twitter
    For Quick Alerts
    ALLOW NOTIFICATIONS  
    For Daily Alerts

    ದ್ವೇಷ ರಾಜಕಾರಣಕ್ಕೆ ಬಲಿಯಾಗುತ್ತಿದ್ಯಾ ಫಿಲಂಸಿಟಿ ಕನಸು?

    |

    Recommended Video

    ದ್ವೇಷ ರಾಜಕಾರಣಕ್ಕೆ ಬಲಿಯಾಗುತ್ತಿದ್ಯಾ ಫಿಲಂಸಿಟಿ ಕನಸು? | FILMIBEAT KANNADA

    ಕರ್ನಾಟಕದಲ್ಲಿ ಫಿಲಂ ಸಿಟಿ ನಿರ್ಮಿಸಬೇಕು ಎನ್ನುವುದು ಅನೇಕರ ಕನಸು. ಡಾ ರಾಜ್, ಡಾ ವಿಷ್ಣು, ಶಂಕರ್ ನಾಗ್, ರವಿಚಂದ್ರನ್, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಅನೇಕ ಸಿನಿಮಾ ಕಲಾವಿದರು 'ನಮ್ಮಲ್ಲೂ ಒಂದು ಫಿಲಂ ಸಿಟಿ ಆಗಲಿ' ಎಂಬ ಕನಸು ಹೊಂದಿದ್ದರು. ಇದಕ್ಕೆ ರಾಜಕಾರಣಿಗಳು ಕೂಡ ಬೆಂಬಲ ನೀಡಿದ್ದರು.

    ಆದರೆ, ವರ್ಷಗಳು ಉರುಳುತ್ತಿದೆ, ಸರ್ಕಾರಗಳು ಬದಲಾಗುತ್ತಿದೆ, ಜಾಗವೂ ಬದಲಾಗುತ್ತಿದೆ ಹೊರತು ಫಿಲಂ ಸಿಟಿ ನಿರ್ಮಾಣ ಕೆಲಸ ಮಾತ್ರ ಆರಂಭವಾಗಿಲ್ಲ. ಇದು ಸಹಜವಾಗಿ ಚಿತ್ರರಂಗಕ್ಕೆ ಹಾಗೂ ಚಿತ್ರಾಭಿಮಾನಿಗಳಿಗೆ ಬೇಸರ ತಂದಿದೆ.

    ರಾಮೋಜಿ ಫಿಲ್ಮ್ ಸಿಟಿಗೆ ಹೋಗುವುದು 'ಶಾಪ'ವೆಂದ ಕುರುಕ್ಷೇತ್ರದ ಕೌರವ ದರ್ಶನ್ರಾಮೋಜಿ ಫಿಲ್ಮ್ ಸಿಟಿಗೆ ಹೋಗುವುದು 'ಶಾಪ'ವೆಂದ ಕುರುಕ್ಷೇತ್ರದ ಕೌರವ ದರ್ಶನ್

    ಈ ಬಗ್ಗೆ ಕುಮಾರಸ್ವಾಮಿ ಸರ್ಕಾರ ಒಂದು ನಿರ್ಧಾರ ಮಾಡಿದ್ರೆ, ಯಡಿಯೂರಪ್ಪ ಸರ್ಕಾರ ಇನ್ನೊಂದು ನಿರ್ಧಾರ ಮಾಡುತ್ತಿದೆ ಎಂಬ ಆರೋಪ ಬಂದಿದೆ. ಈ ಬಗ್ಗೆ ಸಿಟಿ ರವಿ ಕೂಡ ಪ್ರತಿಕ್ರಿಯಿಸಿದ್ದಾರೆ. ಏನಿದು ಫಿಲಂ ಸಿಟಿ ವಿವಾದ? ಮುಂದೆ ಓದಿ....

    ರಾಮನಗರದಿಂದ ಕನಕಪುರಕ್ಕೆ ಫಿಲಂಸಿಟಿ ಶಿಫ್ಟ್.!

    ರಾಮನಗರದಿಂದ ಕನಕಪುರಕ್ಕೆ ಫಿಲಂಸಿಟಿ ಶಿಫ್ಟ್.!

    ಬೆಂಗಳೂರಿನ ಹೆಸರಘಟ್ಟ, ಮೈಸೂರು, ಬಳಿಕ ರಾಮನಗರದಲ್ಲಿ ಫಿಲಂ ಸಿಟಿಗೆ ಸ್ಥಳ ನಿಗದಿ ಮಾಡಲಾಯಿತು. ರಾಮನಗರದಲ್ಲಿ ಫಿಲಂಸಿಟಿ ನಿರ್ಮಿಸಲಾಗುತ್ತೆ ಎಂದು ಎಚ್ ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಘೋಷಿಸಿದ್ದರು. ಆದ್ರೀಗ, ಬಿಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ರಾಮನಗರದಿಂದ ಕನಕಪುರಕ್ಕೆ ಫಿಲಂ ಸಿಟಿ ಸ್ಥಳಾಂತರವಾಗಲಿದೆ ಎಂಬ ಮಾತು ಕೇಳಿ ಬಂದಿದೆ. ಈ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಎಚ್ ಡಿ ಕುಮಾರಸ್ವಾಮಿ ವಿರೋಧ

    ಎಚ್ ಡಿ ಕುಮಾರಸ್ವಾಮಿ ವಿರೋಧ

    ಫಿಲಂಸಿಟಿ ಸ್ಥಳಾಂತರದ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ''ಜೀವ ವೈವಿಧ್ಯ ತಾಣ ರೋರಿಚ್ ಎಸ್ಟೇಟಿನಲ್ಲಿ ಫಿಲಂ ಸಿಟಿ ನಿರ್ಮಿಸುವುದು ಮಾನ್ಯ @BSYBJP ಅವರ ದ್ವೇಷ-ನಾಶ ರಾಜಕಾರಣದ ಪ್ರತೀಕ. ಫಿಲಂ ಸಿಟಿಯನ್ನು ರಾಮನಗರದಲ್ಲಿ ಕಟ್ಟಬೇಕೆಂದು ನನ್ನ ಸರ್ಕಾರದಲ್ಲಿ ತೀರ್ಮಾನಿಸಲಾಗಿತ್ತು. ಈ ಮೂಲಕ ರಾಮನಗರ, ಬೆಂಗಳೂರು, ಬೆಂ.ಗ್ರಾಮಾಂತರ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಯೋಜನೆಯ ಉದ್ದೇಶಗಳ್ಲೊಂದು'' ಎಂದಿದ್ದಾರೆ.

    ಚಿತ್ರರಂಗಕ್ಕೆ 500 ಕೋಟಿ ರು. ವೆಚ್ಚದ ಫಿಲಂ ಸಿಟಿ

    ಬಿಎಸ್ ಯಡಿಯೂರಪ್ಪರಿಂದ ದ್ವೇಷರಾಜಕಾರಣ

    ಬಿಎಸ್ ಯಡಿಯೂರಪ್ಪರಿಂದ ದ್ವೇಷರಾಜಕಾರಣ

    ''ಫಿಲಂಸಿಟಿಯನ್ನು ಸ್ಥಳಾಂತರಿಸುವ ನಿರ್ಧಾರದ ಮೂಲಕ ಬಿಎಸ್ವೈ ರಾಮನಗರದ ವಿಚಾರದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಅತಿಕ್ರಮಣಕ್ಕೆ ತುತ್ತಾಗದೇ ಜೀವ ವೈವಿಧ್ಯ ಉಳಿಸಿಕೊಂಡಿರುವ ತಾಣ ರೋರಿಚ್ ಎಸ್ಟೇಟ್. ಇದು ಫಿಲಂ ಸಿಟಿಗೆ ಸೂಕ್ತವಲ್ಲ. ಹಾಗೇನಾದರೂ ಇಲ್ಲಿ ಫಿಲಂ ಸಿಟಿ ಕಟ್ಟಿದರೆ ಪರಿಸರ ನಾಶದ ಜತೆಗೇ ಮಾನವ-ವನ್ಯ ಮೃಗಗಳ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತೆ'' ಎಂದು ಖಂಡಿಸಿದ್ದಾರೆ.

    ಎಚ್.ಡಿ ಕೆ ಟ್ವೀಟ್ ಗೆ ಸಿಟಿ ರವಿ ಟಾಂಗ್

    ಎಚ್.ಡಿ ಕೆ ಟ್ವೀಟ್ ಗೆ ಸಿಟಿ ರವಿ ಟಾಂಗ್

    ''ಕನಕಪುರ ಮತ್ತು ರಾಮನಗರ ಒಂದೇ ಜಿಲ್ಲೆ, ತಾಲೂಕು ಬೇರೆ ಅಷ್ಟೆ. ಎಚ್ ಡಿ ಕುಮಾರಸ್ವಾಮಿ ಅವರು ರಾಮನಗರ ತಾಲೂಕಿನ ನಾಯಕರಲ್ಲ, ರಾಮನಗರಕ್ಕೆ ಮಾತ್ರ ನಾಯಕರು ಅಂದ್ರೆ ರಾಮನಗರದ ಬಗ್ಗೆ ಮಾತ್ರ ಯೋಚನೆ ಮಾಡ್ತಾರೆ ಅಥವಾ ರಾಜ್ಯದ ನಾಯಕರಾಗಿದರೆ ರಾಜ್ಯದ ಬಗ್ಗೆ ಯೋಚನೆ ಮಾಡ್ತಾರೆ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಹೆಸರುಘಟ್ಟದಲ್ಲಿ ಫಿಲಂಸಿಟಿ ಸ್ಥಾಪನೆಗೆ ಗ್ರೀನ್ ಸಿಗ್ನಲ್ಹೆಸರುಘಟ್ಟದಲ್ಲಿ ಫಿಲಂಸಿಟಿ ಸ್ಥಾಪನೆಗೆ ಗ್ರೀನ್ ಸಿಗ್ನಲ್

    ಇನ್ನೆಷ್ಟು ದಿನ ಬೇಕಾಗಬಹುದು?

    ಇನ್ನೆಷ್ಟು ದಿನ ಬೇಕಾಗಬಹುದು?

    ನಿರೀಕ್ಷೆಯಂತೆ ಮಾಡಿದ್ದರೆ ಇಷ್ಟೊತ್ತಿಗಾಗಲೇ ಫಿಲಂ ಸಿಟಿ ಕೆಲಸ ಒಂದು ಹಂತಕ್ಕೆ ಮುಗಿಯಬೇಕಿತ್ತು. ಆದರೆ, ಇನ್ನು ಜಾಗ ಕೊಡುವುದರಲ್ಲೆ ಸಮಯ ಕಳೆಯುತ್ತಿದೆ. ಈ ಸರ್ಕಾರ ಬಂದಾಗ ಒಂದು ಜಾಗ, ಇನ್ನೊಂದು ಸರ್ಕಾರ ಬಂದಾಗ ಇನ್ನೊಂದು ಜಾಗ ಬದಲಾಗುತ್ತಿದೆ ಹೊರತು, ಶಂಕು ಸ್ಥಾಪನೆ ಮಾಡಿ ಕೆಲಸ ಆರಂಭವಾಗುತ್ತಲೇ ಇಲ್ಲ. ಇದೇ ಕಾರಣಕ್ಕೆ ಹೇಳುತ್ತಿರುವುದು ಫಿಲಂಸಿಟಿ ದ್ವೇಷರಾಜಕಾರಣಕ್ಕೆ ಬಲಿಯಾಗುತ್ತಿದೆ ಎಂದು.

    English summary
    Bjp Government has Decided To Shift Film City Plan From Ramanagara to Kanakapura.
    Thursday, September 19, 2019, 13:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X