»   » ಅಭಿಮಾನಿಗಳಿಂದ ಕಿಚ್ಚನಿಗಾಗಿ, ಕಿಚ್ಚನಿಗೋಸ್ಕರ ವೆಬ್ ಸೈಟ್ ಮತ್ತು ಆಪ್

ಅಭಿಮಾನಿಗಳಿಂದ ಕಿಚ್ಚನಿಗಾಗಿ, ಕಿಚ್ಚನಿಗೋಸ್ಕರ ವೆಬ್ ಸೈಟ್ ಮತ್ತು ಆಪ್

Posted By:
Subscribe to Filmibeat Kannada
ಕಿಚ್ಚನಿಗಾಗಿ ಅಭಿಮಾನಿಗಳಿಂದ ಆಪ್ ಹಾಗು ವೆಬ್ ಸೈಟ್ | FIlmibeat Kannada

ಅಭಿಮಾನಿಯ ಅಭಿಮಾನಿಯಾಗಿರುವ ಕಿಚ್ಚ ಸುದೀಪ್ ಗಾಗಿ ಅಭಿಮಾನಿಗಳು ಒಂದು ಮಹತ್ವದ ಕಾರ್ಯ ಮಾಡಿದ್ದಾರೆ. ಸದಾ ಅಭಿಮಾನಿಗಳಿಗಾಗಿ ಮತ್ತು ಅವರ ಕಷ್ಟಗಳಿಗೆ ಸ್ಪಂದಿಸುವ ಸುದೀಪ್, ಅಭಿಮಾನಿಗಳ ಕೆಲಸವನ್ನ ಮೆಚ್ಚಿಕೊಂಡಿದ್ದಾರೆ.

ಆಮಿ ಜಾಕ್ಸನ್ ಕಡೆಯಿಂದ 'ದಿ ವಿಲನ್' ಚಿತ್ರಕ್ಕೆ ಸಮಸ್ಯೆ!

ಕೇವಲ ಕನ್ನಡ ಸಿನಿಮಾರಂಗವಷ್ಟೇ ಅಲ್ಲದೆ ಬಾಲಿವುಡ್, ಟಾಲಿವುಡ್ ಹಾಗೂ ಹಾಲಿವುಡ್ ನಲ್ಲೂ ಸುದ್ದಿ ಮಾಡ್ತಿರೋ ಕಿಚ್ಚನ ಬಗ್ಗೆ ಸಂಪೂರ್ಣ ಮಾಹಿತಿ ನಿಮ್ಮ ಅಂಗೈನಲ್ಲೇ ಸಿಗಲಿದೆ. ಒಂದೇ ಕ್ಲಿಕ್ ನಲ್ಲಿ ಸುದೀಪ್ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಸಿಗಲಿದೆ. ಮುಂದೆ ಓದಿರಿ...

ಅಂಗೈಯಲ್ಲಿ ಸಿಗಲಿದೆ ಮಾಹಿತಿ

ಅಭಿಮಾನಿಗಳು ಕಿಚ್ಚ ಸುದೀಪ್ ಗಾಗಿ ಒಂದು ವೆಬ್ ಸೈಟ್ ಅನ್ನ ಮಾಡಿದ್ದಾರೆ. ಇಲ್ಲಿ ಸುದೀಪ್ ಬಗೆಗಿನ ಎಲ್ಲಾ ರೀತಿಯ ಮಾಹಿತಿಗಳು ಸಿಗಲಿದೆ. ksfaofficial.com ಹೆಸರಿನಲ್ಲಿ ವೆಬ್ ಸೈಟ್ ಅನ್ನ ಬೆಳಗಾವಿಯ ಅಭಿಮಾನಿಗಳು ಮಾಡಿದ್ದಾರೆ.

ಹಾಲಿವುಡ್ ಸಿನಿಮಾ 'ರೈಸನ್'ನಲ್ಲಿ ಸುದೀಪ್ ಕಂಗೊಳಿಸುವುದು ಹೀಗೆ..!

ನಿರ್ಮಾಣ ಸಂಸ್ಥೆಯ ಬಗ್ಗೆ ಮಾಹಿತಿ

ಸುದೀಪ್ ಅಭಿನಯಿಸಿರುವ ಸಿನಿಮಾಗಳು ಹಾಗೂ ಅಭಿನಯಿಸಲಿರುವ ಚಿತ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ವೆಬ್ ಸೈಟ್ ನಲ್ಲಿ ದೊರೆಯಲಿದೆ. ಅದರ ಜೊತೆಯಲ್ಲಿ ಕಿಚ್ಚ ಕ್ರಿಯೇಷನ್ಸ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾಗಳ ಬಗ್ಗೆ ಡಿಟೇಲ್ಸ್ ಇಲ್ಲಿದೆ.

ಸುದೀಪ್ ಬಗ್ಗೆ ಬಾಂಗ್ಲಾ, ಪಾಕಿಸ್ತಾನಿಗಳು ಮಾಡಿರುವ ಕಾಮೆಂಟ್ ನೋಡಿ.!

ಮೊದಲ ಆಪ್ ಹೊಂದಿರುವ ನಾಯಕ

ಕಿಚ್ಚ ಸುದೀಪ್ ಅಭಿಮಾನಿ ಬಳಗ ವೆಬ್ ಸೈಟ್ ಜೊತೆಯಲ್ಲಿ ksfa ಆಪ್ ಅನ್ನು ಲಾಂಚ್ ಮಾಡಿದ್ದಾರೆ. ಈ ಆಪ್ ನಿಮ್ಮ ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಂಡರೆ ಸುದೀಪ್ ಅಭಿನಯದ ಮುಂದಿನ ಸಿನಿಮಾಗಳು, ಚಿತ್ರಗಳ ಬಗೆಗಿನ ಸುದ್ದಿ ಹಾಗೂ ನೀವು ಎಂದು ನೋಡಿರದ ಕಿಚ್ಚ ಫೋಟೋಗಳನ್ನ ನೋಡಬಹುದು.

ಸುದೀಪ್-ಶಿವಣ್ಣ 'ದಿ ವಿಲನ್' ಚಿತ್ರಕ್ಕೆ ಅಸಲಿ ವಿಲನ್ ಎಂಟ್ರಿ.!

ರಾಜ್ಯದ ಎಲ್ಲಾ ಅಭಿಮಾನಿಗಳ ಸಾಥ್

ರಾಜ್ಯದ ಹಲವು ಕಡೆಯಿಂದ ಕಿಚ್ಚನ ಅಭಿಮಾನಿಗಳು ಒಟ್ಟಿಗೆ ಸೇರಿ ಕೆ ಎಸ್ ಎಫ್ ಎ ಆಪ್ ಮತ್ತು ವೆಬ್ ಸೈಟ್ ಮಾಡಿದ್ದಾರೆ. ಯಾವುದೇ ಎಕ್ಸ್‌ಪರ್ಟ್ ಗಳ ಸಹಾಯವಿಲ್ಲದೇ ತಾವೇ ಕಲಿತುಕೊಂಡು ತಮಗಿಷ್ಟವಾದ ರೀತಿಯಲ್ಲಿ ವೆಬ್ ಸೈಟ್ ಮತ್ತು ಆಪ್ ಡಿಸೈನ್ ಮಾಡಿದ್ದಾರೆ.

ಸುದೀಪ್ ರಿಂದ ಲಾಂಚ್

ವೆಬ್ ಸೈಟ್ ಮತ್ತು ಆಪ್ ಮಾಡಿದ್ದಾರೆ ಅನ್ನೋ ವಿಚಾರ ತಿಳಿದ ಕಿಚ್ಚ ಸುದೀಪ್ ತಾವೇ ಆಪ್ ಮತ್ತು ವೆಬ್ ಸೈಟ್ ಅನ್ನ ಲಾಂಚ್ ಮಾಡಿದ್ದಾರೆ. ಇದರಿಂದ ಸ್ವಂತ ಆಪ್ ಹೊಂದಿರೋ ಕನ್ನಡದ ಏಕೈಕ ನಟ ಕಿಚ್ಚ ಸುದೀಪ್ ಅನ್ನೋ ಹೆಗ್ಗಳಿಕೆಗೆ ಸುದೀಪ್ ಪಾತ್ರರಾಗಿದ್ದಾರೆ.

English summary
Belagavi Sudeep fans has created a website and app (ksfaofficial.com) for all the information related to Kiccha Sudeep. ಬೆಳಗಾವಿಯ ಸುದೀಪ್ ಅಭಿಮಾನಿಗಳು ಸುದೀಪ್ ವೆಬ್ ಸೈಟ್ ಮತ್ತು ಆಪ್ ಅನ್ನ ಲಾಂಚ್ ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada