For Quick Alerts
  ALLOW NOTIFICATIONS  
  For Daily Alerts

  ಸಿದ್ಧಗಂಗಾ ಮಠಕ್ಕೆ 5 ಲಕ್ಷ ನೀಡಿದ ಚಲನಚಿತ್ರ ವಾಣಿಜ್ಯ ಮಂಡಳಿ

  |

  ತ್ರಿವಿಧ ದಾಸೋಹಕ್ಕೆ ಹೆಸರುವಾಸಿ ತುಮಕೂರಿನ ಸಿದ್ಧಗಂಗ ಮಠ. ಕೋಟ್ಯಾಂತರ ಮಕ್ಕಳಿಗೆ ಅನ್ನ, ಅಕ್ಷರ, ಜ್ಞಾನವನ್ನ ನೀಡುತ್ತಿರುವ ಈ ಮಠ ಜಗತ್ತಿನಲ್ಲೇ ವಿಶೇಷ ಸ್ಥಾನವನ್ನ ಹೊಂದಿದೆ. ಡಾ ಶಿವಕುಮಾರಸ್ವಾಮೀಜಿ ನಿಧನದ ನಂತರ ಅನೇಕ ಮಂದಿ ಸಿದ್ಧಗಂಗಾ ಮಠಕ್ಕೆ ಹಲವು ರೀತಿ ನೆರವು ನೀಡುತ್ತಿದ್ದಾರೆ.

  ಇದೀಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ, ಪದಾದಿಕಾರಿ ಹಾಗೂ ಸದಸ್ಯರು ಸಿದ್ಧಗಂಗೆಯ ಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ.

  ಸಿದ್ಧಗಂಗಾ ಮಠದ ಮಹತ್ವದ ಕೆಲಸಕ್ಕೆ ಜೊತೆಯಾದ 'ಯಜಮಾನ'

  ಸಿದ್ಧಗಂಗೆಯ ಶ್ರೀಗಳಾದ ಸಿದ್ಧಲಿಂಗ ಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಚೇಂಬರ್ ಸದಸ್ಯರು ಮಠದ ಅನ್ನದಾಸೋಹಕ್ಕೆ 5 ಲಕ್ಷ ರೂ. ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.

  'ದೊಡ್ಮನೆ' ನಟರ ಮೇಲಿತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ

  ಈ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಚೇಂಬರ್ ನ ಪದಾಧಿಕಾರಿಗಳಾದ ಕೆ.ಎಂ.ವೀರೇಶ್, ಭಾಮಾ ಹರೀಶ್, ಕರಿಸುಬ್ಬು, ಕೆ.ವಿ.ಚಂದ್ರಶೇಖರ್, ಜಯರಾಜ್, ಎನ್.ಎಂ.ಸುರೇಶ್ ಕೂಡ ಭಾಗಿಯಾಗಿದ್ದರು.

  English summary
  Karnataka film chamber donates 5 kakhs to siddaganga Mutt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X