For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಹೆಸರಿನಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ ಅಭಿಮಾನಿಗಳು

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರ ಅಭಿಮಾನಿ ಬಳಗಹೊಂದಿರುವ ಸ್ಟಾರ್ ನಟ ಎನ್ನುವುದು ಗೊತ್ತಿರುವ ವಿಚಾರ. ನೆಚ್ಚಿನ ನಟನನ್ನು ದೇವರಂತೆ ಪೂಜಿಸಿ, ಆರಾಧಿಸುವ ಸಾವಿರಾರು ಅಭಿಮಾನಿಗಳಿದ್ದಾರೆ. ದರ್ಶನ್ ಕೂಡ ತಮ್ಮ ಅಭಿಮಾನಿಗಳನ್ನು ಅಷ್ಟೆ ಪ್ರೀತಿಸುತ್ತಾರೆ.

  ಅಭಿಮಾನಿಗಳು ನೆಚ್ಚಿನ ಮೇಲಿನ ಪ್ರೀತಿ, ಅಭಿಮಾನವನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಇತ್ತೀಚಿಗೆ ಮೈ ಮೇಲೆ ಹಚ್ಚೆಹಾಕಿಸಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸುವುದು ಹೆಚ್ಚಾಗಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿರುವ ಡಿ ಬಾಸ್ ಅಭಿಮಾನಿಗಳು ಶಿವಲಿಂಗವನ್ನೇ ಪ್ರತಿಷ್ಠಾಪನೆ ಮಾಡಿದ್ದಾರೆ.

  'ರಾಬರ್ಟ್' 100 ಮಿಲಿಯನ್: ಅರ್ಜುನ್ ಜನ್ಯ ಹೆಸರಿಗೆ ಮತ್ತೊಂದು ದಾಖಲೆ'ರಾಬರ್ಟ್' 100 ಮಿಲಿಯನ್: ಅರ್ಜುನ್ ಜನ್ಯ ಹೆಸರಿಗೆ ಮತ್ತೊಂದು ದಾಖಲೆ

  ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಿನಲ್ಲಿ ಶಿವಲಿಂಗ ಸ್ಥಾಪಿಸುವ ಮೂಲಕ ಡಿ ಬಾಸ್ ಮೇಲಿನ ಅಭಿಮಾನ ಮೆರೆದಿದ್ದಾರೆ. ಅಭಿಮಾನಿಗಳು ಶಿವಲಿಂಗಕ್ಕೆ ಪೂಜೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಡಿ ಬಾಸ್ ಫ್ಯಾನ್ಸ್ ವಿಡಿಯೋ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಇತ್ತೀಚಿಗೆ ನಟ ಸೋನು ಸೂದ್ ಮಾನವೀಯ ಕೆಲಸಕ್ಕೆ ಮನಸೋತ ಅಭಿಮಾನಿಗಳು ಸೋನು ಸೂದ್ ದೇವಸ್ಥಾನ ನಿರ್ಮಾಣ ಮಾಡಿದ್ದರು. ಪೂಜೆ ಮಾಡುವ ಮೂಲಕ ದೇವರೆಂದು ಆರಾಧಿಸುತ್ತಿದ್ದಾರೆ. ಇದೀಗ ಅಭಿಮಾನಿಗಳು ದರ್ಶನ್ ಹೆಸರಿನಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

  KGF 2 ರಿಲೀಸ್ ಡೇಟ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ Prashanth Neel | Filmibeat Kannada

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ದರ್ಶನ್ ರಾಬರ್ಟ್ ಸಿನಿಮಾ ಬಳಿಕ ಯಾವ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಇನ್ನು ಬಹಿರಂಗ ಪಡಿಸಿಲ್ಲ. ಹಾಗಾಗಿ ದರ್ಶನ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

  English summary
  Fans Installed Shiva Linga at Kotilingeshwara Temple in the name of Actor Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X