For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಭೀತಿ ನಡುವೆಯೇ ಬಿಗ್‌ಬಾಸ್ ಸ್ಪರ್ಧಿಗೆ ಭರ್ಜರಿ ಸ್ವಾಗತ: ಬುಕ್ ಆಯ್ತು ಕೇಸ್

  |

  ಕೊರೊನಾ ಭೀತಿಯಿಂದಾಗಿ ಸ್ಟಾರ್, ಸೂಪರ್‌ ಸ್ಟಾರ್ ಗಳೆಲ್ಲಾ ಮನೆಯಲ್ಲಿ ಕೂತಿರುವಾಗ ಬಿಗ್ ಬಾಸ್ ಸ್ಪರ್ಧಿಯೊಬ್ಬ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡು ಅವಾಂತರ ಸೃಷ್ಟಿಸಿದ್ದಾನೆ.

  ಕೊರೊನಾ ಭೀತಿಯಿಂದಾಗಿ ಸಾರ್ವಜನಿಕರು ಒಂದೆಡೆ ದೊಡ್ಡದಾಗಿ ಗುಂಪು ಸೇರುವುದನ್ನು ಬಹುತೇಕ ಎಲ್ಲಾ ರಾಜ್ಯ ಸರ್ಕಾರಗಳು ನಿಷೇಧಿಸಿವೆ. ಆದರೆ ಇದನ್ನು ಉಲ್ಲಂಘಿಸಿ ಬಿಗ್ ಬಾಸ್ ಸ್ಪರ್ಧಿಯನ್ನು ನೋಡಲು ನೂರಾರು ಮಂದಿ ಒಂದೆಡೆ ಸೇರಿದ್ದು, ಕೊರೊನಾ ಹರಡುವ ಸಾಧ್ಯತೆಗೆ ಇಂಬು ನೀಡಿದ್ದಾರೆ.

  ಕೇರಳ ಬಿಗ್ ಬಾಸ್ ಸ್ಪರ್ಧಿ ರಜಿತ್ ಕುಮಾರ್ ಕೊಚ್ಚಿ ಏರ್‌ಪೋರ್ಟ್‌ ಗೆ ಬಂದಾಗ ಆತನನ್ನು ಸ್ವಾಗತಿಸಲು ನೋಡಲು ನೂರಾರು ಮಂದಿ ವಿಮಾನ ನಿಲ್ದಾಣದಲ್ಲಿ ಒಟ್ಟಾಗಿದ್ದರು. ಕೇರಳ ಸರ್ಕಾರವು ಜನ ಒಟ್ಟುಗೂಡುವುದನ್ನು ನಿಷೇಧಿಸಿದ್ದರೂ ಸಹ ಇಷ್ಟು ಮಂದಿ ಒಟ್ಟಾಗಿದ್ದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

  79 ಮಂದಿ ಮೇಲೆ ಪ್ರಕರಣ, ಮೂವರ ಬಂಧನ

  79 ಮಂದಿ ಮೇಲೆ ಪ್ರಕರಣ, ಮೂವರ ಬಂಧನ

  ಈವರೆಗೆ ಒಟ್ಟು 79 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದು, ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಬಿಗ್ ಬಾಸ್ ಸ್ಪರ್ಧಿ ರಜಿತ್ ಕುಮಾರ್ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

  ಎಲ್ಲರನ್ನೂ ಬಂಧಿಸಲಾಗುವುದು: ಜಿಲ್ಲಾಧಿಕಾರಿ

  ಎಲ್ಲರನ್ನೂ ಬಂಧಿಸಲಾಗುವುದು: ಜಿಲ್ಲಾಧಿಕಾರಿ

  ಕೊಚ್ಚಿ ಜಿಲ್ಲಾಧಿಕಾರಿ ಎಸ್.ಸುಹಾಸ್ ಸಹ ಈ ಬಗ್ಗೆ ಫೇಸ್‌ಬುಕ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಡೀಯ ವಿಶ್ವವೇ ತಲ್ಲಣಿಸುತ್ತಿರುವ ಈ ಹೊತ್ತಿನಲ್ಲಿ ನಮ್ಮ ಸುತ್ತ-ಮುತ್ತ ಇಂಥಹಾ ಘಟನೆ ನಡೆದಿರುವುದು ನಾಚಿಕೆಗೇಡು. 79 ಪ್ರಕರಣ ಮಂದಿಯ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ಎಲ್ಲರನ್ನೂ ಬಂಧಿಸಲಾಗುವುದು ಎಂದಿದ್ದಾರೆ.

  ಸ್ಪರ್ಧಿಯ ಕಣ್ಣಿಗೆ ಖಾರ ಹಾಕಿದ್ದ ರಜಿತ್ ಕುಮಾರ್

  ಸ್ಪರ್ಧಿಯ ಕಣ್ಣಿಗೆ ಖಾರ ಹಾಕಿದ್ದ ರಜಿತ್ ಕುಮಾರ್

  ರಜಿತ್ ಕುಮಾರ್ ಜೀವಶಾಸ್ತ್ರದ ಉಪನ್ಯಾಸಕ ಆಗಿದ್ದು, ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಖ್ಯಾತರಾಗಿದ್ದರು. ಬಿಗ್‌ಬಾಸ್ 2 ನ ಸ್ಪರ್ಧಿ ಆಗಿದ್ದ ಅವರು, ತಮ್ಮ ಸಹ ಸ್ಪರ್ಧಿಯೊಬ್ಬರ ಕಣ್ಣಿಗೆ ಖಾರ ಹಾಕಿದ್ದಾಕಿ ಅವರನ್ನು ಬಿಗ್‌ ಬಾಸ್ ಸ್ಪರ್ಧೆಯಿಂದ ಹೊರಕ್ಕೆ ಹಾಕಲಾಗಿತ್ತು.

  English summary
  Bigg Boss Malayalam contestant Rajit Kumar arrested under unlawful assembly in Kochi Airport amid of Coronavirus scare.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X