»   » ಇದೇ ಕಾರಣಕ್ಕೆ ನೋಡಿ 'ತೂಗುದೀಪ ಮನೆತನ'ಕ್ಕೆ ಇಷ್ಟೊಂದು ಗೌರವ ಇರುವುದು!

ಇದೇ ಕಾರಣಕ್ಕೆ ನೋಡಿ 'ತೂಗುದೀಪ ಮನೆತನ'ಕ್ಕೆ ಇಷ್ಟೊಂದು ಗೌರವ ಇರುವುದು!

Posted By:
Subscribe to Filmibeat Kannada

ತೂಗುದೀಪ ಕುಟುಂಬ ಅಂದರೆ ಕನ್ನಡಿಗರಿಗೆ ಅಗಾಧ ಪ್ರೀತಿ. ಇನ್ನೂ ದರ್ಶನ್ ಅಭಿಮಾನಿಗಳು ಸಹ ಈ ಕುಟುಂಬದ ಗೌರವವನ್ನು ಉಳಿಸಿಕೊಂಡು ಬಂದಿದ್ದಾರೆ. ಈಗ ಮತ್ತೆ ಅಭಿಮಾನಿಗಳು ಮಾಡುತ್ತಿರುವ ಕೆಲಸದಿಂದ ದರ್ಶನ್ ಫ್ಯಾಮಿಲಿ ಹೆಮ್ಮೆ ಪಡುವಂತಾಗಿದೆ.

ದರ್ಶನ್ ಸಹೋದರ ದಿನಕರ್ ತೂಗುದೀಪ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸ್ನೇಹಿತರ ಜೊತೆ ಕೇಕ್ ಕಟ್ ಮಾಡಿ ಸರಳವಾಗಿ ದಿನಕರ್ ಬರ್ತಡೇ ಸೆಲೆಬ್ರೇಷನ್ ಮಾಡಿದ್ದಾರೆ. ಆದರೆ ಇತ್ತ ಅಭಿಮಾನಿಗಳು ದಿನಕರ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ಮುಂದಾಗಿದ್ದಾರೆ.

ದರ್ಶನ್ ಮತ್ತು ದಿನಕರ್ ಅವರ ಅಭಿಮಾನಿಗಳು ಈಗ 'ದಿನಕರೋತ್ಸವ' ಕಾರ್ಯಕ್ರಮ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲು ನಿರ್ಧಾರ ಮಾಡಿದ್ದಾರೆ. ಮುಂದೆ ಓದಿ..

'ದಿನಕರೋತ್ಸವ'

ದರ್ಶನ್ ಸಹೋದರ ನಿರ್ದೇಶಕ ದಿನಕರ್ ಅವರ ಈ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು 'ದಿನಕರೋತ್ಸವ' ಹೆಸರಿನಲ್ಲಿ ವಿಶೇಷವಾಗಿ ಆಚರಣೆ ಮಾಡಲು ನಿರ್ಧರಿಸಿದ್ದಾರೆ.

ಅನೇಕ ಜಿಲ್ಲೆಗಳಲ್ಲಿ ಆಚರಣೆ

'ದಿನಕರೋತ್ಸವ' ಕಾರ್ಯಕ್ರಮ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಡೆಯಲಿದೆ. ಪ್ರಮುಖವಾಗಿ ಶಿವಮೊಗ್ಗ, ಮೈಸೂರು, ಹಾಸನ, ಮಂಡ್ಯ, ದಾವಣಗೆರೆ, ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮವನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.

ಈ ಭಾನುವಾರ

ದಿನಕರ್ ಅವರ ಹುಟ್ಟುಹಬ್ಬ ಇಂದು ಇದ್ದು, ಅದರ ವಿಶೇಷವಾಗಿ ಈ ಭಾನುವಾರ ರಾಜ್ಯದ ಅನೇಕ ಜಿಲ್ಲೆಗಳಲ್ಲಿ 'ದಿನಕರೋತ್ಸವ' ಕಾರ್ಯಕ್ರಮ ನಡೆಯಲಿದೆ.

ಅನಾಥಾಶ್ರಮದಲ್ಲಿ ಆಚರಣೆ

ಗುಬ್ಬಿ 'ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಶನ್' ಕಡೆಯಿಂದ ಅನಾಥಾಶ್ರಮದ ಮಕ್ಕಳಿಗೆ ಅನ್ನದಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಔಷಧಿ ವಿತರಣೆ

ಕುಣಿಗಲ್ ನ ಅಭಿಮಾನಿಗಳು 'ದಿನಕರೋತ್ಸವ' ಕಾರ್ಯಕ್ರಮದಲ್ಲಿ ಅಗತ್ಯ ಇರುವವರಿಗೆ ಉಚಿತವಾಗಿ ಔಷಧಿಗಳನ್ನು ವಿತರಣೆ ಮಾಡಲಿದೆ.

ಕಿರುತೆರೆಯಲ್ಲಿ ಪ್ರಸಾರವಾಗಲಿದೆ 'ತಾರಕೋತ್ಸವ' ಸಂಭ್ರಮ

ಆಸ್ಪತ್ರೆಯಲ್ಲಿ ಆಚರಣೆ

ದೊಡ್ಡಬಳ್ಳಾಪುರದ ಅಭಿಮಾನಿಗಳು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಚುವ ನಿರ್ಧಾರ ಮಾಡಿದ್ದಾರೆ.

ಗೆಳೆಯ ವಿನೋದ್ ಪ್ರಭಾಕರ್ ಬೆಂಬಲಕ್ಕೆ ನಿಂತ 'ದಾಸ' ದರ್ಶನ್

ಗಿಡ ನೆಡುವ ಕಾರ್ಯಕ್ರಮ

ಮೈಸೂರಿನಲ್ಲಿ ಡಿ ಬಾಸ್ ಅಭಿಮಾನಿಗಳು ಗಿಡ ನೆಡುವ ಮತ್ತು ಉದ್ಯಾನವನ ಸ್ವಚ್ಛತೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

'ಭರ್ಜರಿ' ಚಿತ್ರಕ್ಕೆ ಡಿಫ್ರೆಂಟ್ ಆಗಿ ವಿಶ್ ಮಾಡಿದ 'ಡಿ ಬಾಸ್' ಭಕ್ತರು

ದರ್ಶನ್ ಕುಟುಂಬ ಸಂತಸ

ಕುಡಿಯುವ ನೀರು ಶುದ್ಧೀಕರಣ ಯಂತ್ರ ಮತ್ತು ಕಂಪ್ಯೂಟರ್ ಟೇಬಲ್ ವಿತರಣೆ ಕಾರ್ಯಕ್ರಮವನ್ನು ಗೌರಿಕೊಪ್ಪಲಿನ ದಿನಕರ್ ಅಭಿಮಾನಿಗಳು ನಡೆಸಿಕೊಡಲಿದ್ದಾರೆ. ಇದೇ ರೀತಿ ರಾಜ್ಯದ ಅನೇಕ ಕಡೆ ಅಭಿಮಾನಿಗಳು ಮಾಡುತ್ತಿರುವ ಒಳ್ಳೆಯ ಕೆಲಸಗಳು ದರ್ಶನ್ ಕುಟುಂಬಕ್ಕೆ ಸಂತಸ ತಂದಿದೆ.

English summary
Fans have decided to celebrate Dinakar Toogudeepa birthday as 'Dinakarothsava'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada