»   » ಪುನೀತ್ ರಾಜ್ ಕುಮಾರ್ ನೋಡಲು ಮುಗಿಬಿದ್ದ ಅಭಿಮಾನಿ ವೃಂದ

ಪುನೀತ್ ರಾಜ್ ಕುಮಾರ್ ನೋಡಲು ಮುಗಿಬಿದ್ದ ಅಭಿಮಾನಿ ವೃಂದ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೇನೇ ಹಾಗೆ, ಒಂಥರಾ ಹೈವೋಲ್ಟೇಜ್ ಕರೆಂಟ್ ಇದ್ದ ಹಾಗೆ. ತೆರೆಮೇಲೆ ಪವರ್ ಪಫ್ ಆಕ್ಷನ್ ಮಾಡುವ ಪುನೀತ್ ಕಂಡ್ರೆ ಅನೇಕರಿಗೆ ಅಚ್ಚುಮೆಚ್ಚು.

ಅಪ್ಪು ಎಲ್ಲೇ ಹೋದರೂ, ಬಂದರು ಅವರನ್ನ ನೋಡೋಕಂತಲೇ ಅಭಿಮಾನಿಗಳು ಹಾಜರ್ ಆಗ್ತಾರೆ. ಇತ್ತೀಚೆಗೆ 'ಚಕ್ರವ್ಯೂಹ' ಶೂಟಿಂಗ್ ಸಂದರ್ಭದಲ್ಲೂ ಆಗಿದ್ದು ಇದೇ.

Fans thronging in to see Puneeth Rajkumar during 'Chakravyuha' shooting

ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್ ಅಭಿನಯದ 25ನೇ ಸಿನಿಮಾ 'ಚಕ್ರವ್ಯೂಹ' ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿತ್ತು. ಚಿತ್ರೀಕರಣ ನಡೆಯುತ್ತಿರುವ ವಿಚಾರ ಎಲ್ಲೂ ಬಹಿರಂಗವಾಗಿರಲಿಲ್ಲ.

ಆದ್ರೆ, ಅಪ್ಪು ಅಭಿಮಾನಿಗಳು ತುಂಬಾ ಅಲರ್ಟ್ ನೋಡಿ. ಮೈಸೂರಿನ ಮನೆಯೊಂದರಲ್ಲಿ 'ಚಕ್ರವ್ಯೂಹ' ಶೂಟಿಂಗ್ ನಡೆಯುತ್ತಿದೆ ಅಂತ ಲೀಕ್ ಆಗಿದ್ದೇ ತಡ, ಮೈಸೂರಿನ ಮೂಲೆ ಮೂಲೆಗೂ ಸುದ್ದಿ ಹರಡಿದೆ. ['ಚಕ್ರವ್ಯೂಹ' ಅಡ್ಡದಲ್ಲಿ ಪುನೀತ್ ಜೊತೆ ರಚಿತಾ ರಾಮ್]

ಇದರಿಂದ ಶೂಟಿಂಗ್ ನಡೆಯುತ್ತಿದ್ದ ಮನೆ ಮುಂದೆ ಜನವೋ ಜನ. ಪುನೀತ್ ರನ್ನ ನೋಡಿ ಹ್ಯಾಂಡ್ ಶೇಕ್ ಮಾಡುವುದಕ್ಕೆ ಅಭಿಮಾನಿಗಳು ಮುಗಿಬೀಳ್ತಿದ್ರು. ಅದರ ವಿಡಿಯೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ.

ಮೈಸೂರಿನಲ್ಲಿ ನಡೆದ ಚಕ್ರವ್ಯೂಹ ಶೂಟಿಂಗ್ ಸಂದರ್ಭದಲ್ಲಿ ಅಪ್ಪುರನ್ನು ನೋಡಲು ಅಭಿಮಾನಿಗಳ ಹರಸಾಹಸ ..#kannada #Chakravyuha Puneeth Rajkumar Kannada Cinema Loka Rachita Ram

Posted by Kannada Filmibeat on Monday, October 12, 2015

ಅಭಿಮಾನಿಗಳ ಒತ್ತಾಯದ ಮೇರೆಗೆ ಶೂಟಿಂಗ್ ನಿಂದ ಬ್ರೇಕ್ ತಗೊಂಡ ಅಪ್ಪು, ಕೆಲ ಕಾಲ ಅಭಿಮಾನಿಗಳ ಜೊತೆ ಹರಟಿದರು. ಮರಳಿ 'ಚಕ್ರವ್ಯೂಹ' ಸೆಟ್ ನೊಳಗೆ ತೆರಳಿ, ಚಿತ್ರೀಕರಣದಲ್ಲಿ ತಲ್ಲೀನರಾದರು.

    English summary
    Watch the video of Fans thronging in to see Kannada Actor Puneeth Rajkumar during 'Chakravyuha' shooting in Mysore.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada