»   » ನಟಿ ಹರಿಪ್ರಿಯಾ ಜೊತೆ ಅಪರಿಚಿತ ಯುವಕನ ಅಸಭ್ಯ ವರ್ತನೆ

ನಟಿ ಹರಿಪ್ರಿಯಾ ಜೊತೆ ಅಪರಿಚಿತ ಯುವಕನ ಅಸಭ್ಯ ವರ್ತನೆ

Posted By:
Subscribe to Filmibeat Kannada

ನಟಿ ಹರಿಪ್ರಿಯಾ ಅವರ ಜೊತೆ ಅಪರಿಚಿತ ಯುವಕನೊಬ್ಬ ಅಸಭ್ಯ ವರ್ತನೆ ಮಾಡಿದ್ದಕ್ಕಾಗಿ ಹರಿಪ್ರಿಯಾ ಅವರ ಅಣ್ಣ ಸಾರ್ವಜನಿಕ ಸ್ಥಳದಲ್ಲಿಯೇ ಚೆನ್ನಾಗಿ ಗೂಸಾ ನೀಡಿದ್ದಾರೆ. ಈ ಘಟನೆ ನಡೆದಿದ್ದು ಬೆಂಗಳೂರಿನ ರಾಜಾಜಿನಗರದ ಇಸ್ಕಾನ್ ದೇವಸ್ಥಾನದ ಹತ್ತಿರ.

ಹೌದು 'ಉಗ್ರಂ' ಬೆಡಗಿ ನಟಿ ಹರಿಪ್ರಿಯಾ ಅವರು ತಮ್ಮ ಸಹೋದರ ಕೀರ್ತಿ ಅವರ ಜೊತೆ ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಪರಿಚಿತ ಯುವಕನೊಬ್ಬ ಹರಿಪ್ರಿಯಾ ಅವರೊಂದಿಗೆ ಫೊಟೋ ತೆಗೆಸಿಕೊಳ್ಳಲು ಬಂದು ಅಸಭ್ಯವಾಗಿ ವರ್ತಿಸಿದ ಘಟನೆ ಜನವರಿ 20 ರಂದು ನಡೆದಿದೆ.[ಈ ವಾರ 2 ಸಿನಿಮಾ ರಿಲೀಸ್, ನಿಮ್ಮ ಆಯ್ಕೆ ಯಾವುದು?]

Fans misbehaving with Kannada Actress Haripriya

ಇಸ್ಕಾನ್ ದೇವಸ್ಥಾನದ ಎಫ್.ಆರ್.ಡಿ.ಸಿ ಕ್ಯಾಂಟೀನ್ ಸಮೀಪ ಯುವಕನೊಬ್ಬ ಆಗಮಿಸಿ ನಟಿ ಹರಿಪ್ರಿಯಾ ಅವರ ಜೊತೆ ಫೊಟೋ ತೆಗೆಸಿಕೊಳ್ಳುತ್ತೆನೆಂದು ಹೇಳಿ ಅಸಭ್ಯವಾಗಿ ವರ್ತಿಸಿದ್ದಾನೆ.[ಸಿಗರೇಟ್ ಸೇದಿ ಆರೋಗ್ಯ ಕೆಡಿಸಿಕೊಂಡ 'ನೀರ್ ದೋಸೆ' ಬೆಡಗಿ]

ಕೂಡಲೇ ಹರಿಪ್ರಿಯಾ ಅವರ ಅಣ್ಣಾ ಕೀರ್ತಿ ಅವರು ಯುವಕನನ್ನು ಚೆನ್ನಾಗಿ ಥಳಿಸಿದ್ದಾರೆ. ಇದನ್ನು ಗಮನಿಸಿದ ಇಸ್ಕಾನ್ ಭದ್ರತಾ ಸಿಬ್ಬಂದಿ ಅಪರಿಚಿತ ಯುವಕನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಹರಿಪ್ರಿಯಾ ಅವರು ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ರಿಕ್ಕಿ' ಇಡೀ ಕರ್ನಾಟಕದಾದ್ಯಂತ ನಾಳೆ (ಜನವರಿ 22) ಭರ್ಜರಿಯಾಗಿ ತೆರೆ ಕಾಣುತ್ತಿದೆ.

English summary
Fans misbehaving with Kannada Actress Haripriya in Iskcon Temple Bangalore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada