸ್ ಚಿತ್ರತಂಡ ಮಾತುಕತೆ ನಡೆಸುತ್ತಿದ್ದು, ಈ ಐವರಲ್ಲಿ ಒಬ್ಬರನ್ನು ನಾಯಕಿಯನ್ನಾಗಿಸಲು ಪ್ಲಾನ್ ಮಾಡಿದೆಯಂತೆ.

  ಪೂಜಾ ಹೆಗ್ಡೆ ಉತ್ತಮ ಆಯ್ಕೆ

  ಪೂಜಾ ಹೆಗ್ಡೆ ಉತ್ತಮ ಆಯ್ಕೆ

  ಜೇಮ್ಸ್ ಚಿತ್ರದಲ್ಲಿ ಪುನೀತ್ ಅವರ ಜೊತೆ ತೆಲುಗು ನಟಿ ಪೂಜಾ ಹೆಗ್ಡೆ ಅವರನ್ನು ನೋಡಲು ಹೆಚ್ಚು ಜನರ ಇಷ್ಟಪಡುತ್ತಿದ್ದಾರೆ. ಸದ್ಯ ಟಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿರುವ ಪೂಜಾ, ಪುನೀತ್ ಗೆ ತಕ್ಕ ಜೋಡಿ ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ.

  ಬೇಸಿಗೆಯಲ್ಲಿ ಸ್ಟಾರ್ ನಟರ ಕಾಳಗ: ಒಂದೇ ತಿಂಗಳಲ್ಲಿ ಬರ್ತಿವೆ ಬಿಗ್ ಸಿನಿಮಾಗಳುಬೇಸಿಗೆಯಲ್ಲಿ ಸ್ಟಾರ್ ನಟರ ಕಾಳಗ: ಒಂದೇ ತಿಂಗಳಲ್ಲಿ ಬರ್ತಿವೆ ಬಿಗ್ ಸಿನಿಮಾಗಳು

  ಪೂಜಾಗೆ ಫೈಟ್ ನೀಡಿದ ಶ್ರೀಲೀಲಾ!

  ಪೂಜಾಗೆ ಫೈಟ್ ನೀಡಿದ ಶ್ರೀಲೀಲಾ!

  ಪೂಜಾ ಹೆಗ್ಡೆಗೆ ತಕ್ಕ ಪೈಪೋಟಿ ನೀಡಿರುವುದು ಕನ್ನಡ ನಟಿ ಶ್ರೀಲೀಲಾ. ಕನ್ನಡದಲ್ಲಿ ಕಿಸ್ ಮತ್ತು ಭರಾಟೆ ಚಿತ್ರಗಳಲ್ಲಿ ನಟಿಸಿರುವ ಶ್ರೀಲೀಲಾ, ಜೇಮ್ಸ್ ಗೆ ನಾಯಕಿಯಾಗಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಫ್ಯಾನ್ಸ್. ಹಾಗ್ನೋಡಿದ್ರೆ, ಪೂಜಾ ಹೆಗ್ಡೆ ಮತ್ತು ಶ್ರೀಲೀಲಾಗೆ ಸಮಾನ ಮತಗಳು ಸಿಕ್ಕಿದೆ.

  ಉಳಿದವರ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ

  ಉಳಿದವರ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ

  ಪೂಜಾ ಹೆಗ್ಡೆ ಮತ್ತು ಶ್ರೀಲೀಲಾ ಬಿಟ್ಟರೆ ರಶ್ಮಿಕಾ ಮಂದಣ್ಣ, ನಿಧಿ ಅಗರ್ವಾಲ್ ಹಾಗೂ ನಭಾ ನಟೇಶ್ ಅವರ ಕುರಿತು ಆಸಕ್ತಿ ಹೊಂದಿರುವ ಅಭಿಮಾನಿಗಳ ಸಂಖ್ಯೆ ಕಡಿಮೆ. ರಶ್ಮಿಕಾ ಈ ಹಿಂದೆ 'ಅಂಜನಿಪುತ್ರ' ಚಿತ್ರದಲ್ಲಿ ನಟಿಸಿದ್ದರು.

  ನಿರ್ದೇಶಕರ ಆಯ್ಕೆ ಯಾರು?

  ನಿರ್ದೇಶಕರ ಆಯ್ಕೆ ಯಾರು?

  ಫಿಲ್ಮಿಬೀಟ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಐದು ಜನ ನಟಿಯರ ಜೊತೆ ಚೇತನ್ ಮತ್ತು ತಂಡ ಮಾತುಕತೆ ಹಂತದಲ್ಲಿದೆ. ಈಗ ಅಭಿಮಾನಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಜೇಮ್ಸ್ ಚಿತ್ರಕ್ಕೆ ಯಾವ ನಟಿಯನ್ನು ಕರೆತರಲಿದ್ದಾರೆ ಎಂದು ಕಾದುನೋಡಬೇಕಿದೆ.

  English summary
  Telugu actress Pooja hegde, nidhi agarwal, rashmika mandanna, nabha natesh and sri leela...who is the correct pair for puneeth's James movie. fans choice this actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X