For Quick Alerts
  ALLOW NOTIFICATIONS  
  For Daily Alerts

  ರುದ್ರಪ್ರಳಯ:ಸಂತ್ರಸ್ತರಿಗೆ ಮಾನವೀಯತೆ ಮೆರೆದ ಸೆಲೆಬ್ರಿಟಿಗಳು

  |

  ನೈಸರ್ಗಿಕ ಪ್ರಕೋಪವನ್ನು ತಡೆಯಲು ಯಾರಿಂದ ತಾನೇ ಸಾಧ್ಯ? ಸರಕಾರ ಎಷ್ಟೇ ಮುಂದೆ ಸಂಭವಿಸಬಹುದಾದ ವಿಕೋಪದಿಂದ ತಪ್ಪಿಸಲು ಮೂಲಭೂತ ಸೌಕರ್ಯದ ಬಗ್ಗೆ ಮುಂಜಾಗರೂಕತೆ ಕ್ರಮ ಕೈಗೊಂಡರೂ ವಿಧಿಬರಹ ಅನ್ನೋದು ಇನ್ನೇನೋ ಇರುತ್ತದೆ.

  ಹಿಮಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ರುದ್ರಪ್ರಳಯ ವರ್ಷಧಾರೆ, ಗಂಗೆ ಮತ್ತು ಆಕೆಯ ಉಪನದಿ ಉಕ್ಕಿ ಹರಿದು ಸಾವಿರಾರು ಜನರ ಬಾಳು ನೀರಿನಲ್ಲಿ ಕೊಚ್ಚಿ ಹೋಗಿದ್ದು ನಾವು ಕಂಡ ಪ್ರಕೃತಿಯ ಅಟ್ಟಹಾಸ.

  ನೈಸರ್ಗಿಕ ಪ್ರಕೋಪ ಸಂಭವಿಸಿದಾಗ ದುಡ್ಡು ಇದ್ದವರೂ ಮತ್ತು ಇಲ್ಲದವರೂ ಸಂತ್ರಸ್ತರಿಗೆ ತಮ್ಮ ಕೈಲಾದ ಮಟ್ಟಿಗೆ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆಯುವುದು ನಾವೆಲ್ಲಾ ಕಂಡಿದ್ದೇವೆ, ನೋಡಿದ್ದೇವೆ. ಸಂತ್ರಸ್ತರಿಗಾಗಿ ಸಂಗ್ರಹಿಸಿದ ದುಡ್ಡಿನ ಮೇಲೂ ಕಣ್ಣು ಹಾಕುವವರನ್ನು ಕಂಡಿದ್ದೇವೆ.

  ಉತ್ತರಾಖಂಡದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಸೆಲೆಬ್ರಿಟಿ ಜಗತ್ತಿನಿಂದ ಹರಿದು ಬಂದ ದೇಣಿಗೆ ಏನು? ಯಾರ್ಯಾರು ಎಷ್ಟು ದೇಣಿಗೆ ನೀಡಿದರು? ಸ್ಲೈಡಿನಲ್ಲಿ..

  ಶತ್ರುಘ್ನ ಸಿನ್ಹಾ

  ಶತ್ರುಘ್ನ ಸಿನ್ಹಾ

  ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿರುವ ಬಾಲಿವುಡ್ ನಟ ಶಾಟ್ ಗನ್ ಶತ್ರುಘ್ನ ಸಿನ್ಹಾ ಐವತ್ತು ಲಕ್ಷ ರೂಪಾಯಿ ಹಣವನ್ನು ಪ್ರಧಾನಿ ರಾಷ್ಟ್ರೀಯ ವಿಕೋಪ ನಿಧಿಗೆ ನೀಡಿದ್ದಾರೆ.

  ಜಾವೇದ್ ಅಖ್ತರ್

  ಜಾವೇದ್ ಅಖ್ತರ್

  ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್ ಕೂಡಾ ಐವತ್ತು ಲಕ್ಷ ರೂಪಾಯಿ ನೀಡಿದ್ದಾರೆ. ಅಲ್ಲದೇ ಇವರ ಪತ್ನಿ ಶಬನಾ ಆಜ್ಮಿ ನಿಧಿಗೆ ಹಣ ಸಂಗ್ರಹಿಸುತ್ತಿದ್ದಾರೆ. ಸಂಸದರ LAD Fund ಮೂಲಕ ಅಖ್ತರ್ ಮತ್ತು ಶತ್ರುಘ್ನ ಸಿನ್ಹಾ ಈ ದೇಣಿಗೆ ನೀಡಿದ್ದಾರೆ.

  ಅಮೀರ್ ಖಾನ್

  ಅಮೀರ್ ಖಾನ್

  ಮಿಸ್ಟರ್ perfectionist ಅಮೀರ್ ಖಾನ್ ಇಪ್ಪತ್ತೈದು ಲಕ್ಷ ರೂಪಾಯಿ ನೀಡಿದ್ದಾರೆ. ಈ ಹಣವನ್ನು ಅಮೀರ್ ಖಾನ್, ಅಖ್ತರ್ ಮೂಲಕ ಪರಿಹಾರ ನಿಧಿಗೆ ಸಲ್ಲಿಸಿದ್ದಾರೆ.

  ಸೂರ್ಯ

  ಸೂರ್ಯ

  ಖ್ಯಾತ ತಮಿಳು ನಟ ಸೂರ್ಯ ತಮ್ಮದೇ ಆದ ಅಗರಂ ಫೌಂಡೇಷನ್ ಮೂಲಕ ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

  ಕಾರ್ತಿ

  ಕಾರ್ತಿ

  ಮತ್ತೊಬ್ಬ ಖ್ಯಾತ ತಮಿಳು ನಟ ಮತ್ತು ಸೂರ್ಯ ಸಹೋದರ ಕಾರ್ತಿ ಶಿವಕುಮಾರ್ ಕೂಡಾ ಅಗರಂ ಫೌಂಡೇಷನ್ ಮೂಲಕ ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

  ಪವನ್ ಕಲ್ಯಾಣ್

  ಪವನ್ ಕಲ್ಯಾಣ್

  ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗಾಗಿ 24 ಲಕ್ಷ ರೂಪಾಯಿ ನೀಡಿದ್ದಾರೆ. ಅಲ್ಲದೇ, ತೆಲುಗು ಚಿತ್ರದ್ಯೋಮದವರಿಗೆ ನೆರವು ನೀಡುವಂತೆ ಕೋರಿದ್ದಾರೆ.

  ಅನುಪಮ್ ಖೇರ್

  ಅನುಪಮ್ ಖೇರ್

  ಖ್ಯಾತ ಖಳ ಮತ್ತು ಪೋಷಕ ನಟ ಅನುಪಮ್ ಖೇರ್ ಪರಿಹಾರ ನಿಧಿಗೆ 1,11,000/- ರೂಪಾಯಿ ದೇಣಿಗೆಯನ್ನು NGO ಮೂಲಕ ನೀಡಿದ್ದಾರೆ.

  ಅಮಿತಾಬ್ ಬಚ್ಚನ್

  ಅಮಿತಾಬ್ ಬಚ್ಚನ್

  ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹನ್ನೊಂದು ಲಕ್ಷ ನೀಡಿದ್ದಾರೆ.

  ರಾಮ್ ಚರಣ್ ತೇಜಾ

  ರಾಮ್ ಚರಣ್ ತೇಜಾ

  ಖ್ಯಾತ ತೆಲುಗು ನಟ, ಕೇಂದ್ರ ಸಚಿವ ಚಿರಂಜೀವಿ ಪುತ್ರಡು ರಾಮ್ ಚರಣ್ ತೇಜಾ ಪರಿಹಾರ ನಿಧಿಗೆ ಹತ್ತು ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಚಿರಂಜೀವಿ ಮೂಲಕ ಹಸ್ತಾಂತರಿಸಿದ್ದಾರೆ.

  ಅಲ್ಲು ಅರ್ಜುನ್

  ಅಲ್ಲು ಅರ್ಜುನ್

  ಮತ್ತೊಬ್ಬ ತೆಲುಗು ನಟ ಅಲ್ಲು ಅರ್ಜುನ್ ಕೂಡಾ ಪರಿಹಾರ ನಿಧಿಗೆ ಹತ್ತು ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಚಿರಂಜೀವಿ ಮೂಲಕ ಹಸ್ತಾಂತರಿಸಿದ್ದಾರೆ.

  ಮಹೇಶ್ ಬಾಬು

  ಮಹೇಶ್ ಬಾಬು

  ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಪರಿಹಾರ ನಿಧಿಗೆ ಐವತ್ತು ಲಕ್ಷ ರೂಪಾಯಿ ನೀಡಿದ್ದಾರೆಂದು ವರದಿಯಾಗಿದೆ. ಆದರೆ ದೇಣಿಗೆ ನೀಡುವ ಮೊತ್ತವನ್ನು ಬಹಿರಂಗವಾಗುವುದನ್ನು ಮಹೇಶ್ ಬಾಬು ಬಯಸದೇ ಇರುವುದರಿಂದ ಇದು ಸದ್ಯಕ್ಕೆ ಅನಧಿಕೃತವಾಗಿದೆ.

  ರೂಮರ್

  ರೂಮರ್

  ಬಾಲಿವುಡ್ ಬಾದಶಾ ಶಾರೂಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಕೂಡಾ ಸಂತ್ರಸ್ತರಿಗೆ ಕೋಟಿ ಲೆಕ್ಕದಲ್ಲಿ ದೇಣಿಗೆ ನೀಡಿದ್ದಾರೆಂದು ಸುದ್ದಿ ಹರಡಿತ್ತು. ಶಾರೂಖ್ ಹತ್ತು ಕೋಟಿ ಮತ್ತು ಅಕ್ಷಯ್ ಕುಮಾರ್ ಇಪ್ಪತ್ತು ಕೋಟಿ ನೀಡಿದ್ದಾರೆಂದು ರೂಮರ್ ಹರಡಿತ್ತು. ಹಾಗೂ ತೆಲುಗು ನಟ ಜ್ಯೂನಿಯರ್ ಎನ್ ಟಿಆರ್ ಮತ್ತು ಬಾಲಕೃಷ್ಣ ಕೂಡಾ ದೇಣಿಗೆ ನೀಡಿದ್ದಾರೆನ್ನುವ ಸುದ್ದಿ ಹರಡಿದೆ.

  English summary
  Some of the celebrities of Bollywood and South Film industries reaches out Uttarakhand flood victims. The prominent celebrities donation amount listed out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X