ಸೆಂಚುರಿ ಬಾರಿಸಿದ ಸೆಂಚುರಿ ಸ್ಟಾರ್ : ಭಾನುವಾರ ಇಡೀ ದಿನ ಅಭಿಮಾನಿಗಳ ಹಬ್ಬ
ಸೆಂಚುರಿ ಸ್ಟಾರ್ ಶಿವಣ್ಣ ಮತ್ತೆ ಸೆಂಚುರಿ ಬಾರಿಸಿದ್ದಾರೆ. ಶಿವರಾಜ್ ಕುಮಾರ್ ಅವರ 'ಟಗರು' ಸಿನಿಮಾ ಫೆಬ್ರವರಿ 23ಕ್ಕೆ ಬಿಡುಗಡೆಯಾಗಿದ್ದು, ಜೂನ್ 2 ರಂದು 'ಈ ಚಿತ್ರ ನೂರು ದಿನಗಳನ್ನು ಪೂರೈಸಲಿದೆ.
ನೂರು ದಿನ ಕಂಪ್ಲೀಟ್ ಮಾಡಿದ ಖುಷಿಯಲ್ಲಿರುವ ಶಿವಣ್ಣನ ಫ್ಯಾನ್ಸ್ ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಜೂನ್ 3 ರಂದು ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಸೇನಾ ಸಮಿತಿ ಹಾಗೂ ಗಂಡುಗಲಿ ಡಾ.ಶಿವರಾಜ್ ಕುಮಾರ್ ಅಭಿಮಾನಿ ಸಂಘದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ ಜೂನ್ 3 ರಂದು ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳಿಂದ 'ಟಗರು' ಯಶಸ್ಸಿನ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಅದೇ ದಿನ 4 ಗಂಟೆಗೆ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದಲ್ಲಿ ಶಿವಣ್ಣನಿಗೆ ಸನ್ಮಾನ ಮಾಡಿ ಜನರಿಗೆ ಸಿಹಿ ಹಂಚಲಾಗುತ್ತದೆ. ಸಂಜೆ 6 ಗಂಟೆಗೆ ಜಿಟಿ ಮಾಲ್ ನಲ್ಲಿಯೂ ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ ಮೈಸೂರಿನ ಶಾಂತಲ ಚಿತ್ರಮಂದಿರದಲ್ಲಿ ಅಲ್ಲಿರುವ ಅಭಿಮಾನಿಗಳು ಪಟಾಕಿ ಸಿಡಿಸಿ, ಶಿವಣ್ಣನ ಕಟ್ ಔಟ್ ಗೆ ಹಾರ ಹಾಕಿ ಸಂಭ್ರಮಿಸಲಿದ್ದಾರೆ.

ಅಂದಹಾಗೆ, 'ಟಗರು' ಈ ವರ್ಷ ನೂರು ದಿನ ಪೂರೈಸಿದ ಕನ್ನಡದ ಮೊದಲ ಸಿನಿಮಾವಾಗಿದೆ.ಸೂರಿ ತಮ್ಮ ವಿಭಿನ್ನ ಸ್ಕ್ರೀನ್ ಪ್ಲೇ ಮೂಲಕ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಶ್ರೀ ಕಾಂತ್ ಬಂಡವಾಳ ಹಾಕಿದ್ದರು. ಧನಂಜಯ್, ಭಾವನ, ಮಾನ್ವಿತಾ ಹರೀಶ್, ವಸಿಷ್ಟ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











