For Quick Alerts
  ALLOW NOTIFICATIONS  
  For Daily Alerts

  Breaking News: ಮೇಕೆದಾಟು ಪಾದಯಾತ್ರೆಗೆ ಕನ್ನಡ ಚಿತ್ರರಂಗ ಸಾಥ್, ಯಾವುದೇ ಪಕ್ಷಕ್ಕೆ ಬೆಂಬಲವಿಲ್ಲ

  |

  ಮೇಕೆದಾಟು ಯೋಜನೆಗೆ ಜಾರಿಗೆ ತರಲೇಬೇಕೆಂದು ಕಾಂಗ್ರೆಸ್ ಪಕ್ಷ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಈ ಪಾದಯಾತ್ರೆಗೆ ಈಗಾಗಲೇ ಭರ್ಜರಿ ಸಿದ್ದತೆಗಳನ್ನು ಮಾಡಿಕೊಂಡಿದೆ. ಕಾಂಗ್ರೆಸ್‌ ಪಕ್ಷದ ಮುಖಂಡರು ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮದಲ್ಲಿ ಬೃಹತ್‌ ವೇದಿಕೆಯನ್ನು ನಿರ್ಮಾಣ ಮಾಡಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಸೇರಿಸಿ ಪಾದಯಾತ್ರೆ ಮಾಡುವುದು ಎಷ್ಟು ಸರಿ ಎಂಬ ಮಾತು ಕೂಡ ಕೇಳಿಬರುತ್ತಿದೆ.

  ಪಾದಯಾತ್ರೆ ನೇತೃತ್ವ ವಹಿಸಿಕೊಂಡಿರುವ ಡಿಕೆ ಶಿವಕುಮಾರ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯತ್ವವನ್ನೂ ಪಡೆದಿದು, ಮೇಕೆದಾಟು ಪಾದಯಾತ್ರೆಗೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನೀರಿಗಾಗಿ ಪಾದಯಾತ್ರೆ ಮಾಡಲು ಮುಂದಾಗಿದೆ.

  ಮೇಕೆದಾಟು ಪಾದಯಾತ್ರೆಗೆ ಸಜ್ಜಾದ ಕನ್ನಡ ಚಿತ್ರರಂಗ

  ಕನ್ನಡ ಭಾಷೆ, ನೆಲ, ಜಲ ಅನ್ನುವ ವಿಷಯ ಬಂದಾಗ ಕನ್ನಡ ಚಿತ್ರರಂಗ ಹೋರಾಟಕ್ಕೆ ಇಳಿದು ಬೆಂಬಲ ನೀಡಿದೆ. ಅಂತಯೇ ಈ ಬಾರಿ ಕೂಡ ಮೇಕೆದಾಟು ಪಾದಯಾತ್ರೆ ಬೆಂಬಲ ಸೂಚಿಸಿದೆ. ಆದರೆ, ತನ್ನದೇ ಶೈಲಿಯಲ್ಲಿ ಪಾದಯಾತ್ರೆ ಮಾಡುವುದಕ್ಕೆ ಮುಂದಾಗಿದೆ. "ಅಣ್ಣಾವ್ರ ಕಾಲದಿಂದಲೂ ಕನ್ನಡ, ನೆಲ, ಜಲದ ಬಗ್ಗೆ ಎದ್ದಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸುತ್ತಲೇ ಬರುತ್ತಿದೆ. ಈ ಬಾರಿ ಕೂಡ ಇದು ನೀರಿನ ಪ್ರಶ್ನೆಯಾಗಿರುವುದರಿಂದ ಫಿಲ್ಮ್ ಚೇಂ‍ಬರ್ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಲಿದೆ." ಎಂದು ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎಂ.ಎನ್ ಸುರೇಶ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

  ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಿಲ್ಲ

  ಮೇಕೆದಾಟು ಪಾದಯಾತ್ರೆಯನ್ನು ಫಿಲ್ಮ್ ಚೇಂಬರ್ ಸ್ವಾತಂತ್ರ್ಯವಾಗಿ ನಡೆಸಲು ಮುಂದಾಗಿದೆ. "ಕಾಂಗ್ರೆಸ್ ಪಕ್ಷ ಪಾದಯಾತ್ರೆಗೆ ಆಹ್ವಾನ ನೀಡಿದ್ದರೂ, ನಾವು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ಕನ್ನಡ ಚಿತ್ರರಂಗ ನೆಲ, ಜಲದ ಹೋರಾಟಕ್ಕೆ ಸದಾ ಮುಂದಿರಲಿದೆ. ಹೀಗಾಗಿ ಕನ್ನಡ ಚಿತ್ರರಂಗ ಸ್ವಾತಂತ್ರ್ಯವಾಗಿ ಪಾದಯಾತ್ರೆ ಮಾಡಲಿದೆ. ಚಿತ್ರರಂಗಕ್ಕೆ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡುತ್ತೆವೆ. ಯಾರ ಮೇಲೂ ಒತ್ತಡ ಹೇರುವುದಿಲ್ಲ." ಎಂದು ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎಂ.ಎನ್ ಸುರೇಶ್ ತಿಳಿಸಿದ್ದಾರೆ.

  Film chamber will support Mekedatu Padayathra but not with political party

  ಮೇಕೆದಾಟು ಪಾದಯಾತ್ರೆ ಬಗ್ಗೆ ಮಾಹಿತಿ ನೀಡಲು ಫಿಲ್ಮ್ ಚೇಂಬರ್ ನಾಳೆ (ಜನವರಿ 6) ಪತ್ರಿಕಾಗೋಷ್ಠಿಯನ್ನು ಕರೆದಿದೆ. ಜಯಮಾಲಾ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಚಿತ್ರರಂಗ ಗಣ್ಯರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಅಗತ್ಯ ಮಾಹಿತಿಯನ್ನು ನೀಡಲಿದ್ದಾರೆ.

  ಡಿಸೆಂಬರ್ 30ರಂದು ಫಿಲ್ಮ್ ಚೇಂಬರ್‌ಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್ ಕನ್ನಡ ಚಿತ್ರರಂಗದ ಬೆಂಬಲ ಕೋರಿದ್ದರು. " ಕನ್ನಡ ಚಿತ್ರರಂಗಕ್ಕೆ ವಾಣಿಜ್ಯ ಮಂಡಳಿ ಬೇರು ಇದ್ದಂತೆ. ಕಲಾವಿದರು, ನಿರ್ಮಾಪಕರು, ಪ್ರದರ್ಶಕರು ಎಲ್ಲರೂ ಇಲ್ಲಿಗೆ ಬಂದು ನ್ಯಾಯ ಕೇಳುತ್ತಾರೆ. ಸುದೀಪ್​, ಶಿವರಾಜ್​ಕುಮಾರ್​, ಯಶ್​, ದರ್ಶನ್​ ಎಲ್ಲರಿಗೂ ವಾಣಿಜ್ಯ ಮಂಡಳಿ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಯಾರಿಗೂ ಬಲವಂತ ಮಾಡುವುದಿಲ್ಲ." ಎಂದು ಡಿಕೆ ಶಿವಕುಮಾರ್​ ಹೇಳಿದ್ದರು.

  English summary
  Film chamber will support Mekedatu Padayathra but not with a political party. Film Chamber will separately do padayathra says film chamber seceratry M N Suresh.
  Friday, January 7, 2022, 9:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X