»   » 'ರಾಜ ರತ್ನೋತ್ಸವ'ಕ್ಕೆ ಪುನೀತ್ ಅಭಿಮಾನಿಗಳ ಕಾತುರ

'ರಾಜ ರತ್ನೋತ್ಸವ'ಕ್ಕೆ ಪುನೀತ್ ಅಭಿಮಾನಿಗಳ ಕಾತುರ

Posted By:
Subscribe to Filmibeat Kannada
'ರಾಜ ರತ್ನೋತ್ಸವ'ಕ್ಕೆ ಪುನೀತ್ ಅಭಿಮಾನಿಗಳ ಕಾತುರ | Filmibeat Kannada

ಸಿನಿಮಾ ಸ್ಟಾರ್ ಗಳ ಹುಟ್ಟುಹಬ್ಬವನ್ನ ಆಚರಣೆ ಮಾಡುವ ಪ್ರತೀತಿ ಇನ್ನೂ ಕೂಡ ಕನ್ನಡ ಸಿನಿಮಾರಂಗದಲ್ಲಿ ಉಳಿಸಿಕೊಂಡು ಬಂದಿದ್ದಾರೆ. ಸ್ಟಾರ್ ಕಲಾವಿದರ ಬರ್ತಡೇ ಮುನ್ನವೇ ಸಾಕಷ್ಟು ತಯಾರಿ ಮಾಡಿಕೊಳ್ಳುವುದು ಅವರ ಹೆಸರಿನಲ್ಲಿ ಕಾರ್ಯಕ್ರಮಗಳನ್ನ ಮಾಡುವುದು ಇವೆಲ್ಲವೂ ಸ್ಯಾಂಡಲ್ ವುಡ್ ನಲ್ಲಿ ಚಾಲ್ತಿಯಲ್ಲಿದೆ.

ಕಳೆದ ಎರಡು ತಿಂಗಳಲ್ಲಿ ಚಂದನವನದ ಬಿಗ್ ಸ್ಟಾರ್ ಗಳ ಹುಟ್ಟುಹಬ್ಬವನ್ನ ವಿಜೃಂಭಣೆಯಿಂದ ಆಚರಣೆ ಮಾಡಿದ್ದಾಯ್ತು. ಅಭಿಮಾನ ಎಂದರೆ ಇದೇನಾ ಎನ್ನುವ ಪ್ರಶ್ನೆ ಮೂಡುವಷ್ಟರ ಮಟ್ಟಿಗೆ ಫ್ಯಾನ್ಸ್ ತಮ್ಮ ನೆಚ್ಚಿನ ಕಲಾವಿದನ ಹುಟ್ಟುಹಬ್ಬವನ್ನ ಸೆಲಬ್ರೆಟ್ ಮಾಡಿದ್ರು.

ಶಿವಣ್ಣನ 'ಟಗರು' ನೋಡಿ ಕಿಚ್ಚ ಕೊಟ್ಟ ರಿವ್ಯೂ

ಈಗ ಗಾಂಧಿನಗರದ ಅಂಗಳದಲ್ಲಿ ಪವರ್ ಸ್ಟಾರ್ ಎಂದು ಅಭಿಮಾನಿಗಳ ಬಾಯಲ್ಲಿ ಜೈಕಾರ ಹಾಕಿಸಿಕೊಂಡಿರುವ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಸಿದ್ದತೆಗಳು ನಡೆಯುತ್ತಿವೆ. ರಾಜ ರತ್ನೋತ್ಸವ ಹೆಸರಿನಲ್ಲಿ ಹುಟ್ಟುಹಬ್ಬಕ್ಕೆ ಸಿದ್ದತೆಗಳನ್ನ ಮಾಡಿಕೊಳ್ಳಲಾಗ್ತಿದೆ. ಹೇಗಿರುತ್ತೆ ಹುಟ್ಟುಹಬ್ಬ ಏನೆಲ್ಲಾ ಸ್ಪೆಷಾಲಿಟಿ ಇದೆ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ

ರಾಜರತ್ನನ ಹುಟ್ಟುಹಬ್ಬಕ್ಕೆ ತಯಾರಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ದಿನಗಳನ್ನ ಎಣಿಸುತ್ತಿದ್ದಾರೆ. ಈ ಬಾರಿ ರಾಜ ರತ್ನೋತ್ಸವ ಹೆಸರಿನಲ್ಲಿ ಹುಟ್ಟುಹಬ್ಬವನ್ನ ಆಚರಣೆ ಮಾಡಲಿದ್ದಾರೆ.

ಅಭಿಮಾನಿಗಳಿಂದ ಪ್ರಚಾರ

ಮಾರ್ಚ್ 17 ರಂದು ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳಲಿದ್ದಾರೆ. ಅಭಿಮಾನಿಗಳೆಲ್ಲರು ಹುಟ್ಟುಹಬ್ಬವನ್ನ ಮತ್ತಷ್ಟು ವಿಶೇಷ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

ರಾಜ ರತ್ನೋತ್ಸವ ಲೋಗೋ

ರಾಜ ರತ್ನೋತ್ಸವದ ಹೆಸರಿನಲ್ಲಿ ಲೋಗೋ ಡಿಸೈನ್ ಮಾಡಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತಮ್ಮ ಫೋಟೋಗಳಿಗೆ ರಾಜ ರತ್ನೋತ್ಸವ ಲೋಗೋ ಗಳನ್ನ ಹಾಕಿಕೊಂಡು ಫೇಸ್ ಬುಕ್ ನಲ್ಲಿ ಬರ್ತಡೇಯನ್ನ ಮತ್ತಷ್ಟು ಸ್ಪೆಷಲ್ ಮಾಡುತ್ತಿದ್ದಾರೆ.

ಹುಟ್ಟುಹಬ್ಬಕ್ಕೆ ವಿಡಿಯೋ ರಿಲೀಸ್

ಪ್ರತಿ ವರ್ಷವೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ರಾಜ್ ಡೈನೆಸ್ಟಿ ತಂಡದಿಂದ ವಿಡಿಯೋ ಬಿಡುಗಡೆ ಮಾಡುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಹಾಗೂ ಸ್ಯಾಂಡಲ್ ವುಡ್ ಕಲಾವಿದರಿಂದ ವಿಡಿಯೋ ಬೈಟ್ ತೆಗೆದುಕೊಂಡು ಹೊಸ ರೀತಿಯಲ್ಲಿ ವಿಡಿಯೋ ಮಾಡಿ ಬಿಡುಗಡೆ ಮಾಡುತ್ತಾರೆ.

ಹೊಸ ಸಿನಿಮಾ ಶೀರ್ಷಿಕೆ ಡಿಸೈನ್ ಬಿಡುಗಡೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಚಿತ್ರದ ಶೀರ್ಷಿಕೆ ಡಿಸೈನ್ ಅನ್ನು ಪುನೀತ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

ಯಶ್ ಕೆ ಜಿ ಎಫ್ ಸಿನಿಮಾ ತಡವಾಗಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ

English summary
Fans start Preparing for Puneet Rajkumar birthday . Fans celebrating puneet birthday name of Rajyothsava. Puneeth Rajkumar will be celebrating his birthday on March 17th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada