For Quick Alerts
  ALLOW NOTIFICATIONS  
  For Daily Alerts

  ಶಾಹೀದ್ ಕಪೂರ್ ಫ್ಯಾನ್ಸ್ ವಿರುದ್ಧ ದೇವರಕೊಂಡ ಫ್ಯಾನ್ಸ್ ಕೆಂಡಾಮಂಡಲ

  |

  ಬಾಲಿವುಡ್ ಸ್ಟಾರ್ ನಟ ಶಾಹೀದ್ ಕಪೂರ್ ಅಭಿನಯದ ಕಬೀರ್ ಸಿಂಗ್ ಟೀಸರ್ ಬಿಡುಗಡೆಯಾಗಿದ್ದು, ಬಿಟೌನ್ ನಲ್ಲಿ ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ. ತೆಲುಗು ನಟ ವಿಜಯ್ ದೇವರಕೊಂಡ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಅರ್ಜುನ್ ರೆಡ್ಡಿ'ಯ ಹಿಂದಿ ರೀಮೇಕ್ ಇದು.

  ಕಲ್ಟ್ ಸಂಸ್ಕೃತಿಯ ಚಿತ್ರಕಥೆ ಹೊಂದಿದ್ದ ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಬಿಟ್ಟರು. ಹತ್ತು ಹದಿನೈದು ವರ್ಷಗಳಲ್ಲಿ ಗಳಿಸಿದ ಜನಪ್ರಿಯತೆಯನ್ನ ದೇವರಕೊಂಡ ಒಂದೇ ಸಿನಿಮಾದಲ್ಲಿ ಪಡೆದುಕೊಂಡರು.

  ಅರ್ಜುನ್ ರೆಡ್ಡಿ ಮೀರಿಸುವಂತಿದೆ ಕಬೀರ್ ಸಿಂಗ್

  ಇಂತಹ ಚಿತ್ರ ಹಿಂದಿಯಲ್ಲಿ ರೀಮೇಕ್ ಆಗ್ತಿದೆ ಎಂದಾಗ ಈ ಪಾತ್ರವನ್ನ ದೇವರಕೊಂಡ ಮಾಡಿದಂತೆ ಯಾರೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದವರು ಹೆಚ್ಚು. ಇದೀಗ, ಕಬೀರ್ ಸಿಂಗ್ ಟೀಸರ್ ನಲ್ಲಿ ಶಾಹೀದ್ ಕಪೂರ್ ಲುಕ್ ನೋಡಿ ಚಿತ್ರಪ್ರೇಮಿಗಳು ದಂಗಾಗಿದ್ದಾರೆ. ಅದಕ್ಕೂ ಒಂದು ಹಂತ ಮುಂದೆ ಹೋಗಿ ದೇವರಕೊಂಡ ಮತ್ತು ಶಾಹೀದ್ ಕಪೂರ್ ಫ್ಯಾನ್ಸ್ ಕಿತ್ತಾಡುತ್ತಿದ್ದಾರೆ. ಏನಿದು ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ವಾಕ್ಸಮರ? ಮುಂದೆ ಓದಿ.....

  ರೌಡಿ ಫ್ಯಾನ್ಸ್ ಕೋಪಕ್ಕೆ ಗುರಿಯಾದ ಶಾಹೀದ್ ಹುಡುಗ್ರು

  ರೌಡಿ ಫ್ಯಾನ್ಸ್ ಕೋಪಕ್ಕೆ ಗುರಿಯಾದ ಶಾಹೀದ್ ಹುಡುಗ್ರು

  ಅರ್ಜುನ್ ರೆಡ್ಡಿ ಸಿನಿಮಾ ಹಿಂದಿಯಲ್ಲಿ ರೀಮೇಕ್ ಆಗ್ತಿದೆ ಎಂದು ಸುದ್ದಿ ಕೇಳಿ ವಿಜಯ್ ದೇವರಕೊಂಡ ಅಭಿಮಾನಿಗಳು ಸಂತಸಗೊಂಡಿದ್ದರು. ಆದ್ರೀಗ, ಶಾಹೀದ್ ಕಪೂರ್ ಅಭಿಮಾನಿಗಳು ''ವಿಜಯ್ ದೇವರಕೊಂಡಗೆ ನಮ್ಮ ಹೀರೋ ಅಷ್ಟು ಪ್ರತಿಭೆ ಇಲ್ಲ. ಮೂಲ ಸಿನಿಮಾಗಿಂತ ಕಬೀರ್ ಸಿಂಗ್ ಚೆನ್ನಾಗಿ ಬಂದಿದೆ' ಎಂದು ಕಾಮೆಂಟ್ ಮಾಡುವ ಮೂಲಕ ರೌಡಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ವಿಜಯ್ ದೇವರಕೊಂಡರನ್ನ ಮೀರಿಸುವತ್ತಾ ಆನಂದ್ ದೇವರಕೊಂಡ.!

  ಒಳ್ಳೆ ಸಿನಿಮಾನಾ ಹಾಳು ಮಾಡಿದ್ದಾರೆ

  ಒಳ್ಳೆ ಸಿನಿಮಾನಾ ಹಾಳು ಮಾಡಿದ್ದಾರೆ

  ಇನ್ನು ವಿಜಯ್ ದೇವರಕೊಂಡ ಅಭಿಮಾನಿಗಳು ಕಬೀರ್ ಸಿಂಗ್ ಟೀಸರ್ ಬಗ್ಗೆ ಕಾಮೆಂಟ್ ಮಾಡಿದ್ದು, 'ಅರ್ಜುನ್ ರೆಡ್ಡಿ ಚಿತ್ರವನ್ನ ಹಿಂದಿಯಲ್ಲಿ ರೀಮೇಕ್ ಮಾಡಿ, ಒಂದೊಳ್ಳೆ ಚಿತ್ರವನ್ನ ಹಾಳು ಮಾಡಿದ್ದಾರೆ. ಕಬೀರ್ ಸಿಂಗ್ ಟೀಸರ್ ನೋಡಿದೆ. ನನಗೆ ಸ್ವಲ್ಪವೂ ಇಷ್ಟವಾಗಿಲ್ಲ'' ಎಂದು ತಿರುಗೇಟು ನೀಡಿದ್ದಾರೆ.

  ವಿಜಯ್ ಲೆಜೆಂಡ್, ಶಾಹೀದ್....?

  ವಿಜಯ್ ಲೆಜೆಂಡ್, ಶಾಹೀದ್....?

  'ಒರಿಜಿನಲ್ ಸಿನಿಮಾ ಯಾವತ್ತಿದ್ದರೂ ಒರಿಜಿನಲ್ ಸಿನಿಮಾನೇ. ಅದು ಇದ್ದಂತೆ ಮಾಡಲು ಸಾಧ್ಯವಿಲ್ಲ. ಕಬೀರ್ ಸಿಂಗ್ ಸಿನಿಮಾ ಯಾವತ್ತು ಅರ್ಜುನ್ ರೆಡ್ಡಿ ಸ್ಥಾನಕ್ಕೆ ಬರಲು ಆಗಲ್ಲ. ವಿಜಯ್ ದೇವರಕೊಂಡ ಒಬ್ಬ ಲೆಜೆಂಡ್, ಶಾಹೀದ್.....? ಎಂದು ಕಾಲೆಳೆದಿದ್ದಾರೆ.

  ಮತ್ತೆ ಲಿಪ್ ಲಾಕ್: ಸಂಚಲನ ಸೃಷ್ಟಿಸಿದ ರಶ್ಮಿಕಾ-ವಿಜಯ್ 'ಡಿಯರ್ ಕಾಮ್ರೇಡ್'

  ರೊಚ್ಚಿಗೆದ್ದ ಶಾಹೀದ್ ಅಭಿಮಾನಿಗಳು

  ರೊಚ್ಚಿಗೆದ್ದ ಶಾಹೀದ್ ಅಭಿಮಾನಿಗಳು

  ವಿಜಯ್ ದೇವರಕೊಂಡ ಅಭಿಮಾನಿಗಳು ಶಾಹೀದ್ ಚಿತ್ರದ ಬಗ್ಗೆ ಕೀಳಾಗಿ ಮಾತನಾಡುವುದಕ್ಕೆ ಆರಂಭಿಸುತ್ತಿದ್ದಂತೆ, ಆ ಕಡೆಯಿಂದ ಶಾಹೀದ್ ಕಪೂರ್ ಫ್ಯಾನ್ಸ್ ಕೂಡ ಪ್ರತಿದಾಳಿ ಮಾಡಿದ್ದಾರೆ. ಅರ್ಜುನ್ ರೆಡ್ಡಿ ಚಿತ್ರಕ್ಕಿಂತ ಕಬೀರ್ ಸಿಂಗ್ ತುಂಬಾ ಚೆನ್ನಾಗಿದೆ ಎಂದು ಹೊಗಳುವ ಮೂಲಕ ತಿರುಗೇಟು ನೀಡಿದ್ದಾರೆ.

  'ಅರ್ಜುನ್ ರೆಡ್ಡಿ' ಅಪ್ಪನಂತಹ ಚಿತ್ರವನ್ನ ಉಪೇಂದ್ರ ಆಗಲೇ ಮಾಡಿದ್ರು: ತೆಲುಗು ನಿರ್ದೇಶಕ

  ನಿಮ್ಮ ಹೀರೋಗೆ ನಮ್ಮ ಹೀರೋ ಆಗೋಕೆ ಆಗಲ್ಲ

  ನಿಮ್ಮ ಹೀರೋಗೆ ನಮ್ಮ ಹೀರೋ ಆಗೋಕೆ ಆಗಲ್ಲ

  ಒರಿಜಿನಲ್ ಸಿನಿಮಾ ಯಾವತ್ತಿದ್ದರೂ ಒರಿಜಿನಲ್ ಸಿನಿಮಾ ಆಗಿಯೇ ಉಳಿಯುತ್ತೆ. ಆದ್ರೆ, ಶಾಹೀದ್ ಕಪೂರ್ ತನ್ನ ಪ್ರತಿಭೆಯನ್ನೆಲ್ಲಾ ಬಳಸಿಕೊಂಡು ಅದ್ಭುತವಾಗಿ ಮಾಡಿದ್ದಾರೆ. ಶಾಹೀದ್ ಕಪೂರ್ ಅಭಿನಯದ ಕಮಿನೆ, ಹೈದರ್, ಉಡ್ತಾ ಪಂಜಾಬ್ ಅಂತಹ ಸಿನಿಮಾ ರೀಮೇಕ್ ಮಾಡಿದ್ರೆ ಆ ಪಾತ್ರಗಳಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಇಲ್ಲಿಗೆ ಈ ವಾದವನ್ನ ಬಿಟ್ಟುಬಿಡಿ'' ಎಂದು ಟಾಂಗ್ ನೀಡಿದ್ದಾರೆ.

  English summary
  Shahid kapoor fans are saying, Kabir Singh is better than Arjun Reddy. so, now vijay devarakonda fans are angry on Shahid kapoor fans. kabir singh movie is remake of arjun reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X