»   » ಮನೆ ಮನೆಯಲ್ಲೂ ಕಿಚ್ಚನ 'ಕಿರಿಕ್ ಚಿಕನ್'ನದ್ದೇ ಘಮಲು.!

ಮನೆ ಮನೆಯಲ್ಲೂ ಕಿಚ್ಚನ 'ಕಿರಿಕ್ ಚಿಕನ್'ನದ್ದೇ ಘಮಲು.!

Posted By: Pavithra
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಸುದೀಪ್ ಅಡುಗೆಗೆ ಫ್ಯಾನ್ಸ್ ಫುಲ್ ಫಿದಾ

ಕಿಚ್ಚ ಸುದೀಪ್ ಅಭಿನಯ ಚಕ್ರವರ್ತಿ ಏನೇ ಮಾಡಿದ್ರು ಅದು ಟ್ರೆಂಡ್ ಹುಟ್ಟುಹಾಕ್ತಿದೆ. ಅವರ ಅಭಿಮಾನಿಗಳೇ ಹಾಗೆ, ಕಿಚ್ಚನ ಲೈಫ್ ಸ್ಟೈಲ್ ಅನ್ನ ಪಿನ್ ಟು ಪಿನ್ ಫಾಲೋ ಮಾಡ್ತಾರೆ. ಅಷ್ಟೇ ಅಲ್ಲದೆ ಅವರ ಮಕ್ಕಳಿಂದಲೂ ಅದನ್ನ ಫಾಲೋ ಮಾಡಿಸ್ತಾರೆ. ಅಷ್ಟರ ಮಟ್ಟಿಗೆ ಸುದೀಪ್, ಅಭಿಮಾನಿಗಳ ಮನಸ್ಸಿನಲ್ಲಿ ಆಳವಾಗಿ ಕುಳಿತುಬಿಟ್ಟಿದ್ದಾರೆ.

ಸದ್ಯ, ಕಿಚ್ಚನ ಕಿಚನ್ ಸ್ಟೈಲ್ ಎಲ್ಲಾ ಮಹಿಳಾ ಅಭಿಮಾನಿಗಳ ಮನೆಯಲ್ಲಿ ಟ್ರೆಂಡ್ ಸೆಟ್ ಮಾಡ್ತಿದೆ. ವೀಕ್ ಎಂಡ್ ವಿಶೇಷವಾಗಿ ಬಿಗ್ ಬಾಸ್ ಕಾರ್ಯಕ್ರಮದ ಕಿಚ್ಚನ್ ಟೈಂ ನಲ್ಲಿ ಅತಿಥಿಗಳನ್ನ ಕರೆಸಿ ಅವರಿಗೆ ಒಂದು ಸ್ಪೆಷಲ್ ಆಗಿರುವ ಡಿಷ್ ಅನ್ನ ಹೇಳಿಕೊಡ್ತಾರೆ. ಅದನ್ನ ಈಗ ಅಭಿಮಾನಿಗಳು ತಮ್ಮ ಮನೆಯಲ್ಲಿ ಟ್ರೈ ಮಾಡಿ ಟ್ವಿಟ್ಟರ್ ಮೂಲಕ ಕಿಚ್ಚನಿಗೆ ತಲುಪಿಸುತ್ತಿದ್ದಾರೆ. ಮುಂದೆ ಓದಿ.....

ಕಿರಿಕ್ ಚಿಕನ್ ಸಿಕ್ಕಾಪಟ್ಟೆ ಫೇಮಸ್

ಬಿಗ್ ಬಾಸ್ ಮೊದಲ ವಾರ ಕಿಚ್ಚನ್ ಟೈಂ ನಲ್ಲಿ ಬಂದಿದ್ದು 'ಕಿರಿಕ್ ಪಾರ್ಟಿ' ಖ್ಯಾತಿಯ ನಾಯಕಿ ಸಂಯುಕ್ತ ಹೆಗ್ಡೆ . ಸಂಯುಕ್ತರಿಗೆ, ಸುದೀಪ್ ಕಿರಿಕ್ ಚಿಕ್ಕನ್ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಟ್ಟಿದ್ರು. ಅದನ್ನ ಬರಿ ಟಿವಿಯಲ್ಲಿ ನೋಡೋದಷ್ಟೇ ಅಲ್ಲದೆ ಕಿಚ್ಚನ ರೆಸಿಪಿಯನ್ನ ಕಾಪಿ ಮಾಡಿ ಅಭಿಮಾನಿಗಳು ಬರೆದಿಟ್ಟುಕೊಂಡಿದ್ದಾರೆ.

ಕಿಚನ್ ಟೈಂನಲ್ಲಿ ಎಲ್ಲವೂ ಸ್ಪೆಷಲ್

ಅಭಿನಯ ಚಕ್ರವರ್ತಿ ಕೇವಲ ಅಡುಗೆ ಮಾಡೋದನ್ನ ಹೇಳಿಕೊಡೋದಷ್ಟೇ ಅಲ್ಲದೆ ಅದರ ಜೊತೆಯಲ್ಲಿ ತೆರೆಗೆ ಬರೋದಕ್ಕೆ ರೆಡಿಯಾಗಿರುವ ಸಿನಿಮಾಗಳ ಪ್ರಮೋಷನ್ ಕೂಡ ಮಾಡ್ತಿದ್ದಾರೆ. ಬರುವ ಗೆಸ್ಟ್ ಗಳ ಜೊತೆ ಸಿನಿಮಾ ಬಗ್ಗೆ ಮಾತು ಹಾಗೂ ನಾಲಿಗೆ ರುಚಿಯನ್ನು ಮಾಡಿಸ್ತಾರೆ. ಇನ್ನು ಕಿಚ್ಚ ಮಾಡಿದ ನಾನ್ ವೆಜ್ ಅಡುಗೆಯನ್ನ ವೆಜ್ ಸ್ಟೈಲ್ ನಲ್ಲಿ ಮಾಡಿ ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ಸುದೀಪ್ ರಿಗೆ ಟ್ಯಾಗ್ ಮಾಡಿದ್ದಾರೆ.

ಕಿಚ್ಚನ ಬತ್ತಳಿಕೆಯಲ್ಲಿವೆ ಇನ್ನಷ್ಟು ರೆಸಿಪಿ

ವೆಜ್ ಅಷ್ಟೇ ಅಲ್ಲದೇ ಕಿರಿಕ್ ಚಿಕ್ಕನ್ ಸ್ಟೈಲ್ ಅನ್ನೇ ಮತ್ತೊರ್ವ ಅಭಿಮಾನಿ ಮನೆಯಲ್ಲಿ ಮಾಡಿ ಸುದೀಪ್ ಗೆ ಫೋಟೋ ಕಳುಹಿಸಿದ್ದಾರೆ. ಇದಕ್ಕೆ ಕಿಚ್ಚ ಟ್ವಿಟ್ಟರ್ ಮೂಲಕ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ಹೀಗೆ ಇನ್ನೂ ಪ್ರತಿ ವಾರವೂ ಕಿಚ್ಚನ ಕಡೆಯಿಂದ ಸ್ಪೆಷಲ್ ಸ್ಪೆಷಲ್ ಅಡುಗೆಗಳು ಬರ್ತಾನೆ ಇರ್ತಾವೆ. ಅದನ್ನ ಅಭಿಮಾನಿಗಳು ಇನ್ಯಾವ ರೀತಿಯಲ್ಲಿ ಟ್ರೈ ಮಾಡ್ತಾರೆ ಅನ್ನೋದನ್ನ ಕುತೂಹಲ ಮೂಡಿಸಿದೆ.

ಆಲ್ ರೌಂಡರ್ ಕಿಚ್ಚನ ಕೈ ಅಡುಗೆ ಸೂಪರ್

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಅನ್ನೋ ಮಾತು ಕಿಚ್ಚನಿಗೆ ಸಖತ್ತಾಗಿ ಸೂಟ್ ಆಗುತ್ತೆ. ನಿರೂಪಣೆಯಲ್ಲಿ ಸೂಪರ್ ಎನ್ನಿಸಿಕೊಂಡಿರೋ ಕಿಚ್ಚ ಪ್ರತಿಯೊಬ್ಬ ಸ್ಪರ್ಧಿಗೂ ನ್ಯಾಯ ಸಲ್ಲುವಂತೆ ಮಾತನಾಡಿ ಎಂತದ್ದೇ ಮನಸ್ಥಾಪವಿದ್ದರು ಬಗೆ ಹರಿಸುತ್ತಾರೆ. ಕಿಚ್ಚನ ಕೈ ಅಡುಗೆ ತಿಂದವರು ಇಂದಿಗೂ ಕೂಡ ಮತ್ತೆ ಮತ್ತೆ ಕೈ ರುಚಿ ಸವಿಬೇಕು ಅಂತ ಕಾಯುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಕಿಚ್ಚ ಕುಕ್ಕಿಂಗ್ ನಲ್ಲಿ ಬೆಸ್ಟ್ . ಅದೇನೇ ಇರಲಿ ಸುದೀಪ್ ಏನೇ ಮಾಡಿದರು ಅದನ್ನ ಅಭಿಮಾನಿಗಳು ಫಾಲೋ ಮಾಡೋದಂತು ನಿಜ.

English summary
kiccha sudeep's kirik chicken was going to be femouse.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada