For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ಪ್ರೀತಿ ಕಂಡು ಮೂಕವಿಸ್ಮಿತರಾದ ರಾಧಿಕಾ ಪಂಡಿತ್

  |

  ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಸೀಮಂತ ಶಾಸ್ತ್ರ ಮೊನ್ನೆಯಷ್ಟೇ ತಾಜ್ ವೆಸ್ಟ್ ಎಂಡ್ ನಲ್ಲಿ ಅದ್ಧೂರಿಯಾಗಿ ನಡೆಯಿತು. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟಿ ರಾಧಿಕಾ ಪಂಡಿತ್ ಇದ್ದಾರೆ.

  ಇನ್ನೂ 'ಕೆ.ಜಿ.ಎಫ್' ಚಿತ್ರದ ಬಿಡುಗಡೆಗಾಗಿ ರಾಕಿಂಗ್ ಸ್ಟಾರ್ ಯಶ್ ಕೂಡ ಕಾಯುತ್ತಿದ್ದಾರೆ. ಹೀಗಿರುವಾಗಲೇ, ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಗೆ ಅಭಿಮಾನಿಗಳು ಅಚ್ಚರಿಯ ಉಡುಗೊರೆ ನೀಡಿದ್ದಾರೆ.

  ಯಶ್-ರಾಧಿಕಾ ಪಂಡಿತ್ ಒಟ್ಟಿಗೆ ಇರುವ ಚಿತ್ರವನ್ನ ಅಭಿಮಾನಿಗಳು ತಮ್ಮ ಎದೆ ಮೇಲೆ ಟಾಟ್ಯೂ ಬಿಡಿಸಿಕೊಂಡಿದ್ದಾರೆ. ಇನ್ನೂ ಮತ್ತೋರ್ವ ಅಭಿಮಾನಿ ''ಪ್ರಿನ್ಸೆಸ್ ರಾಧಿಕಾ'' ಅಂತ ಬಲಗೈ ಮೇಲೆ ಟಾಟ್ಯೂ ಹಾಕಿಸಿಕೊಂಡಿದ್ದಾರೆ.

  ಲಕ್ಕಿ ಸ್ಥಳದಲ್ಲಿ ರಾಧಿಕಾ ಪಂಡಿತ್ ಸೀಮಂತ: ಅಂಬಿ, ಪುನೀತ್ ಭಾಗಿ

  ಇದನ್ನೆಲ್ಲ ನೋಡಿದ್ಮೇಲೆ ನಟಿ ರಾಧಿಕಾ ಪಂಡಿತ್ ಹೃದಯ ತುಂಬಿ ಬಂದಿದೆ. ''ನಿಮ್ಮ ಪ್ರೀತಿ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದೆ. ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಅಷ್ಟೇ ನಮಗೆ ಅವಶ್ಯಕ'' ಎಂದು ನಟಿ ರಾಧಿಕಾ ಪಂಡಿತ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ರಾಧಿಕಾಗೆ ಯಶ್ ಜೊತೆ ಇಂತಹದೊಂದು ಸಿನಿಮಾ ಮಾಡುವ ಆಸೆ ಇದೆಯಂತೆ

  ಹಲವು ಅಭಿಮಾನಿಗಳು ಈಗಾಗಲೇ ತಮ್ಮ ನೆಚ್ಚಿನ ತಾರೆಯರ ಚಿತ್ರಗಳನ್ನ ಹಾಗೂ ಹೆಸರುಗಳನ್ನು ಟಾಟ್ಯೂ ಹಾಕಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಾರೋ, ಇಲ್ವೋ.. ಆದ್ರೆ, ಫೇವರಿಟ್ ಸ್ಟಾರ್ ಗಳ ಬರ್ತಡೆಯನ್ನ ಮಾತ್ರ ಫ್ಯಾನ್ಸ್ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ತಾರೆ. ಅಭಿಮಾನ ಮೆರೆಯುವುದು ಅಂದ್ರೆ ಇದೇ ಅಲ್ವೇ.!

  English summary
  Fans get a tattoo for Radhika Pandit and Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X