For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರಣಿತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ

  |

  ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಸೈಲೆಂಟ್ ಆಗಿ ಹಸೆಮಣೆ ಏರಿರುವ ಸುದ್ದಿ ಅಭಿಮಾನಿಗಳ ಅಚ್ಚರಿ ಮೂಡಿಸಿದೆ. ಕಳೆದ ಕೆಲವು ದಿನಗಳ ಹಿಂದೆ ಪ್ರಣಿತಾ ಮದುವೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿ, 'ಮದುವೆ ಆಗಿಲ್ಲ. ಒಂದೊಮ್ಮೆ ಆದರೆ ನಿಮಗೆ ತಿಳಿಸದೇ ಇರುತ್ತೇನಾ?' ಎಂದಿದ್ದರು.

  ಆದರೆ ಈ ಹೇಳಿಕೆ ಬೆನ್ನಲ್ಲೇ ಪ್ರಣಿತಾ ಗುಟ್ಟಾಗಿ ಮದುವೆ ಆಗಿದ್ದಾರೆ. ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋಗಳು ಹರಿದಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದ ಮೂಲಕ ಪ್ರಣಿತಾ ಪ್ರತಿಕ್ರಿಯೆ ನೀಡಿ ಸೈಲೆಂಟ್ ಆಗಿ ಮದುವೆ ಆದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  ಗುಟ್ಟಿನ ಮದುವೆ ಬಗ್ಗೆ ನಟಿ ಪ್ರಣಿತಾ ಸ್ಪಷ್ಟನೆ: ಕೊಟ್ಟ ಕಾರಣವೇನು?ಗುಟ್ಟಿನ ಮದುವೆ ಬಗ್ಗೆ ನಟಿ ಪ್ರಣಿತಾ ಸ್ಪಷ್ಟನೆ: ಕೊಟ್ಟ ಕಾರಣವೇನು?

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಣಿತಾಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಅಭಿಮಾನಿಗಳು ಮತ್ರವಲ್ಲದೆ ಚಿತ್ರರಂಗದ ಗಣ್ಯರು ಸಹ ಸಾಮಾಜಿಕ ಜಾಲತಾಣದ ವಿಶ್ ಮಾಡುತ್ತಿದ್ದಾರೆ. ನಟಿ ರಮ್ಯಾ ಕೂಡ ಶುಭಾಶಯ ತಿಳಿಸಿದ್ದಾರೆ. ಪ್ರಣಿತಾ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಮೋಹಕ ತಾರೆ ರಮ್ಯಾ ಅಭಿನಂದನೆಗಳು ಪ್ರಣಿತಾ ಎಂದಿದ್ದಾರೆ.

  ರಮ್ಯಾ ವಿಶ್ ಮಾಡುತ್ತಿದ್ದಂತೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆ ಹರಿಸುತ್ತಿದ್ದಾರೆ. ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕಾಮೆಂಟ್ ಇದು ಅವರ ಜೀವನ, ಅವರಿಗೆ ಬಿಟ್ಟಿದ್ದು ಎಂದು ಹೇಳುತ್ತಿದ್ದಾರೆ.

  ರಮ್ಯಾ ಮದುವೆ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಮದುವೆ ಯಾವಾಗ ಎಂದು ಅಭಿಮಾನಿಗಳು ಸಹ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಆದರೆ ಈ ಬಗ್ಗೆ ರಮ್ಯಾ ಮಾತ್ರ ಯಾವಾಗಲು ಮೌನಕ್ಕೆ ಶರಣಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ರಮ್ಯಾ ಕನ್ನಡ ಕಲಾವಿದರ ಪೋಸ್ಟ್ ಗಳಿಗೆ ಕಾಮೆಂಟ್ ಮಾಡುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿರುತ್ತಾರೆ.

  Recommended Video

  ದುಡುಕಿ ಏನನ್ನೂ ಮಾಡ್ಬಾರ್ದು ಅನ್ನೋದು ಗೊತ್ತಾಯ್ತು ಎಂದ ಕನ್ನಡತಿ ಖ್ಯಾತಿಯ ರಂಜನಿ | Filmibeat Kannada

  ಇನ್ನು ನಟಿ ಪ್ರಣಿತಾ ಭಾನುವಾರ ನಿತಿನ್ ರಾಜ್ ಎನ್ನುವವರ ಜೊತೆ ಹಸೆಮಣೆ ಏರಿದ್ದಾರೆ. ಕನಕಪುರ ರಸ್ತೆಯಲ್ಲಿರೋ ರೆಸಾರ್ಟ್ ಒಂದರಲ್ಲಿ ಪ್ರಣಿತಾ ಮತ್ತು ನಿತಿನ್ ಕುಟುಂಬದ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಣಿತಾ, 'ಕೋವಿಡ್ ನಿಯಮಾವಳಿಗಳು ಇರುವ ಕಾರಣ ಮದುವೆ ನಡೆಯುತ್ತದೆಯೋ ಇಲ್ಲವೊ ಎಂಬ ಬಗ್ಗೆ ನಮಗೆ ಸಹ ಗ್ಯಾರೆಂಟಿ ಇರಲಿಲ್ಲ. ನಮ್ಮ ಮದುವೆ ದಿನಾಂಕ ಘೋಷಿಸಿ ಮತ್ತೆ ಮುಂದೂಡುವುದು ಇಷ್ಟವಿಲ್ಲದ ಕಾರಣ ನಾವು ಹಠಾತ್ ನಿರ್ಣಯ ತೆಗೆದುಕೊಂಡೆವು ಎಂದಿದ್ದಾರೆ.

  English summary
  Ramya Wishes to Pranitha Subhash wedding. Fans question to Ramya about her wedding.
  Tuesday, June 1, 2021, 9:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X